ಕೇಂದ್ರದಲ್ಲಿ ಭಾಜಪದ ಸರಕಾರ ಇರುವಾಗ ಜಮ್ಮು-ಕಾಶ್ಮೀರ, ಉತ್ತರಪ್ರದೇಶ, ಬಂಗಾಲ, ಕೇರಳ, ತಮಿಳುನಾಡು ಇತ್ಯಾದಿ ರಾಜ್ಯಗಳಲ್ಲಿ ಭಾಜಪದ ನಾಯಕರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ಕೃಷ್ಣಗಿರಿ(ತಮಿಳುನಾಡು) – ಅಜ್ಞಾತರು ಕೆಲಮಂಗಲಮ್‌ನಲ್ಲಿ ಭಾಜಪದ ಯುವ ಶಾಖೆಯ ೩೫ ವರ್ಷದ ನಾಯಕ ರಂಗನಾಥನ್ ಇವರನ್ನು ಹತ್ಯೆಗೈದಿದ್ದಾರೆ. ರಂಗನಾಥನ್ ಇತ್ತೀಚೆಗೆ ಅಣ್ಣಾದ್ರಮುಕ್ ಪಕ್ಷವನ್ನು ಬಿಟ್ಟು ಭಾಜಪಗೆ ಸೇರಿದ್ದರು.
೧. ರಂಗನಾಥನ್ ಇವರ ಮನೆಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿರುವಾಗ ಕೆಲವರು ಮನೆಯೊಳಗೆ ನುಗ್ಗಿದರು ಹಾಗೂ ಅವರೊಂದಿಗೆ ಜಗಳವಾಡಲಾರಂಭಿಸಿದರು. ಈ ಸಮಯದಲ್ಲಿ ರಂಗನಾಥನ್ ಅಲ್ಲಿಂದ ಓಡಿ ಹೊರಗೆ ಬಂದಾಗ ಹಂತಕರು ಅವರನ್ನು ಹಿಂಬಾಲಿಸಿ ಅವರ ಮೇಲೆ ಕೊಡಲಿಯಿಂದ ಹಾಗೂ ಮಾರಣಾಂತಿಕ ಶಸ್ತ್ರಗಳಿಂದ ದಾಳಿ ಮಾಡಿ ಅವರ ಹತ್ಯೆ ಮಾಡಿ ಪರಾರಿಯಾದರು.
Tamil Nadu: Dalit BJP leader murdered while celebrating son’s birthday, nine arrestedhttps://t.co/UemQScgTGo
— OpIndia.com (@OpIndia_com) September 17, 2020
೨. ಈ ಘಟನೆಯ ನಂತರ ಗ್ರಾಮಸ್ಥರು ಆಕ್ರೋಶಗೊಂಡು ‘ರಸ್ತೆ ತಡೆ’ ಆಂದೋಲನವನ್ನು ಮಾಡಿದರು ಹಾಗೂ ಆರೋಪಿಗಳನ್ನು ಬಂಧಿಸುವ ತನಕ ಮೃತದೇಹದ ಅಂತಿಮಂಸಂಸ್ಕಾರ ಮಾಡಲು ನಿರಾಕರಿಸಿದರು. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಜನರನ್ನು ಬಂಧಿಸಿದ್ದಾರೆ.