|
ಬರೇಲಿ (ಉತ್ತರ ಪ್ರದೇಶ) – ಉತ್ತರಪ್ರದೇಶ ಸರಕಾರ ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೆ ತಂದ ನಂತರ ಮೊದಲ ಪ್ರಕರಣ ಬರೇಲಿಯಲ್ಲಿ ದಾಖಲಿಸಲಾಗಿದೆ. ಹಿಂದೂ ಹುಡುಗಿಯೊಬ್ಬಳನ್ನು ಮದುವೆಗಾಗಿ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಕ್ಕಾಗಿ ಮುಸ್ಲಿಂ ಯುವಕನ ವಿರುದ್ಧ ಹುಡುಗಿಯ ತಂದೆ ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ. ಶೀಘ್ರದಲ್ಲೇ ಆ ಯುವಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಇಲ್ಲಿನ ದೇವರನಿಯಾ ಗ್ರಾಮದಲ್ಲಿ ನಡೆದಿದೆ.
ಹುಡುಗಿಯ ತಂದೆ ತಮ್ಮ ದೂರಿನಲ್ಲಿ, ತನ್ನ ಮಗಳು ಉವೈಸ್ ಅಹಮದ್ ಜೊತೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ನೇಹ ಬೆಳೆಸಿದ್ದಳು. ನಂತರ ಆತ ಮತಾಂತರಗೊಂಡು ಮದುವೆಗೆ ಒತ್ತಾಯಿಸಲು ಪ್ರಾರಂಭಿಸಿದ. ಈ ಬಗ್ಗೆ ಆತನಿಗೆ ಹಲವಾರು ಬಾರಿ ತಿಳುವಳಿಕೆ ನೀಡಲು ಪ್ರಯತ್ನಿಸಲಾಯಿತು; ಆದರೆ ಆತ ಕೇಳಲಿಲ್ಲ ಮತ್ತು ನನ್ನ ಮತ್ತು ನನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು.