ದೆಹಲಿಯ ಪೊಲೀಸರು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವಾಗ ಇಂತಹ ಘಟನೆಗಳು ಸಂಭವಿಸುತ್ತವೆ ಎಂಬುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
(ಈ ಚಿತ್ರವನ್ನು ಪ್ರಕಟಿಸುವ ಉದ್ದೇಶ ಯಾವುದೇ ಧಾರ್ಮಿಕ ಭಾವನೆಗೆ ನೋವುಂಟು ಮಾಡುವುದ್ದಾಗಿರದೆ ನಿಜ ಸ್ಥಿತಿಯನ್ನು ತೋರಿಸುವ ಉದ್ದಶವಾಗಿದೆ)
ದೆಹಲಿ – ಸ್ಥಳೀಯ ಕೈಲಾಶ ವಿಹಾರ್ ಪನ್ಸಾರಿ ಪ್ರದೇಶದ ಶಿವಶಕ್ತಿ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ. ಈ ದೇವಾಲಯದಲ್ಲಿ ೧೨ ಕ್ಕೂ ಹೆಚ್ಚು ವಿಗ್ರಹಗಳನ್ನು ಒಡೆಯಲಾಗಿದ್ದು, ತಲೆಗಳನ್ನು ಕಡಿಯಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರಾದ ವಿನೋದ್ ಬನ್ಸಲ್ ಇವರು, ‘ಹಿಂದೂಗಳ ಸಹಿಷ್ಣುತೆಯನ್ನು ಯಾರೂ ಪರೀಕ್ಷಿಸಬಾರದು’, ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ದೇವಾಲಯದ ಕಾರ್ಯದರ್ಶಿ ವಿಭೂತಿ ಶರ್ಮಾ ಇವರು, ನವೆಂಬರ್ ೨೫ ರ ಬೆಳಗ್ಗೆ ಈ ಘಟನೆಯನ್ನು ಸ್ವಚ್ಛತೆಯನ್ನು ಮಾಡುವ ಸಿಬ್ಬಂದಿ ನಮಗೆ ತಿಳಿಸಿದ್ದಾರೆ ಎಂದು ಹೇಳಿದರು. ದೇವಾಲಯದಲ್ಲಿ ಲಕ್ಷ್ಮಿ-ನಾರಾಯಣ, ಕೃಷ್ಣ-ರಾಧಿಕಾ, ಶ್ರೀ ದುರ್ಗಾದೇವಿ, ಶ್ರೀ ಬಗಲಾಮುಖಿದೇವಿ ಮತ್ತು ಶಿವ ಪರಿವಾರ ಈ ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮತ್ತು ಆಡಳಿತಕ್ಕೆ ಮಾಹಿತಿ ನೀಡಲಾಗಿದೆ. ಅವರಿಗೆ ಹೊಸ ವಿಗ್ರಹಗಳನ್ನು ನೀಡಲಾಗುವುದು ಎಂದು ಆಡಳಿತ ಹೇಳಿದೆ. ಇಲ್ಲಿನ ಸಿಸಿಟಿವಿ ಕೇಂದ್ರವನ್ನು ೩-೪ ದಿನಗಳ ಹಿಂದೆ ಮುರಿದಿರುವುದು ಗಮನಕ್ಕೆ ಬಂದಿದೆ. ನವೆಂಬರ್ ೨೪ ರ ರಾತ್ರಿ ದೇವಾಲಯದ ಬಾಗಿಲು ಮುಚ್ಚದೆ ಇದ್ದರಿಂದ ಈ ಘಟನೆ ನಡೆದಿದೆ. (ಬಾಗಿಲು ಮುಚ್ಚುವುದು ಉಳಿಯಿತೋ ಅಥವಾ ಉದ್ದೇಶಪೂರ್ವಕವಾಗಿ ಬಾಗಿಲು ಮುಚ್ಚಿಲ್ಲವೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. – ಸಂಪಾದಕ)