ಕರ್ನಾಟಕದ ಮಾಜಿ ಮಂತ್ರಿಗಳನ್ನು ಅಪಹರಣ ಮತ್ತು ಬಿಡುಗಡೆ

ರಾಜ್ಯದ ಮಾಜಿ ಮಂತ್ರಿ ವರ್ತೂರು ಪ್ರಕಾಶ್ ಅವರನ್ನು ನವೆಂಬರ್ ೨೭ ರಂದು ಎಂಟು ಜನರು ಅಪಹರಿಸಿದ್ದರು; ಆದರೆ, ಅವರನ್ನು ಮರುದಿನ ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಪತ್ರಕರ್ತರು ವಿಚಾರಿಸಿದಾಗ ‘ನಾನು ಅದರ ಬಗ್ಗೆ ನಂತರ ತಿಳಿಸುತ್ತೇನೆ’ ಎಂದು ಪ್ರಕಾಶ್ ಹೇಳಿದರು. ಮತ್ತೊಂದೆಡೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಅಪಹರಣದ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ.

ಮಾಸ್ಕ್ ಹಾಕಿಕೊಳ್ಳದವರಿಗೆ ೫ ರಿಂದ ೧೫ ದಿನಗಳವರೆಗೆ ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಿ ! – ಗುಜರಾತ ಉಚ್ಚ ನ್ಯಾಯಾಲಯ

ಕೊರೋನಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಜನರಿಗೆ ಯಾವುದಾದರೊಂದು ಕೋವಿಡ್ ಕೇಂದ್ರದಲ್ಲಿ ಕನಿಷ್ಠ ೫ ರಿಂದ ಗರಿಷ್ಠ ೧೫ ದಿನಗಳವರೆಗೆ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸಬೇಕು. ಅವರಿಂದ ದಿನಕ್ಕೆ ೪-೫ ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುವಂತೆ ಗುಜರಾತ ಉಚ್ಚನ್ಯಾಯಾಲಯ ಗುಜರಾತ್ ಸರಕಾರಕ್ಕೆ ಆದೇಶ ನೀಡಿದೆ.

ಹಿಂದೂ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಯುವಕನ ಮತಾಂತರ

ಹಿಂದೂ ಯುವತಿಯನ್ನು ಮದುವೆಯಾಗಲು ಮುಸಲ್ಮಾನ ಯುವಕನು ಮತಾಂತರಗೊಂಡ ನಂತರ ಇಬ್ಬರಿಗೂ ಪೊಲೀಸರು ರಕ್ಷಣೆ ನೀಡಿದ್ದಾರೆ. ಅವರು ಭದ್ರತೆಗಾಗಿ ಪಂಜಾಬ ಮತ್ತು ಹರಿಯಾಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಯುವತಿಯ ಕುಟುಂಬವನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದರು.

ಯಾವುದೇ ಜಾತಿಯ ಅಭ್ಯರ್ಥಿಗಳನ್ನು ಮಾಡುವೆವು; ಆದರೆ ಮುಸ್ಲಿಮರು ಅಭ್ಯರ್ಥಿಗಳನ್ನು ಮಾಡುವುದಿಲ್ಲ ! – ಕೆ.ಎಸ್. ಈಶ್ವರಪ್ಪ, ಬಿಜೆಪಿ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಚಿವ

ನಾವು ಹಿಂದೂ ಸಮುದಾಯದ ಯಾವುದೇ ವ್ಯಕ್ತಿಗೆ ಚುನಾವಣಾ ಟಿಕೆಟ್ ನೀಡಬಹುದು. ಕುರುಬಾ, ಲಿಂಗಾಯತ, ಒಕ್ಕಲಿಗಾ ಅಥವಾ ಬ್ರಾಹ್ಮಣ ಸಮುದಾಯದ ಯಾವುದೇ ವ್ಯಕ್ತಿಗೆ ಟಿಕೆಟ್ ನೀಡಬಹುದು; ಆದರೆ ಒಂದು ವಿಷಯ ಖಚಿತ, ನಾವು ಮುಸ್ಲಿಮರಿಗೆ ಟಿಕೆಟ್ ನೀಡುವುದಿಲ್ಲ ಎಂದು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ (ಬಿಜೆಪಿ) ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಅಂತರ್‌ಧರ್ಮೀಯ ವಿವಾಹಗಳಿಗೆ ೫೦ ಸಾವಿರ ರೂಪಾಯಿ ನೀಡುವ ನಿರ್ಧಾರವನ್ನು ಉತ್ತರಾಖಂಡದ ಬಿಜೆಪಿ ಸರಕಾರ ಹಿಂತೆಗೆದುಕೊಳ್ಳಲಿದೆ

ಉತ್ತರಾಖಂಡದ ಬಿಜೆಪಿ ಸರಕಾರ ಅಂತರ್‌ಧರ್ಮೀಯ ಮದುವೆಯಾಗುವ ದಂಪತಿಗಳಿಗೆ ಪ್ರೋತ್ಸಾಹಧನವಾಗಿ ೫೦ ಸಾವಿರ ರೂಪಾಯಿ ನೀಡುವ ಯೋಜನೆಯನ್ನು ಹಿಂತೆಗೆದುಕೊಳ್ಳಲಿದೆ. ಹಿಂದೂಗಳ ವ್ಯಾಪಕ ಟೀಕೆಗಳಿಂದಾಗಿ ಈಗ ಈ ಯೋಜನೆಯನ್ನು ಅಂತರ್ಜಾತಿ ದಂಪತಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಪುದುಚೇರಿಯಲ್ಲಿ ದೇವಾಲಯಕ್ಕೆ ನುಗ್ಗಿದ ಮತಾಂಧನು ಫೇಸ್ಬುಕ್ ಲೈವ್ ನಲ್ಲಿ ದೇವತೆಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ

ಇಲ್ಲಿಯ ಕಾರೈಕಲ್‌ನ ಪೆರುಮಾಲ ಕೋವಿಲ ಮಾರ್ಗದಲ್ಲಿರುವ ಪರ್ವತೀಸ್ವರಾರ ದೇವಸ್ಥಾನಕ್ಕೆ ಮಂಜೂರ ಅಲಿ ಎಂಬ ಮತಾಂಧನು ಪ್ರವೇಶಿಸಿ ಚಿತ್ರ ತೆಗೆಯಲು ಮತ್ತು ಚಿತ್ರೀಕರಣ ಮಾಡಲು ಪ್ರಾರಂಭಿಸಿದ. ನಂತರ ಆತ ಮೂರ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಪ್ರಾರಂಭಿಸಿದ.

ಮನೆಗೆ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿ ಪತ್ರಕರ್ತ ಮತ್ತು ಅವರ ಸ್ನೇಹಿತನ ಹತ್ಯೆ

೩೫ ವರ್ಷದ ಪತ್ರಕರ್ತ ರಾಕೇಶ ಸಿಂಹ ಮತ್ತು ಅವರ ಸ್ನೇಹಿತ ಪಿಂಟು ರಾಹು ಅವರ ಮನೆಗೆ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ನಡೆದಿದೆ. ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಲಿತ ಮಿಶ್ರಾ, ಕೇಶವಾನಂದ ಮಿಶ್ರಾ ಅಲಿಯಾಸ್ ರಿಂಕು ಮತ್ತು ಅಕ್ರಮ ಅಲಿ ಈ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೂವರೂ ಹತ್ಯೆ ಮಾಡಿರುವ ತಪ್ಪೊಪ್ಪಿಕೊಂಡಿದ್ದಾರೆ.

ಇಸ್ಲಾಮಿಕ್ ರಾಷ್ಟ್ರಗಳ ಸಭೆಯಲ್ಲಿ ಕಾಶ್ಮೀರದ ಸೂತ್ರದ ಬಗ್ಗೆ ಯಾವುದೇ ಚರ್ಚೆಯಿಲ್ಲ !

ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರ ಅಂಶದ ಬಗ್ಗೆ ಪುನಃ ಸೋತಿದೆ. ‘ಆರ್ಗನೈಜೆಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್’ (ಒಐಸಿಯ) ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಕಾಶ್ಮೀರದ ವಿಷಯವನ್ನು ಚರ್ಚಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿತ್ತು; ಆದರೆ, ಈ ವಿಷಯದ ಬಗ್ಗೆ ಚರ್ಚಿಸುವುದಿಲ್ಲ, ಈ ಸಂಘಟನೆಯಿಂದ ಈ ಹಿಂದೆ ಸ್ಪಷ್ಟ ಪಡಿಸಲಾಗಿತ್ತು

ಚೀನಾದಿಂದ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣ !

ಟಿಬೆಟ್‌ನಿಂದ ಉಗಮವಾಗುವ ಬ್ರಹ್ಮಪುತ್ರ ನದಿಯಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ. ಅಣೆಕಟ್ಟು ವಿಶ್ವದ ಅತಿದೊಡ್ಡ ಅಣೆಕಟ್ಟು ಚೀನಾದ ಥ್ರೀ ಜಾರ್ಜ್‌ಗಿಂತ ಮೂರು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುವ ಕ್ಷಮತೆ ಹೊಂದಲಿದೆ. ಚೀನಾದ ಅಣೆಕಟ್ಟು ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಬರ ಪರಿಸ್ಥಿತಿಗೆ ಕಾರಣವಾಗಬಹುದು ಎಂಬ ಆತಂಕಗಳಿವೆ.

ಮುಸ್ಲಿಂ ಪತಿಯಿಂದ ಹಿಂದೂ ಹೆಂಡತಿಗೆ ಉರ್ದು ಮತ್ತು ಅರೇಬಿಕ್ ಕಲಿಯುವಂತೆ ಒತ್ತಡ ಮತ್ತು ಕಿರುಕುಳ

ಇಲ್ಲಿಯ ಹಿಂದೂ ಯುವತಿ ಜ್ಯೋತಿ ದಹಿಯಾ ೨ ವರ್ಷಗಳ ಹಿಂದೆ ಮೊಹಮ್ಮದ್ ಇರ್ಷಾದ್ ಖಾನ್ ಎಂಬವನನ್ನು ವಿವಾಹವಾದರು. ಈಗ ಮೊಹಮ್ಮದ್ ಇರ್ಷಾದ್ ಅವಳಿಗೆ ಉರ್ದು ಮತ್ತು ಅರೇಬಿಕ್ ಭಾಷೆಯನ್ನು ಕಲಿಯುವಂತೆ ಒತ್ತಡ ಹೇರುತ್ತಿದ್ದಾನೆ ಮತ್ತು ಅದಕ್ಕಾಗಿ ಅವಳಿಗೆ ಕಿರುಕುಳ ನೀಡುತ್ತಿದ್ದಾನೆ.