ಚರ್ಚ್‌ನ ಪಾದ್ರಿಯಿಂದ ನಿಶ್ಚಯವಾದ ವಧುವನ್ನು ಲೈಂಗಿಕ ಕಿರುಕುಳ ನೀಡಿ ಮದುವೆಯಾಗಲು ನಿರಾಕರಣೆ

ಈ ಬಗ್ಗೆ ಕ್ರೈಸ್ತ ಸಂಘಟನೆಗಳು ಮತ್ತು ಜಾತ್ಯತೀತ ಸಂಸ್ಥೆಗಳು ಮಾತನಾಡುತ್ತವೆಯೇ ?

ಹಿಂದೂ ಸಂತರ ವಿರುದ್ಧ ಯಾರಾದರೂ ಆರೋಪಗಳನ್ನು ಮಾಡಿದರೂ, ಹಿಂದೂ ಸಂತರನ್ನು ದೂಷಿಸುವ ಜನಪ್ರಿಯ ಮಾಧ್ಯಮಗಳು ಈಗ ಮೌನವಾಗಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕನ್ಯಾಕುಮಾರಿ (ತಮಿಳುನಾಡು) – ಇಲ್ಲಿಯ ಪಾದ್ರಿ ಬಿನಿಲ್ ತನ್ನ ನಿಶ್ಚಿತ ವಧುವಿಗೆ ಲೈಂಗಿಕ ಕಿರುಕುಳ ಮತ್ತು ನಂತರ ಅವಳನ್ನು ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿದೆ. ಈ ಪಾದ್ರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಯುವತಿಗಾಗಿ ಪ್ರಾರ್ಥಿಸುವ ನೆಪದಲ್ಲಿ, ಪಾದ್ರಿ ಅವಳನ್ನು ತನ್ನ ಮನೆಗೆ ಕರೆದು ಅವಳೊಂದಿಗೆ ಲೈಂಗಿಕ ಸಂಪರ್ಕ ಪ್ರಸ್ತಾಪಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

೧. ಸಂತ್ರಸ್ಥೆಯ ಪೋಷಕರು ಆಕೆಗೆ ಸೂಕ್ತವಾದ ವರನನ್ನು ಹುಡುಕುತ್ತಿದ್ದರು. ಸಹಜವಾಗಿ, ಅವರು ಪಾದ್ರಿ ಬಿನಿಲ್ ನನ್ನು ಭೇಟಿಯಾದರು ಮತ್ತು ಅವರ ಮಗಳನ್ನು ಅವನೊಂದಿಗೆ ಮದುವೆ ಮಾಡಿಸಲು ನಿರ್ಧರಿಸಿದರು. ಎಲ್ಲವನ್ನೂ ಔಪಚಾರಿಕವಾಗಿ ನಿರ್ಧರಿಸಿದ ನಂತರ, ಪಾದ್ರಿ ಯುವತಿಗೆ ವಿವಾಹದ ಭರವಸೆಯನ್ನು ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ರೀತಿ ಸುಮಾರು ೨ ತಿಂಗಳುಗಳ ಕಾಲ ನಡೆದಿದೆ. ಪಾದ್ರಿ ಆಕೆಯಿಂದ ಹಣ ಮತ್ತು ಆಭರಣಗಳನ್ನು ತೆಗೆದುಕೊಂಡಿದ್ದಾನೆ ಎಂದು ಅವಳು ಆರೋಪಿಸಿದ್ದಾಳೆ.

೨. ಪಾದ್ರಿಯು ಇದೇ ರೀತಿಯಲ್ಲಿ ಹಲವಾರು ಮಹಿಳೆಯರಿಗೆ ಮೋಸ ಮಾಡಿ ಅವರಿಂದ ಹಣವನ್ನು ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.