ಸರ್ವೋಚ್ಚ ನ್ಯಾಯಾಲಯದಲ್ಲಿ ‘ಸುದರ್ಶನ್ ಟಿವಿ’ ಚಾನೆಲ್‌ನ ಪ್ರತಿವಾದ

‘ಯು.ಪಿ.ಎಸ್.ಸಿ. ಜಿಹಾದ್’ ಮೇಲೆ ನಿಷೇಧ, ಆದರೆ ‘ಹಿಂದೂ ಭಯೋತ್ಪಾದನೆ’, ‘ಕೇಸರಿ ಭಯೋತ್ಪಾದನೆ’ ತೋರಿಸುವ ಚಾನೆಲ್‌ಗಳ ಮೇಲೆ ಏಕೆ ಆಕ್ಷೇಪಣೆ ಇಲ್ಲ ?

ನವದೆಹಲಿ – ‘ಸುದರ್ಶನ್ ಟಿವಿ’ಯಲ್ಲಿನ ‘ಯು.ಪಿ.ಎಸ್.ಸಿ. ಜಿಹಾದ್’ ಈ ಕಾರ್ಯಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಆಲಿಕೆ ನಡೆಸುತ್ತಿದೆ. ಆ ಸಮಯದಲ್ಲಿ ವಾಹಿನಿಯು ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರತಿಜ್ಞಾಪತ್ರದಲ್ಲಿ, ‘ನಾವು ಪ್ರಸಾರದ ಎಲ್ಲ ನಿಯಮಗಳನ್ನು ಪಾಲಿಸಲು ಬದ್ಧರಾಗಿದ್ದೇವೆ; ಆದರೆ ಇತರ ವಾಹಿನಿಗಳಲ್ಲಿನ ‘ಹಿಂದೂ ಭಯೋತ್ಪಾದನೆ’ ಅಥವಾ ‘ಕೇಸರಿ ಭಯೋತ್ಪಾದನಾ’ ಕಾರ್ಯಕ್ರಮಗಳ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಾಗಿಲ್ಲ. ಈ ಕಾರ್ಯಕ್ರಮದ ವಿಷಯ ‘ಹಿಂದೂ’ ಟೆರರ್ : ಮಿಥ್ಯ ಯಾ ಸತ್ಯ ?’ ಎಂಬ ವಿಷಯವನ್ನು ಇಡಲಾಗಿತ್ತು, ಇದರಲ್ಲಿ ಮುಖ್ಯ ಚಿತ್ರವೆಂದು ಓರ್ವ ಹಿಂದೂ ಸಂತರನ್ನು ಹಣೆಯಲ್ಲಿ ತಿಲಕ, ಕೈಯಲ್ಲಿ ತ್ರಿಶೂಲ ಹಾಗೂ ಕಮಂಡಲ ಹಿಡಿದಿರುವಂತೆ ತೋರಿಸಲಾಗಿತ್ತು’ ಎಂದು ಹೇಳಿದೆ.

೧. ಈ ವಾಹಿನಿಯು, ‘ಜಕಾತ್ ಫೌಂಡೇಶನ್’ ಇದು ಉಗ್ರರೊಂದಿಗೆ ನಂಟಿರುವ ಕೆಲವು ಸಂಘಟನೆಗಳಿಂದ ಹಣವನ್ನು ಪಡೆದುಕೊಂಡಿದೆ, ಅದನ್ನು ಕಟ್ಟರವಾದಿಗಳಿಗೆ ತಲುಪಿಸಲು ಕೆಲಸ ಮಾಡುತ್ತದೆ. ‘ಜಕಾತ್ ಫೌಂಡೇಶನ್’ಗೆ ಸಿಕ್ಕಿದ ಹಣವನ್ನು ಐ.ಎ.ಎಸ್, ಐ.ಪಿ.ಎಸ್.ಗಾಗಿ ಬಳಸಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ‘ಯು.ಪಿ.ಎಸ್.ಸಿ.ಜಿಹಾದ್’ ಎಂಬ ಪದವನ್ನು ಬಳಸಿದ್ದೇವೆ ಎಂದು ಹೇಳಿದೆ.

೨. ಜಕಾತ್ ಫೌಂಡೇಶನ್‌ನ ಭಾರತೀಯ ಶಾಖೆಯ ಮೇಲೆ ಆರೋಪವನ್ನು ಮಾಡಲಾಗಿದ್ದರಿಂದ ನ್ಯಾಯಾಲಯವು ಜಕಾತ್ ಫೌಂಡೇಶನ್’ಗೆ ಈ ಬಗ್ಗೆ ನೀವು ಹಸ್ತಕ್ಷೇಪ ಮಾಡಲು ಬಯಸುತ್ತೀರಾ ? ಎಂದು ವಿಚಾರಿಸಿತ್ತು.