ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲಾಗುವ ಅತ್ಯಾಚಾರಗಳಲ್ಲಿ ಶೇ. ೮೨ ರಷ್ಟು ತಂದೆ, ಸಹೋದರ, ಚಿಕ್ಕಪ್ಪ, ಅಜ್ಜ ಇವರಿಂದಲೇ !

ಆಡಳಿತಾರೂಡ ‘ತಹರಿಕ-ಎ-ಇಂಸಾಫ್’ನ ಕಾರ್ಯಕರ್ತೆ ಶಂದಾನಾ ಗುಲಜರ ಇವರ ಹೇಳಿಕೆ

  • ವಾಸನಾಂಧ ಮತಾಂಧರು ತಮ್ಮ ಮನೆಯ ಹುಡುಗಿಯರ ಮೇಲೆಯೂ ಅತ್ಯಾಚಾರ ಮಾಡುತ್ತಾರೆ. ಇದರಿಂದ ಅವರ ಅಸುರ ಮಾನಸಿಕತೆ ಗಮನಕ್ಕೆ ಬರುತ್ತದೆ ! ಪಾಕಿಸ್ತಾನ ಒಂದು ಇಸ್ಲಾಮಿಕ್ ರಾಷ್ಟ್ರವಾಗಿದ್ದರೂ ಅಲ್ಲಿ ಇಂತಹ ಘಟನೆಗಾಗಿ ಶರಿಯತ್ ಅನುಸಾರ ಕಠಿಣ ಶಿಕ್ಷೆ ನಿಡುವುದಿಲ್ಲ. ಇದರ ಅರ್ಥ ಧರ್ಮದ ಹೆಸರಿನಡಿಯಲ್ಲಿ ಕೇವಲ ಕಪಟತನ ಮಾಡುತ್ತಾರೆ, ಎಂಬುದು ಗಮನಕ್ಕೆ ಬರುತ್ತದೆ !
  • ಭಾರತದಲ್ಲಿ ಈ ರೀತಿಯಲ್ಲಿ ಘಟಿಸುತ್ತಿಲ್ಲವಲ್ಲ ? ಎಂಬುದನ್ನು ತನಿಖಾ ಸಂಸ್ಥೆಗಳು, ಮಹಿಳಾ ಸಂಘಟನೆ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ನೋಡಬೇಕು !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಆಡಳಿತಾರೂಡ ಪಕ್ಷ ‘ತಹರಿಕ-ಎ-ಇಂಸಾಫ್’ನ ಕಾರ್ಯಕರ್ತೆ ಶಂದಾನಾ ಗುಲಜರ ಇವರು ಪಾಕಿಸ್ತಾನ ಸರಕಾರದ ಬಳಿ ದೇಶದಲ್ಲಿ ಆಗುತ್ತಿರುವ ಅತ್ಯಾಚಾರಗಳ ಮೂಲವನ್ನು ಹುಡುಕುವಂತೆ ಆಗ್ರಹಿಸಿದ್ದಾರೆ. ಅವರು, ‘ದೇಶದ ಶೇ. ೮೨ ರಷ್ಟು ಅತ್ಯಾಚಾರದ ಘಟನೆಯಲ್ಲಿ ಸಂತ್ರಸ್ತೆಯ ಮನೆಯ ಸದಸ್ಯರೇ ಉದಾ. ತಂದೆ, ಸಹೋದರ, ಅಜ್ಜ ಅಥವಾ ಚಿಕ್ಕಪ್ಪನೇ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಾರೆ’ ಎಂದು ಹೇಳಿದರು. ಅವರು ಒಂದು ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.

೧. ಗುಲಜರ ಇವರು ‘ರೈಟ್ಸ್ ಗ್ರೂಪ್ ವಾರ್ ಆನ್ ರೇಪ್’(ಡಬ್ಲ್ಯು.ಎ.ಆರ್.) ಈ ಸಂಸ್ಥೆಯು ನೀಡಿದ ಅಂಕಿಅಂಶಗಳ ಆಧಾರದ ಮೇಲೆ ಹೇಳಿಕೆಯನ್ನು ನೀಡಿದ್ದಾರೆ. ಗುಲಜರ ಇವರು ಪತ್ರಕರ್ತ ಹಾಮಿದ್ ಮೀರ್ ಇವರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯಾವಾಗ ಇಂತಹ ಹುಡುಗಿಯು ಗರ್ಭಿಣಿಯಾಗುತ್ತಾಳೆ, ಆಗ ಆಕೆಯ ತಾಯಿಯು ತನ್ನ ಗಂಡನ ಬಂಧನವಾಗಿ ಸೆರೆಮನೆಗೆ ಹೋಗಬಹುದು ಆದ್ದರಿಂದ ಅವರು ಗರ್ಭಪಾತಕ್ಕಾಗಿ ಹುಡುಗಿಯರನ್ನು ಸ್ತ್ರೀರೋಗತಜ್ಞರ ಬಳಿ ಕರೆದೊಯ್ಯುತ್ತಾರೆ.

೨. ಸಂಸದ ಗುಲ್ಜಾರ್ ತಮ್ಮ ಮಾತನ್ನು ಮುಂದುವರೆಸುತ್ತಾ, ಅತ್ಯಾಚಾರವು ಸಮಾಜದ ಅತ್ಯಂತ ಕೆಟ್ಟ ಘಟನೆಗಳಲ್ಲಿ ಒಂದಾಗಿದೆ. ನಾನು ಕಳೆದ 3 ವರ್ಷಗಳಿಂದ ಇದರ ವಿರುದ್ಧ ಹೋರಾಡುತ್ತಿಡ್ದು ಈ ಬಗ್ಗೆ ಮಾತನಾಡಲು ಯಾರೂ ಸಿದ್ಧರಿಲ್ಲ. ಸರಕಾರವು ಅತ್ಯಾಚಾರದ ಈ ಕಾರಣಗಳತ್ತ ಗಮನ ನೀಡಿದರೆ ಸಮಾಜವು ಉನ್ನತಿ ಮಾಡಿಕೊಳ್ಳುವುದು ಹಾಗೂ ಮಹಿಳೆಯರ ಮೇಲೆ ಸತತ ದೌರ್ಜನ್ಯಯೆಸಗುವ ಪುರುಷಪ್ರಧಾನ ಸಂಸ್ಕೃತಿಯನ್ನು ವಿರೋಧಿಸಬಹುದು.