‘ನೆಟ್‌ಫ್ಲಿಕ್ಸ್’ನಲ್ಲಿನ ವೆಬ್ ಸಿರಿಸ್‌ನ ಸರಣಿಯಲ್ಲಿ ರವೀಂದ್ರನಾಥ ಟಾಗೋರ್ ಅವರ ಕಥೆಯನ್ನು ತಿರುಚಿ ಅದರಲ್ಲಿ ಹಿಂದೂ ಹುಡುಗಿಯೊಬ್ಬಳನ್ನು ನಮಾಜು ಪಠಣ ಮಾಡುವಂತೆ ತೋರಿಸಲಾಗಿದೆ

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಹೆಚ್ಚಿನ ವೆಬ್ ಸಿರಿಸ್‌ಗಳಲ್ಲಿ ಹಿಂದೂಗಳ ದೇವತೆಗಳು, ಧರ್ಮಗಳು ಇತ್ಯಾದಿಗಳನ್ನು ಅವಮಾನಿಸುತ್ತಿರುವುದು ಬೆಳಕಿಗೆ ಬಂದಿದೆ ಹಾಗೂ ಈಗ ಹಿಂದೂಗಳನ್ನು ಒಂದು ರೀತಿಯಲ್ಲಿ ಮತಾಂತರಗೊಳಿಸಲು ಪ್ರಯತ್ನ ನಡೆಯುತ್ತಿದೆ. ಇಂತಹ ವೆಬ್ ಸಿರಿಸ್ಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಾನೂನುನನ್ನು ರೂಪಿಸಬೇಕು, ಎಂದು ಹಿಂದೂಗಳ ಅನಿಸುತ್ತದೆ !

ಮುಂಬಯಿ – ‘ನೆಟ್‌ಫ್ಲಿಕ್ಸ್’ನ ‘ಒಟಿಟಿ ಆಪ್’ನಲ್ಲಿ ರವೀಂದ್ರನಾಥ ಟಾಗೋರ್ ಅವರ ಕಥೆ ‘ಕಾಬೂಲಿವಾಲಾ’ ಆಧಾರಿತ ವೆಬ್ ಸಿರಿಸ್ ಪ್ರಸಾರವಾಗುತ್ತಿದೆ. ಇದರ ಒಂದು ದೃಶ್ಯದಲ್ಲಿ ‘ಮಿನಿ’ ಎಂಬ ಹಿಂದೂ ಹುಡುಗಿ ನಮಾಜು ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಅವಳ ಸ್ನೇಹಿತ ಕಾಬುಲಿವಾಲಾ ಅವಳನ್ನು ಭೇಟಿಯಾಗಲು ಹಲವು ದಿನಗಳಿಂದ ಬಂದಿರಲಿಲ್ಲ. ಅವನು ಅವಳನ್ನು ಭೇಟಿಯಾಗಲು ಬರಬೇಕು; ಆದ್ದರಿಂದ ಅವಳು ಅಲ್ಲಾಹನನ್ನು ಪ್ರಾರ್ಥಿಸುತ್ತಿರುವುದು ಕಂಡುಬರುತ್ತದೆ. ಟಾಗೋರ್ ಇವರ ಮೂಲ ಕಾಬುಲಿವಾಲಾ ಕಥೆಯಲ್ಲಿ ಎಲ್ಲಿಯೂ ಹಿಂದೂ ಹುಡುಗಿ ನಮಾಜು ಪಠಣ ಮಾಡುವ ಬಗ್ಗೆ ಉಲ್ಲೇಖವಿಲ್ಲ. ಇದರರ್ಥ ಸಿರಿಸ್‌ನ ನಿರ್ಮಾಪಕರು ಉದ್ದೇಶಪೂರ್ವಕವಾಗಿ ಈ ಘಟನೆಯನ್ನು ಇದರಲ್ಲಿ ಸೇರಿಸಿದ್ದಾರೆ. (ತದ್ವಿರುದ್ಧ ಹಿಂದೂ ಸ್ನೇಹಿತ ಭೇಟಿಯಾಗಲು ಬರಲಿಲ್ಲ; ಆದ್ದರಿಂದ ಮುಸಲ್ಮಾನ ಹುಡುಗಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿರುವಂತೆ ದೃಶ್ಯವನ್ನು ತೋರಿಸುವ ಧೈರ್ಯವನ್ನು ಸರಣಿಯ ನಿರ್ಮಾಪಕರು ಏಕೆ ಮಾಡುತ್ತಿಲ್ಲ ? – ಸಂಪಾದಕರು)