ಮಹಮ್ಮದ ಮುನಾಸಿರ ಮತ್ತು ಮಹಿಳೆ ಹಾಗೂ ಆಕೆಯ ಸಂಬಂಧಿಕರನ್ನು ಬಂಧಿಸಿದ ಪೊಲೀಸರು
|
ಕೊಡಗು – ಇಲ್ಲಿಯ ಮಡಿಕೇರಿಯಲ್ಲಿನ ಹಿಂದೂ ಮಹಿಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರ್‌ನನ್ನು ಆ ಮಹಿಳೆ ಹಾಗೂ ಆಕೆಯ ಸಂಬಂಧಿಕರು ಥಳಿಸಿದರು. ಪೊಲೀಸರು ಮಹಮ್ಮದ ಮುನಾಸಿರನನ್ನು ಬಂಧಿಸಿದ್ದಾರೆ. ಅದೇರೀತಿ ಮಹಮ್ಮದ ಮುನಾಸಿರಗೆ ಥಳಿಸಿದ ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ೪ ಸಂಬಂಧಿಕರನ್ನು ಸಹ ಬಂಧಿಸಿದ್ದಾರೆ.
ಮಹಮ್ಮದ ಮುನಾಸಿರ್ ಅನೇಕ ದಿನಗಳಿಂದ ಈ ಮಹಿಳೆಗೆ ಇಂತಹ ಸಂದೇಶಗಳನ್ನು ಕಳುಹಿಸುತ್ತಿದ್ದ. ಆದ್ದರಿಂದ ಮಹಿಳೆಯು ನೊಂದುಹೋಗಿದ್ದಳು. ಅದಕ್ಕಾಗಿ ಆಕೆ ಮಹಮ್ಮದ ಮುನಾಸಿರಗೆ ಸವಿ ಮಾತುಗಳಿಂದ ಅಲ್ಲಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಬಳಿ ಕರೆದಳು. ಅಲ್ಲಿ ಮಹಮ್ಮದ ಮುನಾಸಿರ್ ಬಂದನಂತರ ಆಕೆ ಹಾಗೂ ಆಕೆಯ ಸಂಬಂಧಿಕರು ಆತನಿಗೆ ಥಳಿಸಿದರು.