ಮಡಗಾವ್ ಸ್ಫೋಟ ಪ್ರಕರಣದ ಆರೋಪಿಗಳು ನಿರಪರಾಧಿ ಎಂಬ ತೀರ್ಪನ್ನು ಎತ್ತಿ ಹಿಡಿದ ಮುಂಬಯಿ ಉಚ್ಚನ್ಯಾಯಾಲಯದ ಗೋವಾ ವಿಭಾಗೀಯ ವಿಭಾಗೀಯಪೀಠ

ಸನಾತನದ ನಿರಪರಾಧಿ ಸಾಧಕರು ಸರ್ವಶ್ರೀ ಧನಂಜಯ ಅಷ್ಟೇಕರ, ದಿಲೀಪ ಮಾಣಗಾವಕರ, ವಿನಯ ತಳೆಕರ, ವಿನಾಯಕ ಪಾಟೀಲ್, ಪ್ರಶಾಂತ ಅಷ್ಟೇಕರ ಹಾಗೂ ಪ್ರಶಾಂತ ಜುವೇಕರ

ಮಡಗಾವ (ಗೋವಾ) – ಮುಂಬಯಿ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯಪೀಠವು ೨೦೦೯ ರಲ್ಲಿ ದೀಪಾವಳಿ ಸಂಜೆ ನಡೆದ ಸ್ಫೋಟ ಪ್ರಕರಣದಲ್ಲಿ ೬ ಮಂದಿ ಆರೋಪಿಗಳನ್ನು ನಿರಪರಾಧಿಗಳೆಂದು ಖುಲಾಸೆಗೊಳಿಸಿದೆ.

ಈ ಪ್ರಕರಣದಲ್ಲಿ ಸರ್ವಶ್ರೀ ವಿನಯ ತಳೆಕರ, ದಿಲೀಪ ಮಾಣಗಾವಕರ, ವಿನಾಯಕ ಪಾಟೀಲ್, ಪ್ರಶಾಂತ ಜುವೇಕರ, ಧನಂಜಯ ಅಷ್ಟೇಕರ ಹಾಗೂ ಪ್ರಶಾಂತ ಅಷ್ಟೇಕರ ಈ ೬ ಜನರನ್ನು ಗೋವಾದ ವಿಶೇಷ ನ್ಯಾಯಾಲಯವು ೩೧ ಡಿಸೆಂಬರ್ ೨೦೧೩ ರಂದು ನಿರಪರಾಧಿ ಎಂದು ಖುಲಾಸೆಗೊಳಿಸಿತ್ತು. ವಿಶೇಷ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ರಾಷ್ಟ್ರೀಯ ತನಿಖಾ ದಳವು (‘ಎನ್.ಐ.ಎ.’ಯು) ಮುಂಬಯಿ ಉಚ್ಚ ನ್ಯಾಯಾಲಯದ ಗೋವಾದ ವಿಭಾಗೀಯ ಪೀಠದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಇದರ ಬಗ್ಗೆ ಸಪ್ಟೆಂಬರ ೧೬ ರಂದು ಎರಡೂ ಕಡೆಯ ಯುಕ್ತಿವಾದ ಪೂರ್ಣವಾಗಿ ತೀರ್ಪನ್ನು ಕಾಯ್ದಿರಿಸಿತ್ತು. ತದನಂತರ ಸಪ್ಟೆಂಬರ ೧೯ ರಂದು ಉಚ್ಚ ನ್ಯಾಯಾಲಯವು ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ‘ಎನ್.ಐ.ಎ.’ಯ ಅರ್ಜಿಯನ್ನು ತಿರಸ್ಕರಿಸಿತು. ಈ ಸಮಯದಲ್ಲಿ ‘ಎನ್.ಐ.ಎ.’ಯ ಪರವಾಗಿ ಹೆಚ್ಚುವರಿ ಸರಕಾರಿ ವಕೀಲ ಪ್ರವೀಣ ಫಳದೇಸಾಯಿಯವರು ಹಾಗೂ ಆರೋಪಿಗಳ ಪರವಾಗಿ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ನ್ಯಾಯವಾದಿ ನಾಗೇಶ ಜೋಶಿಯವರು ವಾದ ಮಂಡಿಸಿದರು.

ತೀರ್ಪುಪತ್ರದ ಮುಖ್ಯಾಂಶಗಳು

೧. ಸನಾತನ ಸಂಸ್ಥೆಯು ೨೦೦೧ ಹಾಗೂ ೨೦೦೯ರಲ್ಲಿ ನರಕಾಸುರ ಸ್ಪರ್ಧೆಗೆ ವಿರೋಧಿಸಿತ್ತು. ಆದರೆ ಆರೋಪಿಗಳು ಈ ಕಾರಣದಿಂದಾಗಿಯೇ ಅಪರಾಧ ಮಾಡಿದ್ದಾರೆಂದು ಯಾವುದೇ ರೀತಿಯಲ್ಲಿ ಸಾಬೀತಾಗುವುದಿಲ್ಲ.

೨. ಸ್ಫೋಟಗಳನ್ನು ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬುದಕ್ಕೆ ಎನ್.ಐ.ಎ.ಗೆ ಯಾವುದೇ ಸ್ವತಂತ್ರ ಸಾಕ್ಷಿಯನ್ನು ನ್ಯಾಯಾಲಯದ ಮುಂದೆ ತರಲು ಸಾಧ್ಯವಾಗಲಿಲ್ಲ.

೩. ಆರೋಪಿಗಳಿಂದ ಯಾವುದೇ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಮತ್ತು ಅವರು ಸ್ಫೋಟಕಗಳನ್ನು ನದಿಗೆ ಎಸೆದಿದ್ದಾರೆ ಎಂಬ ಎನ್.ಐ.ಎ.ಯ ಆರೋಪವು ‘ಭಾರತೀಯ ಸಾಕ್ಷ್ಯ ಕಾಯ್ದೆ’ಯಡಿ ಸ್ವೀಕಾರಾರ್ಹವಲ್ಲ.

೪. ಎನ್.ಐ.ಎ.ಯು ಮಂಡಿಸಿದ ಸಾಂದರ್ಭಿಕ ಸಾಕ್ಷ್ಯಗಳು ಬಹಳ ದುರ್ಬಲ ಮತ್ತು ಅಪೂರ್ಣವಾಗಿವೆ.

೫. ಎನ್.ಐ.ಎ.ಯ ಕೆಲವು ಸೂತ್ರಗಳನ್ನು ಅಂಗೀಕರಿಸಲಾಗಿದ್ದರೂ, ಆರೋಪಿಗಳನ್ನು ಖುಲಾಸೆಗೊಳಿಸುವ ವಿಶೇಷ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಅಗತ್ಯತೆಯು ಉಚ್ಚ ನ್ಯಾಯಾಲಯಕ್ಕೆ ಅನ್ನಿಸುತ್ತಿಲ್ಲ.

ಸನಾತನವನ್ನು ಅಪರಾಧಿಯೆಂದು ನಿರ್ಧರಿಸುವ ಹಿಂದೂ ವಿರೋಧಿಗಳ ಪಿತೂರಿ ಮತ್ತೆ ವಿಫಲವಾಯಿತು ! -ಸನಾತನ ಸಂಸ್ಥೆ

ಶ್ರೀ. ಚೇತನ ರಾಜಹಂಸ

ಫೋಂಡಾ (ಗೋವಾ) – ಮಡಗಾವ್ ಸ್ಪೋಟ ಪ್ರಕರಣದಲ್ಲಿ ಕೆಲವು ಹಿಂದೂವಿರೋಧಿ ಶಕ್ತಿಗಳು ಹಾಗೂ ಪ್ರಗತಿಪರರು ಸನಾತನ ಸಂಸ್ಥೆಯನ್ನು ಅಪರಾಧಿಯೆಂದು ನಿರ್ಧರಿಸಲು ಪ್ರಯತ್ನಿಸುತ್ತಿದ್ದರು; ಆದರೆ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯ ಪೀಠವು ನೀಡಿದ ತೀರ್ಪಿನಿಂದ ಸನಾತನವನ್ನು ಅಪರಾಧಿ ಎಂದು ನಿರ್ಧರಿಸಲು ಮಾಡಿದ ಸಂಚು ವಿಫಲವಾಗಿದೆ. ಗೋವಾದ ಅಂದಿನ ಕಾಂಗ್ರೆಸ್ ಸರಕಾರವು ಈ ಪ್ರಕರಣದಲ್ಲಿ ೬ ಅಮಾಯಕ ಸಾಧಕರನ್ನು ಸಿಲುಕಿಸಲು ಪ್ರಯತ್ನಿಸಿತ್ತು. ನಾಲ್ಕು ವರ್ಷಗಳ ಕಾಲ ವಿನಾಕಾರಣ ಜೈಲುವಾಸದ ನಂತರ, ಸತ್ರ ನ್ಯಾಯಾಲಯವು ಸನಾತನ ಎಲ್ಲ ಸಾಧಕರನ್ನು ನಿರಪರಾಧಿಯೆಂದು ಮುಕ್ತಗೊಳಿಸಿತ್ತು. ಇದರ ಬಗ್ಗೆ ಮೇಲ್ಮನವಿಯನ್ನು ಆಲಿಸಿದ ಮಾನ್ಯ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯಪೀಠವು ಸತ್ರ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಎಲ್ಲ ಆರೋಪಿಗಳನ್ನು ನಿರಪರಾಧಿಯೆಂದು ಮುಕ್ತಗೊಳಿಸಿದೆ. ನಾವು ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸುತ್ತೇವೆ. ಈ ತೀರ್ಪಿನಿಂದಾಗಿ, ಸನಾತನ ಸಂಸ್ಥೆಯು ನಿರಪರಾಧಿಯೆಂದು ಮತ್ತೊಮ್ಮೆ ಸಾಬೀತಾಗಿದೆ. ಕೇಸರಿ ಭಯೋತ್ಪಾದನೆಯ ಹುಯಿಲೆಬ್ಬಿಸುವವರಿಗೆ, ಇದು ಕಪಾಳಮೋಕ್ಷವಾಗಿದೆ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.