ಅಸ್ಸಾಂ ಸರಕಾರ ‘ಲವ್ ಜಿಹಾದ್’ ತಡೆಗಟ್ಟಲು ಕಾನೂನು ರೂಪಿಸುತ್ತಿದೆ ! – ಹಣಕಾಸು ಸಚಿವ ಹಿಮಂತ ಬಿಸ್ವಾ ಸರಮಾ

  • ಪ್ರತಿ ರಾಜ್ಯದಲ್ಲಿ ಇಂತಹ ಕಾನೂನು ರೂಪಿಸುವ ಬದಲು ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಇಡೀ ದೇಶಕ್ಕಾಗಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

  • ಲವ್ ಜಿಹಾದ್ ವಿರೋಧಿ ಕಾನೂನು ನಿರ್ಮಿಸಿ ನಿಲ್ಲಬಾರದು, ಹಿಂದೂ ಮಹಿಳೆಯರು ಮತ್ತು ಯುವತಿಯರಿಗೆ ಧರ್ಮ ಶಿಕ್ಷಣವನ್ನು ನೀಡಬೇಕು. ಅವರ ಮೇಲೆ ಸಾಧನೆಯ ಸಂಸ್ಕಾರವಾಗಿ ಅವರು ಸಾತ್ವಿಕವಾಗಿ, ಲವ್ ಜಿಹಾದ್‌ನ ಸಂಚಿಗೆ ಬಲಿಯಾಗುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.

ಹಿಮಂತ ಬಿಸ್ವಾ ಸರಮಾ

ಗೌಹಟ್ಟಿ (ಅಸ್ಸಾಂ) – ಅಸ್ಸಾಂನಲ್ಲಿಯೂ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಬರುತ್ತಿದೆ. ಇದರ ಅಡಿಯಲ್ಲಿ, ಮದುವೆಗೆ ೧ ತಿಂಗಳ ಮೊದಲು ಮದುವೆಯಾಗಲಿಚ್ಛಿಸುವ ದಂಪತಿಗಳು ತಮ್ಮ ಧರ್ಮ ಮತ್ತು ಆದಾಯದ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.


ರಾಜ್ಯದ ಹಣಕಾಸು ಸಚಿವ ಹೀಮಂತ ಬಿಸ್ವಾ ಸರಮಾ ತಮ್ಮ ಮಾತನ್ನು ಮುಂದುವರೆಸುತ್ತಾ, ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಜಾರಿಗೆ ಬಂದ ಲವ್ ಜಿಹಾದ್ ವಿರೋಧಿ ಕಾನೂನುಗಳಿಗೆ ಅನುಗುಣವಾಗಿರುವುದಿಲ್ಲ; ಆದರೆ ಕೆಲವು ಹೋಲಿಕೆಗಳಿವೆ. ಇದು ಎಲ್ಲ ಧರ್ಮಗಳನ್ನು ಒಳಗೊಂಡ ಕಾನೂನಾಗಿರುತ್ತದೆ.