ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನವು ನಿರಪರಾಧಿಯೆಂದು ಮತ್ತೊಮ್ಮೆ ಸಾಬೀತು !

ಶ್ರೀ. ಚೇತನ ರಾಜಹಂಸ

ಗೋವಾ – ಗೋವಾದಲ್ಲಿ ಅಂದಿನ ಕಾಂಗ್ರೆಸ್ ಸರಕಾರವು ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನದ ೬ ಅಮಾಯಕ ಸಾಧಕರನ್ನು ಸಿಲುಕಿಸಲು ಪ್ರಯತ್ನಿಸಿತ್ತು. ನಾಲ್ಕು ವರ್ಷಗಳ ಕಾಲ ಕಾರಣವಿಲ್ಲದೇ ಜೈಲುವಾಸದ ನಂತರ, ಸತ್ರ ನ್ಯಾಯಾಲಯವು ಸನಾತನ ಎಲ್ಲ ಸಾಧಕರನ್ನು ನಿರಪರಾಧಿಯೆಂದು ಮುಕ್ತಗೊಳಿಸಿತ್ತು. ಇದರ ಬಗ್ಗೆ ಮೇಲ್ಮನವಿಯನ್ನು ಆಲಿಸಿದ ಮಾನ್ಯ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯಪೀಠವು ಸತ್ರ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಎಲ್ಲ ಆರೋಪಿಗಳನ್ನು ನಿರಪರಾಧಿಯೆಂದು ಮುಕ್ತಗೊಳಿಸಿದೆ. ನಾವು ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸುತ್ತೇವೆ. ಈ ತೀರ್ಪಿನಿಂದಾಗಿ, ಸನಾತನ ಸಂಸ್ಥೆಯು ನಿರಪರಾಧಿಯೆಂದು ಮತ್ತೊಮ್ಮೆ ಸಾಬೀತಾಗಿದೆ. ಕೇಸರಿ ಭಯೋತ್ಪಾದನೆಯ ಹುಯಿಲೆಬ್ಬಿಸುವವರಿಗೆ, ಇದು ಕಪಾಳಮೋಕ್ಷವಾಗಿದೆ.