ದೇಶದಲ್ಲಿ ಪ್ರತಿವರ್ಷ ಒಂದುವರೆ ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ !

ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರಸ್ತೆ ಅಪಘಾತಗಳಲ್ಲಿ ಜನರು ಸಾಯುತ್ತಿರುವಾಗ ಅದರ ಮೇಲೆ ಪರಿಣಾಮಕಾರಿ ಉಪಾಯಯೋಜನೆಯನ್ನು ತೆಗೆದು ಅದನ್ನು ತಡೆಗಟ್ಟಲು ಇಲ್ಲಿಯವರೆಗಿನ ಎಲ್ಲ ಪಕ್ಷದ ಸರಕಾರಗಳು ಏಕೆ ಪ್ರಯತ್ನಿಸಲಿಲ್ಲ ? ಈ ಅಪಘಾತಗಳಿಗೆ ಅಶಿಸ್ತು ನಾಗರಿಕರೂ ಅಷ್ಟೇ ಕಾರಣರಾಗಿದ್ದಾರೆ, ಇದೂ ಸತ್ಯ ಸಂಗತಿಯಾಗಿದೆ !

ನವ ದೆಹಲಿ – ೨೦೧೯ ರಲ್ಲಿ ದೇಶದಲ್ಲಿ ೪ ಲಕ್ಷ ೪೯ ಸಾವಿರ ರಸ್ತೆ ಅಪಘಾತಗಳು ಆಗಿವೆ. ಅದರಲ್ಲಿ ೩ ಲಕ್ಷ ೧೯ ಸಾವಿರದ ೨೮ ಘಟನೆ ಅಂದರೆ ಶೇ. ೭೧ ರಷ್ಟು ಘಟನೆ ಕೇವಲ ವೇಗವಾಗಿ ವಾಹನವನ್ನು ಓಡಿಸುವುದರಿಂದ ಆಗಿದೆ, ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ರಾಜ್ಯ ಸಚಿವ ವಿ.ಕೆ. ಸಿಂಹ ಇವರು ರಾಜ್ಯಸಭೆಯಲ್ಲಿ ಲಿಖಿತ ಸ್ವರೂಪದಲ್ಲಿ ಮಾಹಿತಿಯನ್ನು ನೀಡಿದ್ದಾರೆ. ದೇಶದಲ್ಲಿ ಪ್ರತಿವರ್ಷ ೫ ಲಕ್ಷ ರಸ್ತೆ ಅಪಘಾತಗಳು ನಡೆಯುತ್ತದೆ ಹಾಗೂ ಅದರಲ್ಲಿ ಎರಡುವರೆ ಲಕ್ಷ ಜನರು ಸಾಯುತ್ತಾರೆ ಹಾಗೂ ೩ ಲಕ್ಷ ಜನರು ಅಂಗವಿಕಲರಾಗುತ್ತಾರೆ.