ಸಾಧಕರು, ವಾಚಕರು, ಹಿತಚಿಂತಕರು ಹಾಗೂ ಸಂಶೋಧಕರಲ್ಲಿ ಸವಿನಯ ವಿನಂತಿ !

ಮಹಾಭೀಕರ ಆಪತ್ಕಾಲವು ಶೀಘ್ರದಲ್ಲಿಯೇ ಆರಂಭವಾಗಲಿದೆ. ಅದಕ್ಕಿಂತ ಮೊದಲೇ ಅನೇಕ ವಿಷಯಗಳ ಮೇಲೆ ಸಂಶೋಧನೆ ಮಾಡಿ ಈ ಜ್ಞಾನಭಂಡಾರವನ್ನು ಅಖಿಲ ಮನುಕುಲಕ್ಕೆ ತಲುಪಿಸಬೇಕಿದೆ. ಆದ್ದರಿಂದ ಗೋವಾದ ರಾಮನಾಥಿ ಆಶ್ರಮದಲ್ಲಿ ವಿವಿಧ ಸೇವೆಗಳಿಗಾಗಿ ತುರ್ತಾಗಿ ಮನುಷ್ಯಬಲದ ಅಗತ್ಯವಿದೆ. ತಾವು ತಮ್ಮ ಇಷ್ಟ ಹಾಗೂ ಕೌಶಲ್ಯಕ್ಕನುಸಾರ ಈ ಮುಂದಿನ ಯಾವುದಾದರೂ ಸೇವೆಯನ್ನು ಕಲಿಯಬಹುದು.

ಪಾಕಿಸ್ತಾನವನ್ನು ನಾಶ ಮಾಡಿದಾಗಲೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗುತ್ತದೆ !

ನವೆಂಬರ್ ೧೯ ರ ಬೆಳಗ್ಗೆ ನಾಗರೋಟದ (ಜಮ್ಮು-ಕಾಶ್ಮೀರ) ಬಾನ್ ಟೋಲ್ ನಾಕಾದಲ್ಲಿ ಭಯೋತ್ಪಾದಕರು ಟ್ರಕ್‌ನಿಂದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ೩ ಗಂಟೆಗಳ ಕಾಲ ನಡೆದ ಚಕಮಕಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ.

ಮಂಗಳೂರಿನಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಬೆಂಬಲವಾಗಿ ಮತ್ತೊಂದು ಗೋಡೆಯ ಮೇಲೆ ಬರವಣಿಗೆ

ಮುಂಬಯಿ ಮೇಲೆ ೨೬/೧೧ ಜಿಹಾದಿ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣವಾದ ನಿಮಿತ್ತ ಇಲ್ಲಿ ಗೋಡೆಯ ಮೇಲೆ ಪ್ರಚೋದನಕಾರಿ ಬರಹ ಬರೆಯಲಾಗಿತ್ತು. ನಂತರ ಪೊಲೀಸರು ಅದನ್ನು ಅಳಿಸಿಹಾಕಿ ಅಜ್ಞಾತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗ ಮತ್ತೊಂದು ಸ್ಥಳದಲ್ಲಿ ಅದೇ ರೀತಿಯ ಬರವಣಿಗೆ ಬರೆದಿರುವುದು ಬೆಳಕಿಗೆ ಬಂದಿದೆ.

ಬರೇಲಿಯಲ್ಲಿ ಲವ್ ಜಿಹಾದ್ ವಿರೋಧಿ ಮೊದಲನೇಯ ಅಪರಾದ ದಾಖಲು

ಉತ್ತರಪ್ರದೇಶ ಸರಕಾರ ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೆ ತಂದ ನಂತರ ಮೊದಲ ಪ್ರಕರಣ ಬರೇಲಿಯಲ್ಲಿ ದಾಖಲಿಸಲಾಗಿದೆ. ಹಿಂದೂ ಹುಡುಗಿಯೊಬ್ಬಳನ್ನು ಮದುವೆಗಾಗಿ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಕ್ಕಾಗಿ ಮುಸ್ಲಿಂ ಯುವಕನ ವಿರುದ್ಧ ಹುಡುಗಿಯ ತಂದೆ ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.

‘ನಿಮ್ಮ ಪೀಳಿಗೆ ಕೊನೆಗೊಳ್ಳಬಹುದು; ಆದರೆ ಹೈದರಾಬಾದ್ ಎಂದಿಗೂ ಭಾಗ್ಯನಗರ ಆಗುವುದಿಲ್ಲ !’- ಅಸದುದ್ದೀನ್ ಒವೈಸಿ

ನಿಮ್ಮ ಇಡೀ ಪೀಳಿಗೆ ಮುಗಿಯಬಹುದು; ಆದರೆ ನಗರದ ಹೆಸರು ಹೈದರಾಬಾದ್ ಆಗಿ ಉಳಿಯುತ್ತದೆ. ಚುನಾವಣೆ ಹೈದರಾಬಾದ್ ಮತ್ತು ಭಾಗ್ಯನಗರಗಳ ನಡುವೆ ಇದೆ. ಹೈದರಾಬಾದ್ ಹೆಸರನ್ನು ಬದಲಾಯಿಸಬಾರದು ಎಂದು ನೀಮಗೆ ಅನಿಸುತ್ತಿದ್ದರೆ, ನೀವು ಎಂ.ಐ.ಎಂ.ಗೆ ಮತ ಚಲಾಯಿಸಿ, ಎಂದು ಎಂ.ಐ.ಎಂನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಕರೆ ನೀಡಿದ್ದಾರೆ.

ಗಾಜಿಪುರದಲ್ಲಿ (ದೆಹಲಿ) ಗೋಹತ್ಯೆ ಮಾಡಿ ಎಸೆದ ಗೋವುಗಳ ತಲೆಗಳನ್ನು ತೋರಿಸುವ ವೀಡಿಯೋ ಪ್ರಸಾರ

ಇಲ್ಲಿಯ ಗಾಜಿಪುರದಲ್ಲಿ ೪-೫ ಹಸುಗಳ ಕತ್ತರಿಸಿದ ರುಂಡಗಳು ಪತ್ತೆಯಾಗಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂತಹ ಘಟನೆಗಳು ಇಲ್ಲಿ ಇದಕ್ಕೂ ಮೊದಲು ನಡೆದಿವೆ; ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿಂದೂಗಳು ಆರೋಪಿಸಿದ್ದಾರೆ.

ಪಾಕಿಸ್ತಾನದಲ್ಲಿ ಸರಕಾರ ಹಿಂದೂಗಳ ಮನೆಗಳನ್ನು ಮತ್ತೆ ಕೆಡವಿತು

ಸಿಂಧ್ ಪ್ರಾಂತ್ಯದ ಭಿಲ್ ಜಾತಿಯ ಹಿಂದೂಗಳ ಅನೇಕ ಮನೆಗಳನ್ನು ಸರಕಾರ ನೆಲಸಮ ಮಾಡಿದೆ. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ಈ ಕ್ರಮವನ್ನು ನಿಲ್ಲಿಸಲಾಗಿದೆ; ಆದರೆ ಮತಾಂಧರು ಈ ಮನೆಯಲ್ಲಿದ್ದ ಹಿಂದೂಗಳನ್ನು ಅಲ್ಲಿಂದ ಪಲಾಯನ ಮಾಡುವಂತೆ ಮಾಡಿದ್ದಾರೆ.

ದೆಹಲಿಯ ಶಿವಶಕ್ತಿ ದೇವಸ್ಥಾನದಲ್ಲಿ ೧೨ ಕ್ಕೂ ಹೆಚ್ಚು ವಿಗ್ರಹಗಳು ಧ್ವಂಸ

ಸ್ಥಳೀಯ ಕೈಲಾಶ ವಿಹಾರ್ ಪನ್ಸಾರಿ ಪ್ರದೇಶದ ಶಿವಶಕ್ತಿ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ದೇವಾಲಯದಲ್ಲಿ ೧೨ ಕ್ಕೂ ಹೆಚ್ಚು ವಿಗ್ರಹಗಳನ್ನು ಒಡೆಯಲಾಗಿದ್ದು, ತಲೆಗಳನ್ನು ಕಡಿಯಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ.

ರಾಜ್ಯಪಾಲರ ಒಪ್ಪಿಗೆಯೊಂದಿಗೆ ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನನು ಜಾರಿಗೆ

ಉತ್ತರ ಪ್ರದೇಶ ಸರಕಾರ ಸಮ್ಮತಿಸಿದ ‘ಲವ್ ಜಿಹಾದ್’ ವಿರುದ್ಧ ಸುಗ್ರೀವಾಜ್ಞೆಯ ಕರಡನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ಅನುಮೋದನೆಗಾಗಿ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಸಹಿ ಹಾಕಿ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ನವೆಂಬರ್ ೨೮ ರಿಂದ ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈಗ ಈ ಸುಗ್ರೀವಾಜ್ಞೆಯನ್ನು ವಿಧಾನಸಭೆಯ ಉಭಯ ಸದನಗಳಲ್ಲಿ ೬ ತಿಂಗಳೊಳಗೆ ಅಂಗೀಕರಿಸಬೇಕಾಗಿದೆ.

ಜನರು ಮಾಸ್ಕಅನ್ನು ಸರಿಯಾಗಿ ಧರಿಸದಿದ್ದರೆ, ಮಾರ್ಗಸೂಚಿಗಳ ಉಪಯೋಗ ಏನು ? – ಸರ್ವೋಚ್ಚ ನ್ಯಾಯಾಲಯ

ಹೆಚ್ಚಿನ ಜನರು ಮಾಸ್ಕ್‌ಗಳನ್ನು ಸರಿಯಾಗಿ ಧರಿಸದಿದ್ದರೆ, ಇಂತಹ ಮಾರ್ಗಸೂಚಿಗಳ ಉಪಯೋಗ ಏನು ?, ಎಂಬ ಕಟುವಾದ ಶಬ್ಧಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು. ಗುಜರಾತಿನ ರಾಜಕೋಟದಲ್ಲಿ ಕೊರೋನಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ೬ ರೋಗಿಗಳ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.