ಬಡ ವಿದ್ಯಾರ್ಥಿಗಳಿಗೆ ‘ಆನ್‌ಲೈನ್’ ಶಿಕ್ಷಣಕ್ಕಾಗಿ ಉಚಿತ ಸಾಮಗ್ರಿಗಳನ್ನು ಒದಗಿಸಿ ! – ದೆಹಲಿ ಉಚ್ಚ ನ್ಯಾಯಾಲಯದಿಂದ ಶಾಲೆಗಳಿಗೆ ಆದೇಶ

ನ್ಯಾಯಾಲಯವು ಇದನ್ನು ಏಕೆ ಹೇಳಬೇಕಾಗುತ್ತದೆ ? ವಾಸ್ತವದಲ್ಲಿ ಆನ್‌ಲೈನ್ ಶಿಕ್ಷಣದ ನಿರ್ಧಾರವನ್ನು ತೆಗೆದುಕೊಳ್ಳುವಾಗ ‘ಬಡ ವಿದ್ಯಾರ್ಥಿಗಳಿಗೆ ಅದನ್ನು ನಿಭಾಯಿಸಲು ಸಾಧ್ಯವೇ ?’, ‘ಅವರಿಗೆ ಅದನ್ನು ಹೇಗೆ ನೀಡಬಹುದು ?’, ಇದರ ಬಗ್ಗೆ ಸರಕಾರಿ ಸಂಸ್ಥೆಗಳು ಪರಿಹಾರವನ್ನು ತೆಗೆಯುವುದು ಅಗತ್ಯವಿತ್ತು !

ನವ ದೆಹಲಿ – ಆನ್‌ಲೈನ್ ಶಿಕ್ಷಣಕ್ಕಾಗಿ ಲ್ಯಾಪ್‌ಟಾಪ್, ಸಂಚಾರವಾಣಿ, ಇಂಟರ್‌ನೆಟ್ ಇತ್ಯಾದಿಗಳು ಅಗತ್ಯವಿರುವುದರಿಂದ ಈ ಸೌಲಭ್ಯವನ್ನು ಸರಕಾರಿ ಹಾಗೂ ಖಾಸಗಿ ಶಾಲೆಗಳು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು, ಎಂದು ದೆಹಲಿ ಉಚ್ಚ ನ್ಯಾಯಾಲಯವು ಸಪ್ಟೆಂಬರ್ ೧೮ ರಂದು ಆದೇಶ ನೀಡಿದೆ. ಅದಕ್ಕಾಗಿ ಮೂವರು ಸದಸ್ಯರ ಸಮಿತಿಯನ್ನು ನೇಮಿಸಬೇಕು. ಅದರಲ್ಲಿ ಕೇಂದ್ರದ ಶಿಕ್ಷಣ ಸಚಿವರು ಅಥವಾ ಅವರ ಪ್ರತಿನಿಧಿ, ಖಾಸಗಿ ಶಾಲೆಗಳ ಪ್ರತಿನಿಧಿ ಹಾಗೂ ದೆಹಲಿ ಸರಕಾರದ ಶಿಕ್ಷಣ ಸಚಿವ ಇವರ ಸಮಾವೇಶ ಮಾಡಬೇಕು, ಎಂದೂ ನ್ಯಾಯಾಲಯವು ಹೇಳಿದೆ. ‘ಜಸ್ಟಿಸ್ ಫಾರ್ ಆಲ್’ ಈ ಸಂಸ್ಥೆಯು ಈ ಬಗ್ಗೆ ಅರ್ಜಿಯನ್ನು ದಾಖಲಿಸಿತ್ತು.