ಪೊಲೀಸರಿಂದ ಬಂಧನ
|
ಪುದುಚೇರಿ – ಇಲ್ಲಿಯ ಕಾರೈಕಲ್‌ನ ಪೆರುಮಾಲ ಕೋವಿಲ ಮಾರ್ಗದಲ್ಲಿರುವ ಪರ್ವತೀಸ್ವರಾರ ದೇವಸ್ಥಾನಕ್ಕೆ ಮಂಜೂರ ಅಲಿ ಎಂಬ ಮತಾಂಧನು ಪ್ರವೇಶಿಸಿ ಚಿತ್ರ ತೆಗೆಯಲು ಮತ್ತು ಚಿತ್ರೀಕರಣ ಮಾಡಲು ಪ್ರಾರಂಭಿಸಿದ. ನಂತರ ಆತ ಮೂರ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಪ್ರಾರಂಭಿಸಿದ. ಆತ ಈ ಘಟನೆಯನ್ನು ‘ಫೇಸ್‌ಬುಕ್’ನಲ್ಲಿ ನೇರ ಪ್ರಸಾರ ಮಾಡಲು ಪ್ರಾರಂಭಿಸಿದ.
Puducherry resident Manzoor Ali abuses Hindu deities, priests at a Hindu temple, arrested: Reports https://t.co/LPjvz7OhEF
— OpIndia.com (@OpIndia_com) November 29, 2020
ದೇವಾಲಯದಲ್ಲಿದ್ದ ಪುರೋಹಿತರು ಮತ್ತು ಭಕ್ತರು ಆತನನ್ನು ತಡೆಯಲು ಪ್ರಯತ್ನಿಸಿದಾಗ ಆತ ಅವರಿಗೂ ಬೈಗುಳ ನೀಡಿದನು. ಆದ್ದರಿಂದ ಪುರೋಹಿತರು ಪೊಲೀಸರನ್ನು ಕರೆದರು. ನಂತರ ಮಂಜೂರ ಅಲಿಯನ್ನು ಬಂಧಿಸಲಾಯಿತು. ಜೊತೆಗೆ ಆತನ ಮೊಬೈಲ್ ಫೋನ್ ಕೂಡ ಮುಟ್ಟುಗೋಲು ಹಾಕಿಕೊಂಡರು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.