ಕರ್ನಾಟಕದ ಮಾಜಿ ಮಂತ್ರಿಗಳನ್ನು ಅಪಹರಣ ಮತ್ತು ಬಿಡುಗಡೆ

ವರ್ತೂರು ಪ್ರಕಾಶ್

ಬೆಂಗಳೂರು – ರಾಜ್ಯದ ಮಾಜಿ ಮಂತ್ರಿ ವರ್ತೂರು ಪ್ರಕಾಶ್ ಅವರನ್ನು ನವೆಂಬರ್ ೨೭ ರಂದು ಎಂಟು ಜನರು ಅಪಹರಿಸಿದ್ದರು; ಆದರೆ, ಅವರನ್ನು ಮರುದಿನ ಬಿಡುಗಡೆ ಮಾಡಲಾಯಿತು. ಈ ಬಗ್ಗೆ ಪತ್ರಕರ್ತರು ವಿಚಾರಿಸಿದಾಗ ‘ನಾನು ಅದರ ಬಗ್ಗೆ ನಂತರ ತಿಳಿಸುತ್ತೇನೆ’ ಎಂದು ಪ್ರಕಾಶ್ ಹೇಳಿದರು. ಮತ್ತೊಂದೆಡೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಅಪಹರಣದ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ.