|
|
ಕೋಲಕಾತಾ – ಪಶ್ಚಿಮ ಮೆದಿನಿಪುರ ಜಿಲ್ಲೆಯ ಸಬಂಗ್‌ನ ಮೊಯನಾದಲ್ಲಿ ಭಾಜಪದ ಕಾರ್ಯಕರ್ತ ದೀಪಕ ಮಂಡಲ್ (ವಯಸ್ಸು ೩೨)ನ ಹತ್ಯೆ ಯಾಗಿದೆ. ಈ ಸಂಬಂಧ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರನ್ನು ದಾಖಲಿಸಲಾಗಿದೆ ಎಂದು ಸ್ಥಳೀಯ ಭಾಜಪ ಮುಖಂಡ ನಬಾರುನ್ ನಾಯಕ ಮಾಹಿತಿ ನೀಡಿದ್ದಾರೆ.
ದೀಪಕ ಮಂಡಲ್ ಸೆಪ್ಟೆಂಬರ್ ೨೦ ರಂದು ಫುಟ್ಬಾಲ್ ಪಂದ್ಯ ವೀಕ್ಷಿಸಲು ಹೋಗಿದ್ದರು. ಅಲ್ಲಿಂದ ಹಿಂದಿರುಗುವಾಗ ಅವನ ಮೇಲೆ ಬಾಂಬ್ ಎಸೆದು ಹತ್ಯೆ ಮಾಡಿದ್ದರು. ಈ ಕುರಿತು ಬಂಗಾಲದ ಪ್ರದೇಶಾಧ್ಯಕ್ಷ ದಿಲೀಪ ಘೋಷ್ ಇವರು, “ರಾಜ್ಯದಲ್ಲಿ ಪ್ರತಿದಿನ ತೃಣಮೂಲ ಕಾಂಗ್ರೆಸ್ ರಾಜಕೀಯ ಭಯೋತ್ಪಾದನೆಗೆ ಅನೇಕ ನಾಗರಿಕರು ಬಲಿಯಾಗುತ್ತಿದ್ದಾರೆ. ದೀಪಕ ಮಂಡಲ್ ಕೂಡ ಅದೇ ರೀತಿ ಜೀವವನ್ನು ತೆರಬೇಕಾಯಿತು; ಏಕೆಂದರೆ ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳು ಅವರ ಮೇಲೆ ಬಾಂಬ್ ಎಸೆದರು” ಎಂದು ಹೇಳಿದರು. ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗಿಯ ಇವರು ‘ಬಂಗಾಲದಲ್ಲಿ ಇನ್ನೊಂದು ರಾಜಕೀಯ ಹತ್ಯೆ ಆಯಿತು’, ಎಂದು ಟ್ವೀಟ್ ಮಾಡಿದ್ದಾರೆ. ಭಾಜಪದ ಆರೋಪವನ್ನು ತಿರಸ್ಕರಿಸಿದ ತೃಣಮೂಲ ಕಾಂಗ್ರೆಸ್ ಮುಖಂಡ ಅಜಿತ್ ಮೈತಿ, ‘ಭಾಜಪದ ಕಾರ್ಯಕರ್ತರೇ ಬಾಂಬ್ ತೆಗೆದುಕೊಂಡು ಹೋಗುತ್ತಿರುವಾಗ ಅದು ಸ್ಫೋಟಗೊಂಡಿತು ಮತ್ತು ಅದರಲ್ಲಿ ಕಾರ್ಯಕರ್ತರೊಬ್ಬರು ಮೃತಪಟ್ಟರು’ ಎಂದು ಆರೋಪಿಸಿದರು. ಆದರೆ ಪೊಲೀಸರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
Another horrific political murder! Deepak Mondal, a BJP worker from Moyna, was brutally murdered during a bomb attack. TMC has to pay a heavy price for each of these heartless political murders and the people of West Bengal will ensure they do. pic.twitter.com/BQfYKjh5CM
— BJP Bengal (@BJP4Bengal) September 20, 2020
ಸೆಪ್ಟೆಂಬರ್ ೧೩ ರಂದು ಹೂಗ್ಲಿ ಜಿಲ್ಲೆಯ ಗೋಘಾಟ್‌ನ ರೈಲ್ವೆ ನಿಲ್ದಾಣದ ಬಳಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭಾಜಪದ ಜಿಲ್ಲಾ ಕಾರ್ಯದರ್ಶಿ ಗಣೇಶ ರಾಯ್ ಇವರ ಮೃತದೇಹ ಪತ್ತೆಯಾಗಿತ್ತು.