ಚೀನಾದಿಂದ ಬ್ರಹ್ಮಪುತ್ರ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣ !

ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಬರಗಾಲದ ಸಾಧ್ಯತೆ

ಇದು ಭಾರತದ ಮೇಲೆ ಒಂದು ರೀತಿಯ ದಾಳಿಯಾಗಿದೆ. ಇಂತಹ ಘಟನೆಗಳನ್ನು ತಡೆಯಲು ಭಾರತವೂ ಚೀನಾಕ್ಕೆ ಖಂಡತುಂಡವಾಗಿ ಉತ್ತರಿಸಬೇಕು !

ಬೀಜಿಂಗ್ (ಚೀನಾ) – ಟಿಬೆಟ್‌ನಿಂದ ಉಗಮವಾಗುವ ಬ್ರಹ್ಮಪುತ್ರ ನದಿಯಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ. ಅಣೆಕಟ್ಟು ವಿಶ್ವದ ಅತಿದೊಡ್ಡ ಅಣೆಕಟ್ಟು ಚೀನಾದ ಥ್ರೀ ಜಾರ್ಜ್‌ಗಿಂತ ಮೂರು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುವ ಕ್ಷಮತೆ ಹೊಂದಲಿದೆ. ಚೀನಾದ ಅಣೆಕಟ್ಟು ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಬರ ಪರಿಸ್ಥಿತಿಗೆ ಕಾರಣವಾಗಬಹುದು ಎಂಬ ಆತಂಕಗಳಿವೆ. ಚೀನಾ ಈಗಾಗಲೇ ಬ್ರಹ್ಮಪುತ್ರ ನದಿಯಲ್ಲಿ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿದೆ; ಆದರೆ ಹೊಸ ಅಣೆಕಟ್ಟು ಬ್ರಹದಾಕಾರದ್ದಾಗಿರುವುದರಿಂದ ಕಳವಳ ವ್ಯಕ್ತಪಡಿಸಲಾಗುತ್ತಿದೆ.

ಪಂಚವಾರ್ಷಿಕ ಯೋಜನೆಯ ಪ್ರಕಾರ ಅಣೆಕಟ್ಟು ನಿರ್ಮಿಸಲಾಗುವುದು ಎಂದು ಚೀನಾದ ಇಂಧನ ಉತ್ಪಾದನಾ ನಿಗಮದ ಅಧ್ಯಕ್ಷ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಾಯಕ ಯಾನ್ ಕ್ಸಿಯಾಂಗ್ ಹೇಳಿದ್ದಾರೆ. ಈ ಯೋಜನೆ ೨೦೨೫ ರವರೆಗೆ ಜಾರಿಯಲ್ಲಿರುತ್ತದೆ.

(ಸೌಜನ್ಯ : South China Morning Post)

ಚೀನಾದಲ್ಲಿನ ಜಲವಿದ್ಯುತ್ ಉದ್ಯಮಕ್ಕೆ ಇದು ಒಂದು ದೊಡ್ಡ ಅವಕಾಶವಾಗಿದ್ದು, ಇದು ವಾರ್ಷಿಕವಾಗಿ ೩೦೦ ಅಬ್ಜ ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಚೀನಾದಲ್ಲಿ ಮಾಲಿನ್ಯ ಮುಕ್ತ ವಿದ್ಯುತ್ತನ್ನು ಉತ್ಪಾದಿಸುವುದಾಗಿ ಸರಕಾರ ನಿರ್ಧರಿಸಿತ್ತು.