|
ಮಂಗಳೂರು – ಮುಂಬಯಿ ಮೇಲೆ ೨೬/೧೧ ಜಿಹಾದಿ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣವಾದ ನಿಮಿತ್ತ ಇಲ್ಲಿ ಗೋಡೆಯ ಮೇಲೆ ಪ್ರಚೋದನಕಾರಿ ಬರಹ ಬರೆಯಲಾಗಿತ್ತು. ನಂತರ ಪೊಲೀಸರು ಅದನ್ನು ಅಳಿಸಿಹಾಕಿ ಅಜ್ಞಾತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗ ಮತ್ತೊಂದು ಸ್ಥಳದಲ್ಲಿ ಅದೇ ರೀತಿಯ ಬರವಣಿಗೆ ಬರೆದಿರುವುದು ಬೆಳಕಿಗೆ ಬಂದಿದೆ.
@compolmlr M'luru: Now, miscreants deface wall of court premises with graffiti https://t.co/0vNAjF9Oik
— Daijiworld.com (@daijiworldnews) November 29, 2020
‘ನಮ್ಮನ್ನು ಪ್ರಚೋದಿಸಿದರೆ, ನಾವು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳನ್ನು ದೇಶಕ್ಕೆ ತರುತ್ತೇವೆ’. ರಾ.ಸ್ವ. ಸಂಘ ಮತ್ತು ಮನುವಾದಿಗಳನ್ನು ಎದುರಿಸಲು ನಮ್ಮನ್ನು ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಅವರನ್ನು ಆಹ್ವಾನಿಸುವಂತೆ ಒತ್ತಾಯಿಸಬೇಡಿ. # ಲಷ್ಕರ್ ಜಿಂದಾಬಾದ್’, ಎಂದು ವಸತಿ ಕಟ್ಟಡದ ಗೋಡೆಯ ಮೇಲೆ ಬರೆಯುವ ಮೂಲಕ ಬೆದರಿಕೆ ಹಾಕಲಾಗಿದೆ.