ಹಿಂದೂ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಯುವಕನ ಮತಾಂತರ

ಯುವತಿಯ ಕುಟುಂಬದಿಂದ ಅಪಾಯವಿರುವ ಕಾರಣ ನ್ಯಾಯಾಲಯದ ಆದೇಶದ ನಂತರ ಪೊಲೀಸರಿಂದ ರಕ್ಷಣೆ !

ಮುಸ್ಲಿಂ ಯುವಕನ ಮತಾಂತರ ಎಷ್ಟು ಕಾಲ ಉಳಿಯುತ್ತದೆ ? ಅಥವಾ ಅವನು ನಂತರ ಹಿಂದೂ ಹುಡುಗಿಯನ್ನೇ ಮತಾಂತರಗೊಳಿಸುತ್ತಾನೆಯೇ ? ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುವುದರಲ್ಲಿ ಆಶ್ಚರ್ಯವಿದೆಯೇ ?

ಯಮುನಾನಗರ (ಹರಿಯಾಣಾ) – ಹಿಂದೂ ಯುವತಿಯನ್ನು ಮದುವೆಯಾಗಲು ಮುಸಲ್ಮಾನ ಯುವಕನು ಮತಾಂತರಗೊಂಡ ನಂತರ ಇಬ್ಬರಿಗೂ ಪೊಲೀಸರು ರಕ್ಷಣೆ ನೀಡಿದ್ದಾರೆ. ಅವರು ಭದ್ರತೆಗಾಗಿ ಪಂಜಾಬ ಮತ್ತು ಹರಿಯಾಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಯುವತಿಯ ಕುಟುಂಬವನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಕಮಲದೀಪ ಇವರು, ನವೆಂಬರ್ ೯ ರಂದು ೨೧ ವರ್ಷದ ಯುವಕ ಮತ್ತು ೧೯ ವರ್ಷದ ಯುವತಿಯು ಹಿಂದೂ ಪದ್ದತಿಯಲ್ಲಿ ವಿವಾಹವಾದರು, ಯುವಕ ಮದುವೆಯ ನಂತರ ತನ್ನ ಹೆಸರನ್ನು ಕೂಡ ಬದಲಾಯಿಸಿದ್ದ. ‘ಯುವತಿಯ ಕುಟುಂಬದಿಂದ ಜೀವಕ್ಕೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಪಾಯವಿದೆ’ ಎಂದು ಆರೋಪಿಸಿ ಇವರಿಬ್ಬರು ನಂತರ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಎಂದು ತಿಳಿಸಿದ್ದಾರೆ.