|
ಭಾಗ್ಯನಗರ (ತೆಲಂಗಾಣಾ) – ನಿಮ್ಮ ಇಡೀ ಪೀಳಿಗೆ ಮುಗಿಯಬಹುದು; ಆದರೆ ನಗರದ ಹೆಸರು ಹೈದರಾಬಾದ್ ಆಗಿ ಉಳಿಯುತ್ತದೆ. ಚುನಾವಣೆ ಹೈದರಾಬಾದ್ ಮತ್ತು ಭಾಗ್ಯನಗರಗಳ ನಡುವೆ ಇದೆ. ಹೈದರಾಬಾದ್ ಹೆಸರನ್ನು ಬದಲಾಯಿಸಬಾರದು ಎಂದು ನೀಮಗೆ ಅನಿಸುತ್ತಿದ್ದರೆ, ನೀವು ಎಂ.ಐ.ಎಂ.ಗೆ ಮತ ಚಲಾಯಿಸಿ, ಎಂದು ಎಂ.ಐ.ಎಂನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಒವೈಸಿ ಕರೆ ನೀಡಿದ್ದಾರೆ. ಭಾಗ್ಯನಗರ ಮಹಾನಗರ ಪಾಲಿಕೆಯ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಚಾರ ಮಾಡುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಒಂದು ಸಭೆಯಲ್ಲಿ ತಿಳಿಸಿದ್ದರು. ಇದಕ್ಕೆ ಒವೈಸಿ ಮೇಲಿನ ಕರೆಯನ್ನು ನೀಡಿದರು.
ಓವೈಸಿ ತಮ್ಮ ಮಾತನ್ನು ಮುಂದುವರೆಸುತ್ತಾ, ಹೈದರಾಬಾದ್ ಹೆಸರನ್ನು ಬದಲಾಯಿಸಲು ಬಿಜೆಪಿ ಬಯಸುತ್ತಿದೆ, ಅವರಿಗೆ ಎಲ್ಲ ಸ್ಥಳಗಳ ಹೆಸರನ್ನು ಬದಲಾಯಿಸಲಿಕ್ಕೆ ಇದೆ. ನಿಮ್ಮ ಹೆಸರನ್ನು ಬದಲಾಯಿಸಬಹುದು; ಆದರೆ ಹೈದರಾಬಾದ್‌ನ ಹೆಸರನ್ನು ಬದಲಾಯಿಸಲಾಗುವುದಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಇಲ್ಲಿಗೆ ಬಂದು ಹೈದರಾಬಾದ್ ಹೆಸರನ್ನು ಬದಲಾಯಿಸಲಾಗುವುದು ಎಂದು ಹೇಳುತ್ತಾರೆ. ನೀವು ಇದರ ಗುತ್ತಿಗೆ ತೆಗೆದುಕೊಂಡಿದ್ದೀರಾ ? ಎಂದು ಒವೈಸಿ ಪ್ರಶ್ನೆಯನ್ನು ಕೇಳಿದರು.