ಅಂತರ್‌ಧರ್ಮೀಯ ವಿವಾಹಗಳಿಗೆ ೫೦ ಸಾವಿರ ರೂಪಾಯಿ ನೀಡುವ ನಿರ್ಧಾರವನ್ನು ಉತ್ತರಾಖಂಡದ ಬಿಜೆಪಿ ಸರಕಾರ ಹಿಂತೆಗೆದುಕೊಳ್ಳಲಿದೆ

ಉತ್ತರಾಖಂಡ ಸರಕಾರದ ಪ್ರಶಂಸನೀಯ ನಿರ್ಧಾರ !

ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಬಿಜೆಪಿ ಸರಕಾರ ಅಂತರ್‌ಧರ್ಮೀಯ ಮದುವೆಯಾಗುವ ದಂಪತಿಗಳಿಗೆ ಪ್ರೋತ್ಸಾಹಧನವಾಗಿ ೫೦ ಸಾವಿರ ರೂಪಾಯಿ ನೀಡುವ ಯೋಜನೆಯನ್ನು ಹಿಂತೆಗೆದುಕೊಳ್ಳಲಿದೆ. ಹಿಂದೂಗಳ ವ್ಯಾಪಕ ಟೀಕೆಗಳಿಂದಾಗಿ ಈಗ ಈ ಯೋಜನೆಯನ್ನು ಅಂತರ್ಜಾತಿ ದಂಪತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂತರ್‌ಧರ್ಮೀಯ ವಿವಾಹದ ದಂಪತಿಗಳಿಗೆ ಇದರ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಹ ರಾವತ ಘೋಷಿಸಿದರು. ಅದೇ ರೀತಿ ‘ಮೇಲಿನ ಆದೇಶ ಹೊರಡಿಸಿದವರ ವಿಚಾರಣೆ ಮಾಡಲಾಗುವುದು’, ಎಂದೂ ಕೂಡ ಅವರು ಹೇಳಿದರು. ಈ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಇದಕ್ಕೂ ಮೊದಲು ೧೦,೦೦೦ ರೂಪಾಯಿ ನೀಡಲಾಗುತ್ತಿತ್ತು.

ಉತ್ತರಾಖಂಡ ಸರಕಾರವು ೨೦೧೮ ರಲ್ಲಿ ಧರ್ಮ ಸ್ವಾತಂತ್ರ್ಯ ಕಾಯ್ದೆಯನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ಅಕ್ರಮ ಮತಾಂತರವನ್ನು ನಿಷೇಧಿಸಲಾಗಿತ್ತು. ‘ಮೇಲಿನ ಯೋಜನೆ ಮತ್ತು ಈ ಕಾನೂನು ವಿರೋಧಾಭಾಸವಾಗಿದೆ’ ಎಂದು ಹಿಂದೂ ಸಂಘಟನೆಗಳು ಮುಖ್ಯಮಂತ್ರಿಯ ಗಮನಕ್ಕೆ ತಂದುಕೊಟ್ಟರು. ಅದೇರೀತಿ ‘ಮೇಲಿನ ಯೋಜನೆಯನ್ನು ಅನುಷ್ಠಾನಗೊಳಿಸುವುದು ಅಂದರೆ ‘ಲವ್ ಜಿಹಾದ್’ ಅನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ’, ಎಂದು ಸಹ ಹೇಳಿದ್ದರು.