ಮತ್ತೆ ಮುಜುಗರಕ್ಕೆ ಒಳಗಾದ ಪಾಕಿಸ್ತಾನ !
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರ ಅಂಶದ ಬಗ್ಗೆ ಪುನಃ ಸೋತಿದೆ. ‘ಆರ್ಗನೈಜೆಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್’ (ಒಐಸಿಯ) ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಕಾಶ್ಮೀರದ ವಿಷಯವನ್ನು ಚರ್ಚಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿತ್ತು; ಆದರೆ, ಈ ವಿಷಯದ ಬಗ್ಗೆ ಚರ್ಚಿಸುವುದಿಲ್ಲ, ಈ ಸಂಘಟನೆಯಿಂದ ಈ ಹಿಂದೆ ಸ್ಪಷ್ಟ ಪಡಿಸಲಾಗಿತ್ತು ಮತ್ತು ಅದರಂತೆ ಈ ಸಭೆಯಲ್ಲಿ, ಕಾಶ್ಮೀರದ ಪ್ರಶ್ನೆಯ ಬಗ್ಗೆ ಯಾವುದೇ ರೀತಿಯಲ್ಲಿ ಚರ್ಚೆಯಾಗಲಿಲ್ಲ.
Pakistan tries to brush off OIC snub on not discussing Kashmir issuehttps://t.co/7tSAmNmogc pic.twitter.com/RTPLfdO9h5
— Hindustan Times (@htTweets) November 26, 2020
ಈ ಸಭೆಯಲ್ಲಿ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸ್ತಾಪನೆಯಂತೆ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ನಿಲುವನ್ನು ತೆಗೆದುಕೊಂಡರು.