ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಬಿಜೆಪಿಯ ರಾಜ್ಯದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ದಾಳಿಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಬಜರಂಗ ದಳದ ಸಕ್ರಿಯ ಕಾರ್ಯಕರ್ತ ಶ್ರೀ. ನಾಗೇಶ

ಶಿವಮೊಗ್ಗ – ಇಲ್ಲಿಯ ಬಜರಂಗ ದಳದ ಸಕ್ರಿಯ ಕಾರ್ಯಕರ್ತ ಶ್ರೀ. ನಾಗೇಶ ಇವರ ಮೇಲೆ ದೀಪಕ ಪೆಟ್ರೋಲ್‌ಪಂಪ್‌ನ ಪಕ್ಕದಲ್ಲಿರುವ ಉರ್ದೂ ಶಾಲೆಯ ಹತ್ತಿರ ೧೦ ರಿಂದ ೧೫ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಇದರಲ್ಲಿ ಶ್ರೀ. ನಾಗೇಶ ಇವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಲ್ಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಶ್ರೀ. ನಾಗೇಶ ಇವರು ಗೋರಕ್ಷಣೆ, ಮತಾಂತರ ತಡೆಗಟ್ಟುವುದು ಇತ್ಯಾದಿಗಳಲ್ಲಿ ಮಂಚೂಣಿಯಲ್ಲಿದ್ದಾರೆ.