ಮನೆಗೆ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿ ಪತ್ರಕರ್ತ ಮತ್ತು ಅವರ ಸ್ನೇಹಿತನ ಹತ್ಯೆ

ಉತ್ತರ ಪ್ರದೇಶದಲ್ಲಿ ಪತ್ರಕರ್ತನು ಹಗರಣವನ್ನು ಬಹಿರಂಗಪಡಿಸಿದ ಪರಿಣಾಮ !

ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಬಹಳ ಹದಗೆಟ್ಟಿದೆ, ಇದು ಪ್ರತಿದಿನವೂ ವಿವಿಧ ಘಟನೆಗಳಿಂದ ಬಹಿರಂಗವಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಸರಕಾರವೂ ರಾಜ್ಯ ಸರಕಾರಕ್ಕೆ ಸಹಾಯ ಮಾಡಬೇಕು ಎಂದು ಜನರಿಗೆ ಅನಿಸುತ್ತದೆ !

ಬಲರಾಮಪುರ (ಉತ್ತರ ಪ್ರದೇಶ) – ೩೫ ವರ್ಷದ ಪತ್ರಕರ್ತ ರಾಕೇಶ ಸಿಂಹ ಮತ್ತು ಅವರ ಸ್ನೇಹಿತ ಪಿಂಟು ರಾಹು ಅವರ ಮನೆಗೆ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ನಡೆದಿದೆ. ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಲಿತ ಮಿಶ್ರಾ, ಕೇಶವಾನಂದ ಮಿಶ್ರಾ ಅಲಿಯಾಸ್ ರಿಂಕು ಮತ್ತು ಅಕ್ರಮ ಅಲಿ ಈ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೂವರೂ ಹತ್ಯೆ ಮಾಡಿರುವ ತಪ್ಪೊಪ್ಪಿಕೊಂಡಿದ್ದಾರೆ.

(ಸೌಜನ್ಯ : NDTV)

ಬಲರಾಂಪುರ ಪೊಲೀಸ್ ವರಿಷ್ಠಾಧಿಕಾರಿ ದೇವರಂಜನ ವರ್ಮಾ ಇವರು ನೀಡಿದ ಮಾಹಿತಿಯ ಪ್ರಕಾರ, ಕೇಶವಾನಂದ ಅವರ ತಾಯಿ ಗ್ರಾಮದ ಮುಖ್ಯಸ್ಥರಾಗಿದ್ದರು. ಆಕೆ ಮಾಡಿದ ಹಗರಣವನ್ನು ರಾಕೇಶ್ ಸಿಂಹ ಬಹಿರಂಗಪಡಿಸಿದ್ದರು. ಈ ಬಗ್ಗೆ ಆರೋಪಿಯ ಮನಸ್ಸಿನಲ್ಲಿ ದ್ವೇಷ ಇತ್ತು. ಆರೋಪಿಗಳು ರಾಕೇಶ್ ಸಿಂಹ ಮನೆಗೆ ಚರ್ಚೆಗೆ ಹೋಗಿದ್ದರು. ಈ ಸಮಯದಲ್ಲಿ ಅವರು ರಾಕೇಶ್ ಸಿಂಹ ಮತ್ತು ಅವರ ಸ್ನೇಹಿತನಿಗೆ ಮದ್ಯ ಕುಡಿಸಿ, ಸ್ಯಾನಿಟೈಜರ್ ಸುರಿದು ಮನೆಗೆ ಬೆಂಕಿ ಹಚ್ಚಲಾಯಿತು. ಮನೆಗೆ ಬೆಂಕಿ ಹಚ್ಚಲು ಲಲಿತ ಮಿಶ್ರಾ ಮತ್ತು ಕೇಶವಾನಂದ ಮಿಶ್ರಾರವರು ಅಕ್ರಮ್ ಅಲಿಯ ಅಲಿಯಾಸ್ ಅಬ್ದುಲ್ ಖಾದಿರ್ ಎಂಬವನ ಸಹಾಯವನ್ನು ಪಡೆದರು. ಖಾದಿರ್ ಈ ಮೊದಲು ಇದೇ ರೀತಿಯ ಅಪರಾಧಗಳನ್ನು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಸ್ಥಳೀಯ ಆಡಳಿತ ತಲಾ ೫ ಲಕ್ಷ ರೂಪಾಯಿ ಸಹಾಯ ನೀಡಿದ್ದಾರೆ.