ಪಾಕಿಸ್ತಾನದ ಅಸುರಕ್ಷಿತ ಹಿಂದೂಗಳ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇಸ್ಲಾಮಾಬಾದ್ (ಪಾಕಿಸ್ತಾನ) – ಸಿಂಧ್ ಪ್ರಾಂತ್ಯದ ಭಿಲ್ ಜಾತಿಯ ಹಿಂದೂಗಳ ಅನೇಕ ಮನೆಗಳನ್ನು ಸರಕಾರ ನೆಲಸಮ ಮಾಡಿದೆ. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ಈ ಕ್ರಮವನ್ನು ನಿಲ್ಲಿಸಲಾಗಿದೆ; ಆದರೆ ಮತಾಂಧರು ಈ ಮನೆಯಲ್ಲಿದ್ದ ಹಿಂದೂಗಳನ್ನು ಅಲ್ಲಿಂದ ಪಲಾಯನ ಮಾಡುವಂತೆ ಮಾಡಿದ್ದಾರೆ. ಈ ಸಮಯದಲ್ಲಿ ಕೆಲವು ಹಿಂದೂಗಳು ಸಹ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತೆ ರಾಹತ್ ಆಸ್ಟಿನ್ ಈ ವಿಡಿಯೋವನ್ನು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.