ಎತ್ತಿನಗಾಡಿ ಅಥವಾ ಕುದುರೆಗಾಡಿಯನ್ನು ತಯಾರಿಸುವ ಅಥವಾ ಅದರ ದುರಸ್ತಿಯ ಕೌಶಲ್ಯವಿರುವ ಹೊರಗಿನ ಕುಶಲಕರ್ಮಿಗಳು ಹಾಗೂ ಸಾಧಕ – ಕುಶಲಕರ್ಮಿಗಳ ಮಾಹಿತಿಯನ್ನು ಕಳುಹಿಸಿ !
ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗಬಹುದು. ಇನ್ನೂ ಮುಂದೆ ಈ ಇಂಧನಗಳೂ ಸಿಗಲಾರದು. ಆಗ ಇಂಧನದಿಂದ ನಡೆಯುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ನಿರುಪಯುಕ್ತವಾಗುವವು. ಇಂತಹ ಸಮಯದಲ್ಲಿ ಪ್ರಯಾಣ ಮಾಡುವುದು, ರೋಗಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಸಾಮಾನುಗಳನ್ನು ತರುವುದು ಮುಂತಾದವುಗಳಿಗೆ ಸಾರಿಗೆಯ ಪಾರಂಪಾರಿಕ ಸಾಧನಗಳನ್ನು (ಉದಾ. ಎತ್ತಿನಗಾಡಿ, ಕುದುರೆಗಾಡಿ ಇವುಗಳನ್ನು) ಉಪಯೋಗಿಸಬೇಕಾಗುವುದು. ಎತ್ತಿನಗಾಡಿ ಅಥವಾ ಕುದುರೆಗಾಡಿ ಇವುಗಳ ವೈಶಿಷ್ಟ್ಯವೆಂದರೆ ಇದಕ್ಕಾಗಿ ಇತರ ಯಾಂತ್ರಿಕ ವಾಹನಗಳಂತೆ ದೊಡ್ಡ ಹೂಡಿಕೆ ಮತ್ತು ದುರಸ್ತಿಗಳಿಗಾಗಿ ಖರ್ಚು ಮಾಡಬೇಕಾಗಿರುವುದಿಲ್ಲ. ಹಾಗೆಯೇ ಇಂತಹ ಗಾಡಿಗಳಿಂದ ಧ್ವನಿ ಮತ್ತು ವಾಯು ಮಾಲಿನ್ಯವಾಗುವುದಿಲ್ಲ. ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಸಹಜವಾಗಿ ದುರಸ್ತಿ ಮಾಡಬಹುದು.
೧. ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸುವ ಮತ್ತು ಅದರ ನಿರ್ವಹಣೆ-ದುರಸ್ತಿ ಮಾಡುವ ಕುಶಲಕರ್ಮಿಗಳ ಮಾಹಿತಿಯನ್ನು ಕಳುಹಿಸಿ !
ಆಧುನೀಕರಣದಿಂದ ಸದ್ಯ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸುವ ಪ್ರಮಾಣವು ಕಡಿಮೆಯಾಗಿದ್ದರೂ, ಹಿಂದೆ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸಿದ ಅನೇಕ ಕುಶಲಕರ್ಮಿಗಳು ಇಂದಿಗೂ ಹಳ್ಳಿಗಳಲ್ಲಿದ್ದಾರೆ. ಅದರಲ್ಲಿ ನಿರ್ವಹಣೆ-ದುರಸ್ತಿ ಮಾಡುವವರೂ ಒಳಗೊಂಡಿದ್ದಾರೆ. ತಮಗೆ ಇಂತಹ ಕುಶಲಕರ್ಮಿಗಳ ಪರಿಚಯವಿದ್ದಲ್ಲಿ ಅವರ ಮಾಹಿತಿಯನ್ನು ಕೆಳಗೆ ನೀಡಿದಂತೆ ಸ್ಥಳೀಯ ಸಾಧಕರಿಗೆ ತಿಳಿಸಬೇಕು. ಆ ಸಾಧಕರು ಜಿಲ್ಲಾಸೇವಕರ ಮಾಧ್ಯಮದಿಂದ ಮಾಹಿತಿಯನ್ನು ಕಳುಹಿಸಬೇಕು.
೨. ಸಾಧಕ-ಕುಶಲಕರ್ಮಿಗಳ ಮಾಹಿತಿಯನ್ನು ತಿಳಿಸಿ !
ಕೆಲವು ಸಾಧಕ-ಕುಶಲಕರ್ಮಿಗಳಲ್ಲಿ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸುವ ಅಥವಾ ದುರಸ್ತಿ ಮಾಡುವ ಕೌಶಲ್ಯವಿರುತ್ತದೆ. ಇಂತಹ ಸಾಧಕ-ಕುಶಲಕರ್ಮಿಗಳ ಮಾಹಿತಿಯನ್ನು ಜಿಲ್ಲಾಸೇವಕರ ಮೂಲಕ ಕಳುಹಿಸಬೇಕು. ಈ ಮಾಹಿತಿಯಲ್ಲಿ ‘ಅದನ್ನು ಸೇವೆಯೆಂದು ಅಥವಾ ಸೇವಾಮೌಲ್ಯವನ್ನು ಪಡೆದು ಸೇವೆ ಮಾಡುವರೋ ? ಎಂಬುದನ್ನು ನಮೂದಿಸಬೇಕು.
ಮೇಲೆ ತಿಳಿಸಿದ ಎಲ್ಲ ಮಾಹಿತಿಯನ್ನು ಕೆಳಗೆ ನೀಡಿದ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು.
ಹೆಸರು ಮತ್ತು ವಿಳಾಸ : ಸೌ. ಭಾಗ್ಯಶ್ರೀ ಸಾವಂತ – 7058885610
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401.