೧. ‘ಲವ್ ಜಿಹಾದ್’ ಕುರಿತು ಕಾಂಗ್ರೆಸ್ ಪ್ರೀತಿಯನ್ನು ತಿಳಿದುಕೊಳ್ಳಿ !
ರಾಜಸ್ಥಾನದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇವರು, ಭಾಜಪವು ಕೋಮು ಸೌಹಾರ್ದತೆಯನ್ನು ಹಾಳುಮಾಡಲು ‘ಲವ್ ಜಿಹಾದ್’ ಎಂಬ ಪದವನ್ನು ಬಳಸಿದೆ. ಇಂತಹ ಘಟನೆಗಳನ್ನು ನಿಗ್ರಹಿಸಲು ಕಾನೂನು ರೂಪಿಸುವುದು ಅಸಂವಿಧಾನಿಕವಾಗಿದೆ’ ಎಂದು ಹೇಳಿದ್ದಾರೆ.
೨. ಪಾಕಿಸ್ತಾನವನ್ನು ನಾಶ ಮಾಡಿದಾಗಲೇ ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗುತ್ತದೆ !
ನವೆಂಬರ್ ೧೯ ರ ಬೆಳಗ್ಗೆ ನಾಗರೋಟದ (ಜಮ್ಮು-ಕಾಶ್ಮೀರ) ಬಾನ್ ಟೋಲ್ ನಾಕಾದಲ್ಲಿ ಭಯೋತ್ಪಾದಕರು ಟ್ರಕ್‌ನಿಂದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ೩ ಗಂಟೆಗಳ ಕಾಲ ನಡೆದ ಚಕಮಕಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ.
೩. ಇಂತಹ ಕಾಂಗ್ರೆಸ್‌ಅನ್ನು ನಿಷೇಧಿಸಿ !
ದೇಶದಲ್ಲಿ ಮುಸಲ್ಮಾನವಿರೋಧಿ ಭಾವನೆಗಳು ಹೆಚ್ಚಾಗುವುದೆಂದು ೨೬/೧೧ ರಂದು ಮುಂಬೈ ಮೇಲೆ ಜಿಹಾದಿ ಭಯೋತ್ಪಾದಕರ ದಾಳಿಯ ನಂತರ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಲಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
೪. ಈಗ ಜಾತ್ಯತೀತವಾದಿಗಳು ಎಲ್ಲಿದ್ದಾರೆ ?
ಬಾಂಗ್ಲಾದೇಶ ಕ್ರಿಕೆಟ್ ತಂಡದ ಸದಸ್ಯ ಶಕೀಬ್ ಅಲ್ ಹಸನ್ ಕೋಲಕಾತಾದಲ್ಲಿ ಶ್ರೀ ಮಹಾಕಾಳಿಮಾತೆಯನ್ನು ಪೂಜಿಸಿದರೆಂದು ಅವರಿಗೆ ಮತಾಂಧರಿಂದ ಬೆದರಿಕೆಗಳು ಬರಲಾರಂಭವಾದವು. ಇದಕ್ಕಾಗಿ ಅವರು ಕ್ಷಮೆ ಯಾಚಿಸಿದ್ದಾರೆ.
೫. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಅಗತ್ಯವಿದೆ !
ಬೇಲೂರು ತಾಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಐತಿಹಾಸಿಕ ಲಕ್ಷ್ಮೀ ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ದೇಗುಲದ ಶ್ರೀ ಮಹಾಕಾಳಿ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಈ ದೇವಾಲಯವನ್ನು ೧೧೧೩ ರಲ್ಲಿ ಹೊಯ್ಸಳ ವಂಶದ ರಾಜ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಿಸಲಾಗಿತ್ತು.
೬. ಕ್ರೈಸ್ತ ಸಂಘಟನೆಗಳು ಲವ್ ಜಿಹಾದ್‌ನ್ನು ಯಾವಾಗ ವಿರೋಧಿಸುವರು ?
ಕೊಚ್ಚಿ (ಕೇರಳ)ಯಲ್ಲಿ ಸಾಯರೋ ಮಲಬಾರ್ ಚರ್ಚಿನ ಇಲ್ಲಿನ ಕದವಂಥರಾ ಸೇಂಟ್ ಜೋಸೆಫ್ ಚರ್ಚನಲ್ಲಿ ಮುಸಲ್ಮಾನ ಯುವಕ ಮತ್ತು ಕ್ರೈಸ್ತ ಯುವತಿಯ ವಿವಾಹವಾಗಿತ್ತು. ಇದರಿಂದ ಉಂಟಾದ ವಿವಾದದಿಂದ ವಿವಾಹ ಮಾಡಿಸಿದ ಪಾದ್ರಿಯು ಕ್ಷಮೆ ಕೇಳಬೇಕಾಯಿತು.
೭. ಸರಕಾರ ಇಂತಹ ವೆಬ್‌ಸಿರೀಸ್‌ಗಳ ಮೇಲೆ ಎಂದು ಕ್ರಮಕೈಗೊಳ್ಳುವುದು ?
‘ನೆಟ್‌ಫ್ಲಿಕ್ಸನ್ನು ಪ್ರದರ್ಶನಗೊಂಡ ‘ಎ ಸೂಟೇಬಲ್ ಬಾಯ್ ಈ ವೆಬ್ ಸಿರೀಸ್‌ನಲ್ಲಿ ಒಂದು ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಚುಂಬಿಸುವ ದೃಶ್ಯವನ್ನು ತೋರಿಸಲಾಗಿದೆ. ಅದೇ ರೀತಿ ಇದರಿಂದ ‘ಲವ್ ಜಿಹಾದ್ಗೆ ಪ್ರೋತ್ಸಾಹ ನೀಡಲಾಗಿದೆ.