ಹಿಂದೂಗಳಿಂದ ಅನೇಕ ದೂರುಗಳು ಮತ್ತು ಆಂದೋಲನಗಳ ಹೊರತಾಗಿಯೂ, ಗೋಹತ್ಯೆಯನ್ನು ತಡೆಯುವಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ !
ಗೋಮಾತಾದ್ರೋಹಿ ದೆಹಲಿ ಪೊಲೀಸರು ! ದೆಹಲಿ ಪೊಲೀಸರು ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದಾಗ ಅವರು ಇಂತಹ ನಿಷ್ಕ್ರಿಯತೆಯನ್ನು ತೋರಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !
ದೆಹಲಿ – ಇಲ್ಲಿಯ ಗಾಜಿಪುರದಲ್ಲಿ ೪-೫ ಹಸುಗಳ ಕತ್ತರಿಸಿದ ರುಂಡಗಳು ಪತ್ತೆಯಾಗಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂತಹ ಘಟನೆಗಳು ಇಲ್ಲಿ ಇದಕ್ಕೂ ಮೊದಲು ನಡೆದಿವೆ; ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿಂದೂಗಳು ಆರೋಪಿಸಿದ್ದಾರೆ.
ಈ ವೀಡಿಯೊದಲ್ಲಿ ಯುವಕನೊಬ್ಬ, ಈ ಘಟನಾ ಸ್ಥಳದಿಂದ ೧೦೦ ಮೀಟರ್ ದೂರದಲ್ಲಿ ಪೊಲೀಸ್ ಠಾಣೆ ಇದ್ದಾಗ, ಇಲ್ಲಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಗಾಜಿಪುರ ಡೈರಿ ಫಾರ್ಮ್‌ನಿಂದ ಗೋವುಗಳನ್ನು ತಂದು ಇಲ್ಲಿ ಹತ್ಯೆ ಮಾಡಲಾಗುತ್ತದೆ. ಈ ಬಗ್ಗೆ ಪೊಲೀಸರಿಗೆ ನಿರಂತರವಾಗಿ ಮಾಹಿತಿ ನೀಡಲಾಗಿದ್ದು, ಆಂದೋಲಕಾರರು ರಸ್ತೆ ತಡೆ ಕೂಡ ಮಾಡಿದ್ದರು; ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.