ದೇಶದ ಮುಖ್ಯ ಸ್ಥಳಗಳಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸಿದ್ದರು !
|
ಕೋಲಕಾತಾ/ತಿರುವನಂತಪುರಮ್ – ರಾಷ್ಟ್ರೀಯ ತನಿಖಾ ದಳವು (‘ಎನ್.ಐ.ಎ.’ಯು) ಸಪ್ಟೆಂಬರ್ ೧೯ ರಂದು ಬೆಳಿಗ್ಗೆ ಬಂಗಾಲ ಹಾಗೂ ಕೇರಳ ರಾಜ್ಯಗಳಲ್ಲಿ ದಾಳಿ ಮಾಡಿ ಅಲ್ಲಿಂದ ‘ಅಲ್-ಕಾಯದಾ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ೯ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಮುರ್ಶೀದ ಹಸನ್, ಯಾಕುಲ ಬಿಸ್ವಾಸ್, ಮೊರ್ಶಫ್ ಹುಸೈನ್, ನಜುಸ ಸಾಕಿಬ್, ಅಬೂ ಸುಫಿಯಾನ್, ಮೌನುಲ್ ಮಂಡಲ, ಲಿಯೂ ಯಿನ್ ಅಹಮದ, ಅಲ್ ಮಾಮೂನ್ ಕಮಾಲ ಹಾಗೂ ಅತಿತುರ್ ರಹಮಾನ ಹೀಗೆ ಅವರ ಹೆಸರುಗಳಾಗಿವೆ. ಇವರೆಲ್ಲ ಭಯೋತ್ಪಾದಕರು ಕಾರ್ಮಿಕರಾಗಿದ್ದು ಮತ್ತು ಅವರಲ್ಲಿ ಹೆಚ್ಚಿನವರು ಸುಮಾರು ೨೦ ವರ್ಷ ವಯಸ್ಸಿನವರು ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ‘ಎನ್.ಐ.ಎ.’ಯು ಅಪರಾಧವನ್ನು ದಾಖಲಿಸಿದೆ.
Leu Yean Ahmed and Abu Sufiyan from West Bengal and Mosaraf Hossen & Murshid Hasan from Kerala are among the nine Al-Qaeda terrorists arrested by National Investigation Agency (NIA) pic.twitter.com/jMnRjTIjED
— ANI (@ANI) September 19, 2020
‘ಎನ್.ಐ.ಎ.’ಯು ಬಂಗಾಲದ ಮುರ್ಶಿದಾಬಾದನಿಂದ ೬ ಹಾಗೂ ಕೇರಳದ ಎರ್ನಾಕುಲಮ್‌ನಿಂದ ೩ ಭಯೋತ್ಪಾದಕರನ್ನು ಬಂಧಿಸಿದೆ. ಭಯೋತ್ಪಾದಕರಿಂದ ಡಿಜಿಟಿಲ್ ಉಪಕರಣಗಳು, ಕೆಲವು ಕಾಗದಪತ್ರಗಳು, ಜಿಹಾದಿ ವಸ್ತುಗಳು, ಶಸ್ತ್ರಾಸ್ತ್ರಗಳು, ದೇಶಿ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ತಯಾರಿಸುವ ಕಾಗದಪತ್ರಗಳು ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ. ‘ಎನ್.ಐ.ಎ.’ಗೆ ಬಂಗಾಲ ಹಾಗೂ ಕೇರಳ ಸಹಿತ ದೇಶದ ಕೆಲವು ಸ್ಥಳಗಳ ಅಲ್ ಕಾಯದಾದ ‘ಅಂತರರಾಜ್ಯದ ಮಾಡ್ಯುಲ್’ ವಿಷಯದ, ಅದೇರೀತಿ ಮಹತ್ವದ ಸ್ಥಳಗಳ ಮೇಲೆ ಭಯೋತ್ಪಾದಕ ದಾಳಿ ಮಾಡುವ ಸಂಚು ರೂಪಿಸುತ್ತಿರುವ ಮಾಹಿತಿ ಸಿಕ್ಕಿತ್ತು. ನಂತರವೇ ಈ ಕಾರ್ಯಾಚರಣೆಯನ್ನು ಮಾಡಲಾಯಿತು, ಎಂದು ಹೇಳಲಾಗುತ್ತಿದೆ.
‘ಸಾಮಾಜಿಕ ಪ್ರಸಾರ ಮಾಧ್ಯಮ’ದಿಂದ ಇವರನ್ನು ಕಟ್ಟರವಾದಿಯಾಗಿಸಿದ್ದರು !
‘ಎನ್.ಐ.ಎ.’ಯು ನೀಡಿದ ಮಾಹಿತಿಯನುಸಾರ ಆರಂಭದಲ್ಲಿ ಈ ಭಯೋತ್ಪಾದಕರಿಗೆ ಸಾಮಾಜಿಕ ಪ್ರಸಾರ ಮಾಧ್ಯಮಗಳಿಂದ (ಸೋಶಿಯಲ್ ಮೀಡಿಯಾದಿಂದ) ಪಾಕಿಸ್ತಾನದಲ್ಲಿರುವ ಅಲ್ ಕಾಯದಾದ ಭಯೋತ್ಪಾದಕರು ಇವರೆಲ್ಲರನ್ನು ಕಟ್ಟರವಾದಿಯನ್ನಾಗಿಸಿದರು, ಅದೇರೀತಿ ದೆಹಲಿ ಸಹಿತ ಇತರ ರಾಜ್ಯಗಳಲ್ಲಿ ಭಯೋತ್ಪಾದನಾ ದಾಳಿ ಮಾಡಲು ಪ್ರಚೋದಿಸಿದ್ದರು. ಅದಕ್ಕಾಗಿ ಹಣವನ್ನೂ ಸಹ ವ್ಯವಸ್ಥಿತವಾಗಿ ಸಂಗ್ರಹಿಸಲಾಗುತ್ತಿತ್ತು. ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಖರೀದಿಸಲು ಕೆಲವು ಭಯೋತ್ಪಾದಕರನ್ನು ದೆಹಲಿಗೆ ಕಳುಹಿಸುವ ಆಯೋಜನೆಯನ್ನೂ ಮಾಡಿದ್ದರು ಎಂದು ಹೇಳಿದರು.