ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾನೂನಿನ ಮೂಲಪಾಠವೂ ತಿಳಿದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಛೀಮಾರಿ

ಮಸೀದಿಯ ಧ್ವನಿವರ್ಧಕಗಳಿಂದ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿ ಪ್ರಕ್ಷೇಪಣೆ ಆಗುತ್ತಿರುವ ಪ್ರಕರಣ

  • ನ್ಯಾಯಾಲಯವು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಬೇಕು ಎಂದು ಜನರಿಗೆ ಅನಿಸುತ್ತದೆ ! 
  • ನಿಯಮಗಳನ್ನು ಉಲ್ಲಂಘಿಸಿ ಆಜಾನ್ ನೀಡುವ ಮಸೀದಿಗಳಿಗೆ ಬೀಗ ಜಡಿಯುವ ನಿರ್ಧಾರವನ್ನು ನ್ಯಾಯಾಲಯ ನೀಡಬೇಕು ಎಂದು ಜನರಿಗೆ ಅನಿಸುತ್ತದೆ !

ಬೆಂಗಳೂರು – ಕರ್ನಾಟಕದ ಗೋವಿಂದರಾಜ ನಗರದ ಮಸೀದಿಯೊಂದರಲ್ಲಿ ನಮಾಜ್ ವೇಳೆ ಧ್ವನಿವರ್ಧಕದಿಂದ ನಿಗದಿತ ಡೆಸಿಬೆಲ್‌ಗಿಂತ ಹೆಚ್ಚು ಶಬ್ದ ಹೊರ ಹೊಮ್ಮುತ್ತಿರುವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಛೀಮಾರಿ ಹಾಕಿದೆ. ಈ ಕುರಿತು ನ್ಯಾಯವಾದಿ ಸುಮಂಗಲ ಎ. ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯವು ಅವರಿಗೆ ತರಾಟೆಗೆ ತೆಗೆದುಕೊಂಡಿದೆ.

೧. ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಿಯವರೆಗೆ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಯಾವುದೇ ಕ್ರಮ ಜರುಗಿಸಲು ಮುಂದಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಧ್ವನಿವರ್ಧಕದ ಡೆಸಿಬಲ್ ಅನ್ನು ಪರೀಕ್ಷಿಸಲಾಗಿಲ್ಲ. ಮಂಡಳಿಯ ಅಧಿಕಾರಿಗಳಿಗೆ ಕಾನೂನಿನ ಎಬಿಸಿಡಿ ಗೊತ್ತಿರುವಂತೆ ಕಾಣಿಸುತ್ತಿಲ್ಲ. ನ್ಯಾಯಾಲಯವು ಈ ಹಿಂದೆ ನೀಡಿದ್ದ ನಿರ್ದೇಶನಗಳನ್ನು ಮಂಡಳಿಯ ಅಧಿಕಾರಿಗಳು ಪಾಲಿಸಬೇಕು ಮತ್ತು ಒಂದು ವಾರದೊಳಗೆ ವರದಿಯನ್ನು ಸಲ್ಲಿಸಬೇಕು. ತಪ್ಪಿದರೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಲಾಗುವುದು ಎಂದು ನ್ಯಾಯಾಲಯವು ಎಚ್ಚರಿಕೆ ವಿಚಾರಣೆ ಮುಂದೂಡಿತು.

೨. ಅರ್ಜಿಯ ಕುರಿತು ಹಿಂದಿನ ವಿಚಾರಣೆಯ ವೇಳೆ ಮಂಡಳಿಯ ಅಧಿಕಾರಿಗಳು ನ್ಯಾಯಾಲಯಕ್ಕೆ ಲಿಖಿತ ಮಾಹಿತಿ ನೀಡಿ ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ ಅನುಮತಿ ನೀಡಿದ್ದಾರೆ ಹೀಗಾಗಿ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಅದರಿಂದ ಅಸಮಾಧಾನಗೊಂಡಿದ್ದ ಪೀಠ, ಶಬ್ದ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ೨೦೦೦ ನಿಯಮಗಳ ಪ್ರಕಾರ ಡಿವೈಎಸ್ಪಿ ಹಂತದ ಅಧಿಕಾರಿಗಳಿಗೆ ಮಾತ್ರ ಅನುಮತಿ ನೀಡುವ ಅಧಿಕಾರವಿದೆ. ಹೀಗಾಗಿ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ೧೯೮೬ ರ ಸೆಕ್ಷನ್ ೧೫ ರ ಅಡಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.