ಸಾಧಕರು, ವಾಚಕರು, ಹಿತಚಿಂತಕರು ಹಾಗೂ ಸಂಶೋಧಕರಲ್ಲಿ ಸವಿನಯ ವಿನಂತಿ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡುತ್ತಿರುವ ವೈಜ್ಞಾನಿಕ ಸ್ತರದ ಸಂಶೋಧನಾಕಾರ್ಯದಲ್ಲಿ ಪಾಲ್ಗೊಂಡು ಅಧ್ಯಾತ್ಮ ಜಗತ್ತಿನ ವಿನೂತನ ಪರಿಚಯವನ್ನು ಮಾಡಿಕೊಳ್ಳಿ !

ಸದ್ಯ ಅನೇಕ ಜನರು ಸಂತರ ಅನುಭವಸಿದ್ಧ ಜ್ಞಾನಕ್ಕಿಂತ ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದ ಸಿಕ್ಕಿರುವ ಮಾಹಿತಿಯ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ. ಆದ್ದರಿಂದ ೨೦೧೪ ರಿಂದ ಪರಾತ್ಪರ ಗುರು ಡಾ. ಆಠವಲೆ ಇವರ ಮಾರ್ಗದರ್ಶನಕ್ಕನುಸಾರ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮದ ಮಹತ್ವವನ್ನು ತಿಳಿಸಲು ವೈಜ್ಞಾನಿಕ ಸ್ತರದಲ್ಲಿ ಸಂಶೋಧನಾ ಕಾರ್ಯವನ್ನು ಮಾಡಲಾಗುತ್ತಿದೆ. ಆಧುನಿಕ ವೈಜ್ಞಾನಿಕ ಉಪಕರಣ ಹಾಗೂ ತಂತ್ರಜ್ಞಾನಗಳ ಸಹಾಯದಿಂದ ನಾವೀನ್ಯಪೂರ್ಣವಾಗಿ ಸಂಶೋಧನೆಯನ್ನು ಮಾಡಲಾಗುತ್ತಿದೆ. ಈ ಸಂಶೋಧನಾ ಕಾರ್ಯದ ವ್ಯಾಪ್ತಿ, ವೈಶಿಷ್ಟ್ಯಗಳು ಹಾಗೂ ಲಭ್ಯವಿರುವ ಸೇವೆಗಳನ್ನು ಮುಂದೆ ನೀಡಲಾಗಿದೆ.

೧. ಸಂಶೋಧನಾ ಕಾರ್ಯದ ವ್ಯಾಪ್ತಿ

ಇದರಲ್ಲಿ ಹಿಂದೂ ಧರ್ಮದಲ್ಲಿ ಆಚಾರ, ಯಜ್ಞ, ಅನುಷ್ಠಾನ, ಮಂತ್ರೋಚ್ಚಾರ ಇತ್ಯಾದಿ ಧಾರ್ಮಿಕ ಕೃತಿಗಳು; ದೇಶ-ವಿದೇಶದ ತೀರ್ಥಕ್ಷೇತ್ರಗಳು, ಸಂತರ ಸಮಾಧಿ ಸ್ಥಳಗಳು ಹಾಗೂ ಐತಿಹಾಸಿಕ ಸ್ಥಳಗಳು, ಅದೇರೀತಿ ಕೆಟ್ಟ ಶಕ್ತಿ ಹಾಗೂ ಅವುಗಳಿಂದಾಗುವ ತೊಂದರೆಗಳಿಗೆ ಉಪಾಯ; ದೈವೀ ಶಕ್ತಿ ಹಾಗೂ ಕೆಟ್ಟ ಶಕ್ತಿಗಳ ದೃಶ್ಯ ಪರಿಣಾಮವನ್ನು ತೋರಿಸುವ ಸಂಶೋಧನೆ ಹಾಗೂ ಸಾತ್ತ್ವಿಕ ಸಂಗೀತ, ನೃತ್ಯ, ವಾದ್ಯಗಳು ಇತ್ಯಾದಿ ಕಲೆಯ ಬಗ್ಗೆ ಮಾಡಲಾಗುವ ವಿವಿಧ ಅಂಗಗಳ ಸಂಶೋಧನೆ ಒಳಗೊಂಡಿದೆ.

೨. ಸಂಶೋಧನಾ ಕಾರ್ಯದ ವೈಶಿಷ್ಟ್ಯಗಳು

ಈ ಸಂಶೋಧನೆಗೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಹಾಗೂ ಬುದ್ಧಿಯ ಆಚೆಗಿನ ಜ್ಞಾನದ, ಅಂದರೆ ಸೂಕ್ಷ್ಮ-ಪರೀಕ್ಷಣೆಯನ್ನು ಸೇರಿಸಿ ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ. ಇದರಿಂದ ಬುದ್ಧಿಜೀವಿ ಸಮಾಜದ ಮೇಲೆ ಅಧ್ಯಾತ್ಮದ ಮಹತ್ವವನ್ನು ಬಿಂಬಿಸಲು ಸಹಾಯವಾಗುತ್ತದೆ.

೩. ಅಖಿಲ ಮನುಕುಲಕ್ಕೆ ಸಂಶೋಧನಾ ಕಾರ್ಯವನ್ನು ತಲುಪಿಸಲು ಮಾನವಶಕ್ತಿಯ ಅವಶ್ಯಕತೆ ಇದೆ !

ಮಹಾಭೀಕರ ಆಪತ್ಕಾಲವು ಶೀಘ್ರದಲ್ಲಿಯೇ ಆರಂಭವಾಗಲಿದೆ. ಅದಕ್ಕಿಂತ ಮೊದಲೇ ಅನೇಕ ವಿಷಯಗಳ ಮೇಲೆ ಸಂಶೋಧನೆ ಮಾಡಿ ಈ ಜ್ಞಾನಭಂಡಾರವನ್ನು ಅಖಿಲ ಮನುಕುಲಕ್ಕೆ ತಲುಪಿಸಬೇಕಿದೆ. ಆದ್ದರಿಂದ ಗೋವಾದ ರಾಮನಾಥಿ ಆಶ್ರಮದಲ್ಲಿ ವಿವಿಧ ಸೇವೆಗಳಿಗಾಗಿ ತುರ್ತಾಗಿ ಮನುಷ್ಯಬಲದ ಅಗತ್ಯವಿದೆ. ತಾವು ತಮ್ಮ ಇಷ್ಟ ಹಾಗೂ ಕೌಶಲ್ಯಕ್ಕನುಸಾರ ಈ ಮುಂದಿನ ಯಾವುದಾದರೂ ಸೇವೆಯನ್ನು ಕಲಿಯಬಹುದು. ಸಂಶೋಧನೆಗಾಗಿ ಸಂಬಂಧಪಟ್ಟ ಸೇವೆ ಮಾಡುವವರಿಗೆ ವಿವಿಧ ಸೇವೆಗಳಿಂದ ಅಧ್ಯಾತ್ಮಜಗತ್ತಿನ ಪರಿಚಯವಾಗಲಿದೆ, ಅದೇರೀತಿ ಜ್ಞಾನದ ಒಂದು ವಿಭಿನ್ನ ಆನಂದವನ್ನು ಅನುಭವಿಸಲು ಸಿಗುವುದು. ಸಂಶೋಧನೆಯ ಅಂತರ್ಗತ ಈ ಮುಂದಿನ ಸೇವೆಗಳು ಲಭ್ಯವಿದೆ.

೪. ಸೇವೆಗಳ ಸ್ವರೂಪ

೪ ಅ. ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಲಾಗುವ ಸಂಶೋಧನೆಗೆ ಸಂಬಂಧಪಟ್ಟ ಸೇವೆಗಳು

೧. ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್), ‘ಪಿಪ್(ಪಾಲಿಕಾಂಟ್ರಾಸ್ಟ್ ಇಂಟರಫೆರನ್ಸ್ ಫೊಟೊಗ್ರಾಫಿ), ‘ಬಯೋ-ವೆಲ್ ಜಿ.ಡಿ.ವಿ. (Bio-well GDV), ‘ಇಲೆಕ್ಟ್ರೋಸೊಮೊಟೊಗ್ರಾಫಿಕ್ ಸ್ಕ್ಯಾನಿಂಗ್ ಹಾಗೂ ‘ಥರ್ಮಲ್ ಇಮೇಜಿಂಗ್ ಈ ವೈಜ್ಞಾನಿಕ ಉಪಕರಣಗಳ ಮೂಲಕ ಪರೀಕ್ಷಣೆಯನ್ನು ಮಾಡುವುದು.

೨. ೧,೫೦೦ ಕ್ಕಿಂತಲೂ ಹೆಚ್ಚು ‘ಯು.ಟಿ.ಎಸ್. ಪ್ರಯೋಗದ ಅಂತರ್ಗತದಲ್ಲಿ ಮಾಡಲಾಗುವ ಅಳತೆಯ ನೊಂದಣಿಯ(‘ರೀಡಿಂಗ್ನ) ಬೆರಳಚ್ಚು ಮಾಡುವುದು.

೩. ೧,೩೫೦ ಕ್ಕಿಂತಲೂ ಹೆಚ್ಚು ‘ಪಿಪ್ ಪರೀಕ್ಷಣೆಯ ‘ಪಿಪ್ ಇಮೇಜಸ್ ಆರಿಸುವುದು.

೪. ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಲಾದ ಪರೀಕ್ಷಣೆಗಳ ೧,೦೦೦ ಕ್ಕೂ ಹೆಚ್ಚು ವರದಿ (ರಿಪೋರ್ಟ್) ಮಾಡುವುದು, ಆ ವರದಿಯ ಮುದ್ರಿತಶೋಧನೆಯನ್ನು (ಪ್ರೂಫ್ ರೀಡಿಂಗ್) ಮಾಡುವುದು (ಇದನ್ನು ಮನೆಯಲ್ಲಿದ್ದೂ ಮಾಡಬಹುದು.)

೫. ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಲಾದ ಪರೀಕ್ಷಣೆಗಳ ಸಮಯದಲ್ಲಿ ತೆಗೆಯಲಾದ ೫ ಸಾವಿರಕ್ಕಿಂತಲೂ ಹೆಚ್ಚು ಛಾಯಾಚಿತ್ರಗಳನ್ನು ಪ್ರಯೋಗಾನುಸಾರ ವಿಂಗಡಿಸುವುದು.

೪ ಆ. ಮುನ್ನೂರಕ್ಕೂ ಹೆಚ್ಚು ಬುದ್ಧಿಗೆ ನಿಲುಕದ ಘಟನೆಗಳ ವಿಶ್ಲೇಷಣೆ ಮಾಡಿ ಅದರ ಲೇಖನಗಳನ್ನು ಸಿದ್ಧ ಪಡಿಸುವುದು ಹಾಗೂ ಈ ಬಗ್ಗೆ ಇನ್ನೂ ಮುಂದಿನ ಸಂಶೋಧನೆ ಮಾಡುವುದು

೪ ಇ. ಶೋಧಪ್ರಬಂಧದ ಬಗೆಗಿನ ಸೇವೆ : ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಭಾರತದ, ಅದೇರೀತಿ ವಿದೇಶಗಳಲ್ಲಿ ಅನೇಕ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಗಳ ಮೇಲಾಧರಿಸಿದ ಶೋಧಪ್ರಬಂಧ (ರೀಸರ್ಚ್ ಪೇಪರ್) ಮಂಡಿಸಲಾಗುತ್ತದೆ. ಇದರ ಅಂತರ್ಗತ ಶೋಧಪ್ರಬಂಧ ಬರೆಯುವುದು, ಅದನ್ನು ಮಂಡಿಸುವುದು ಇತ್ಯಾದಿ ಸೇವೆಗಳು ಲಭ್ಯವಿದೆ.

೫. ಈ ಮೇಲಿನ ಸೇವೆಗಾಗಿ ಅಗತ್ಯವಿರುವ ಕೌಶಲ್ಯ ಇದಕ್ಕಾಗಿ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಇರಬೇಕು. ಗಣಕಯಂತ್ರದಲ್ಲಿ ಬೆರಳಚ್ಚು ಮಾಡಲು ಬರಬೇಕು, ಮರಾಠಿ, ಹಿಂದಿ ಹಾಗೂ ಆಂಗ್ಲ ಭಾಷೆಗಳ ವ್ಯಾಕರಣ ಹಾಗೂ ಶಬ್ದಗಳ ರಚನೆ ಬಗ್ಗೆ ಕನಿಷ್ಟ ಜ್ಞಾನವಾದರೂ ಇರಬೇಕು, ಅದೇರೀತಿ ವೈಜ್ಞಾನಿಕ ಉಪಕರಣಗಳನ್ನು ಉಪಯೋಗಿಸಲು ಬರಬೇಕು.

ಈ ಸೇವೆಯನ್ನು ಮಾಡಲಿಚ್ಛಿಸುವವರು; ಆದರೆ ಸೇವೆಯ ಕೌಶಲ್ಯ ಇಲ್ಲದಿದ್ದಲ್ಲಿ ಸಂಬಂಧಪಟ್ಟವರಿಗೆ ಆ ಸಂದರ್ಭದಲ್ಲಿ ತರಬೇತಿ ನೀಡಲಾಗುವುದು. ಈ ಮೇಲಿನ ಸೇವೆಯನ್ನು ಮಾಡಲಿಚ್ಛಿಸುವವರು ಜಿಲ್ಲಾಸೇವಕರ ಮಾಧ್ಯಮದಿಂದ ಮುಂದಿನ ಕೋಷ್ಟಕಕ್ಕನುಸಾರ ತಮ್ಮ ಮಾಹಿತಿಯನ್ನು ಶ್ರೀ. ರೂಪೇಶ ರೇಡಕರ ಇವರ ಹೆಸರಿನಲ್ಲಿ [email protected] ಈ ವಿ.ಅಂಚೆ ಅಥವಾ ಈ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಿ.

ಅಂಚೆ ವಿಳಾಸ : ಶ್ರೀ. ರೂಪೇಶ ರೇಡಕರ, ‘ಭಗವತಿಕೃಪಾ ಅಪಾರ್ಟ್‌ಮೆಂಟ್ಸ್, ಎಸ್-೧, ಎರಡನೇ ಮಹಡಿ, ಬಿಲ್ಡಿಂಗ್ ಎ, ಢವಳಿ, ಫೋಂಡಾ, ಗೋವಾ. ೪೦೩೪೦೧