|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರ ಸಮ್ಮತಿಸಿದ ‘ಲವ್ ಜಿಹಾದ್’ ವಿರುದ್ಧ ಸುಗ್ರೀವಾಜ್ಞೆಯ ಕರಡನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ಅನುಮೋದನೆಗಾಗಿ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಸಹಿ ಹಾಕಿ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ನವೆಂಬರ್ ೨೮ ರಿಂದ ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈಗ ಈ ಸುಗ್ರೀವಾಜ್ಞೆಯನ್ನು ವಿಧಾನಸಭೆಯ ಉಭಯ ಸದನಗಳಲ್ಲಿ ೬ ತಿಂಗಳೊಳಗೆ ಅಂಗೀಕರಿಸಬೇಕಾಗಿದೆ. ಆಗ ಮಾತ್ರ ಅದು ಶಾಶ್ವತವಾಗಿ ಅನ್ವಯಿಸುತ್ತದೆ.
೧. ಒಂದು ಹುಡುಗಿಯನ್ನು ಕೇವಲ ವಿವಾಹದ ಉದ್ದೇಶದಿಂದ ಮತಾಂತರಗೊಳಿಸಿದರೆ, ಅಂತಹ ಮದುವೆಯನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ ಮತ್ತು ಮತಾಂತರ ಮಾಡುವವರಿಗೆ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
೨. ಒಂದು ಧರ್ಮದಿಂದ ಮುಕ್ತವಾಗಿ ಇನ್ನೊಂದು ಧರ್ಮವನ್ನು ಸ್ವೀಕರಿಸುವುದಿದ್ದರೇ, ಅದು ಸಂಪೂರ್ಣವಾಗಿ ಸ್ವೇಚ್ಛೆಯಿಂದ ನಡೆಯುತ್ತಿದೆ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಘೋಷಿಸಬೇಕು. ಸಂಬಂಧಪಟ್ಟ ಜನರಿಗೆ ಯಾವುದೇ ರೀತಿಯಲ್ಲಿ ಪ್ರಲೋಭನೆ ಅಥವಾ ಒತ್ತಡವಿಲ್ಲ ಎಂದು ಹೇಳಬೇಕು.
೩. ಯಾರಿಗಾದರೂ ಮತಾಂತರವಾಗುವುದಿದ್ದರೇ, ಅವರು ೨ ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಗೆ ತಿಳಿಸಬೇಕು. ಇದನ್ನು ಉಲ್ಲಂಘಿಸಿದರೆ ೬ ತಿಂಗಳಿಂದ ೩ ವರ್ಷಗಳವರೆಗೆ ಶಿಕ್ಷೆಯಾಗಬಹುದು. ಈ ಅಪರಾಧಕ್ಕೆ ಕನಿಷ್ಠ ೧ ಲಕ್ಷ ರೂಪಾಯಿಗಳ ಜಾಮೀನು ಅಗತ್ಯವಿದೆ.
೪. ಒಂದುವೇಳೆ ಮತಾಂತರ ಪ್ರಕರಣದಲ್ಲಿ ಅಪ್ರಾಪ್ತ ಯುವತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರು ಸೇರಿದ್ದರೆ, ಅಪರಾಧಿಗೆ ೩ ರಿಂದ ೧೦ ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ೨೫ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.