ಮುಸ್ಲಿಮರಿಗೆ ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಅನುಮತಿಸಬಾರದು !

  • ಸರ್ವೋಚ್ಚ ನ್ಯಾಯಾಲಯದಲ್ಲಿ ‘ಮುಸ್ಲಿಂ ಮರ್ಸನಲ್ ಲಾ’ಗೆ ಮೇಲ್ಮನವಿ

  • ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮೂಲಕ ೫ ವ್ಯಕ್ತಿಗಳ ಅರ್ಜಿ

ನ್ಯಾಯವಾದಿ ವಿಷ್ಣು ಶಂಕರ ಜೈನ್

ನವ ದೆಹಲಿ – ಇಸ್ಲಾಂ ನಂತಹ ಧರ್ಮದಲ್ಲಿ ಬಹುಪತ್ನಿತ್ವದ ಪದ್ದತಿ ಇರುವ ಬಗ್ಗೆ ಹಾಗೂ ಇತರ ಧರ್ಮಗಳಲ್ಲಿ ಇದಕ್ಕೆ ನಿಷೇಧ ವಿಧಿಸುವಂತಹ ಅನುಮತಿಯನ್ನು ನೀಡಲು ಸಾಧ್ಯವಿಲ್ಲ, ಎಂದು ಕೋರಿ ಐವರು ನ್ಯಾಯವಾದಿ ವಿಷ್ಣು ಶಂಕರ ಜೈನ್ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪದ್ಧತಿಯನ್ನು ಅಸಂವಿಧಾನಿಕ, ಮಹಿಳೆಯರಿಗೆ ಕಿರುಕುಳ ಮತ್ತು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಘೋಷಿಸಬೇಕು, ಅದೇರೀತಿ ಭಾ.ದಂ.ಸಂ. ಸೆಕ್ಷನ್ ೪೯೪ ಮತ್ತು ಮುಸ್ಲಿಂ ಪರ್ಸನಲ್ ಲಾ, ಸೆಕ್ಷನ್ ೧೯೩೭ ರ ಕಲಮ್ ೨ ಅನ್ನು ಅಸಂವಿಧಾನಿಕ ಎಂದು ಘೋಷಿಸುವಂತೆಯೂ ಈ ಅರ್ಜಿಯ ಮೂಲಕ ವಿನಂತಿಸಲಾಗಿದೆ. ಅದೇ ಕಲಂ ಅಡಿಯಲ್ಲಿ ಮುಸ್ಲಿಂ ಪುರುಷನಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಅವಕಾಶವಿದೆ.

ಈ ಅರ್ಜಿಯಲ್ಲಿ ಮುಂದಿನಂತೆ ಹೇಳಲಾಗಿದೆ,

೧. ಯಾವುದೇ ಹಿಂದೂ, ಕ್ರಿಶ್ಚಿಯನ್ ಅಥವಾ ಪಾರ್ಸಿ ವ್ಯಕ್ತಿಯು ತನ್ನ ಹೆಂಡತಿ ಜೀವಂತವಾಗಿರುವಾಗ ಮರುಮದುವೆಯಾಗುವುದು ಸೆಕ್ಷನ್ ೪೯೪ ಪ್ರಕಾರ ದಂಡನೀಯ; ಆದರೆ ಮುಸ್ಲಿಂ ಈ ರೀತಿ ಮಾಡಬಹುದು, ಅದು ಶಿಕ್ಷಾರ್ಹವಲ್ಲ. ಆದ್ದರಿಂದ ಸೆಕ್ಷನ್ ೪೯೪ ರ ಅಡಿಯಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ತೋರಿಸುತ್ತದೆ ಮತ್ತು ಇದರಿಂದ ಸಂವಿಧಾನದ ಕಲಮ್ ೧೪ ಮತ್ತು ೧೫ (೧) ರ ಉಲ್ಲಂಘನೆಯಾಗುತ್ತದೆ.

೨. ಒಬ್ಬ ವ್ಯಕ್ತಿಯು ತನ್ನ ಹೆಂಡತಿ ಅಥವಾ ಪತಿ ಜೀವಂತವಿರುವಾಗ ಅಂತಹ ಪರಿಸ್ಥಿತಿಯಲ್ಲಿ ಮದುವೆಯಾದರೆ, ಆ ವ್ಯಕ್ತಿಯು ಅಲ್ಪಾವಧಿಯ ಕೆಲವು ಸಮಯ ಜೈಲುವಾಸವನ್ನು ಅನುಭವಿಸಬೇಕಾಗುತ್ತದೆ. ಈ ಶಿಕ್ಷೆಯನ್ನು ೭ ವರ್ಷಗಳ ವರೆಗೆ ವಿಸ್ತರಿಸಬಹುದು. ಅಲ್ಲದೇ, ವ್ಯಕ್ತಿಯ ಮೇಲೆ ಆರ್ಥಿಕ ದಂಡ ವಿಧಿಸಲಾಗುತ್ತದೆ. ಇದನ್ನು ಭಾ.ದಂ.ಸಂ. ೪೯೪ ರಲ್ಲಿ ಉಲ್ಲೇಖಿಸಲಾಗಿದೆ.

೩. ಸೆಕ್ಷನ್ ೪೯೪ ನಿಂದ ‘ಅಂತಹ ಪರಿಸ್ಥಿತಿಯಲ್ಲಿ ಮದುವೆಯಾಗುವುದು ಕಾನೂನುಬಾಹಿರ’ ಎಂಬ ವಾಕ್ಯವನ್ನು ರದ್ದುಪಡಿಸಬೇಕು. ಸೆಕ್ಷನ್ ೪೯೪ ರ ಈ ಭಾಗವು ಮುಸ್ಲಿಂ ಸಮುದಾಯದಲ್ಲಿ ಅನೇಕ ವಿವಾಹ ಪದ್ಧತಿಗಳನ್ನು ರಕ್ಷಿಸುತ್ತದೆ; ಏಕೆಂದರೆ ಅವರ ವೈಯಕ್ತಿಕ ಕಾನೂನು ಅಂತಹ ಮದುವೆಗಳಿಗೆ ಅವಕಾಶ ನೀಡುತ್ತದೆ. ಮುಸ್ಲಿಂ ಸಮುದಾಯದಲ್ಲಿ, ಮುಸ್ಲಿಂ ಪರ್ಸ್‌ನಲ್ ಲಾ ಸೆಕ್ಷನ್ ೨ ರ ನಿಬಂಧನೆಗಳಿಗೆ ಅನುಗುಣವಾಗಿ ಮದುವೆ ಮತ್ತು ವಿಚ್ಛೇದನ ಪ್ರಕರಣಗಳನ್ನು ನಿರ್ವಹಿಸಲಾಗುತ್ತದೆ.

೪. ಈ ನಿಬಂಧನೆಯ ಪ್ರಕಾರ, ಎರಡನೇ ಮದುವೆಯು ಕಾನೂನುಬಾಹಿರವಾಗಿದ್ದರೆ ಎರಡನೇ ಹೆಂಡತಿಯ ಅಪರಾಧ (ಎರಡನೇ ಮದುವೆ) ಅದೇ ಸಂದರ್ಭಗಳಲ್ಲಿ ಶಿಕ್ಷೆಯಾಗುತ್ತದೆ. ಅಂದರೆ ಎರಡನೆಯ ವಿವಾಹವು ಪರ್ಸ್‌ನಲ್ ಲಾ ಅಡಿಯಲ್ಲಿ ಅಂತಹ ಮದುವೆಯನ್ನು ಗುರುತಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ಹಿಂದೂ, ಕ್ರಿಶ್ಚಿಯನ್ ಅಥವಾ ಪಾರ್ಸಿ ವ್ಯಕ್ತಿಯು ತನ್ನ ಹೆಂಡತಿಯ ಜೀವಿತಾವಧಿಯಲ್ಲಿ ಮರುಮದುವೆಯಾಗುವುದು ಸೆಕ್ಷನ್ ೪೯೪ ರ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ; ಆದರೆ ಇದು ಮುಸ್ಲಿಂ ವ್ಯಕ್ತಿಗೆ ಶಿಕ್ಷಾರ್ಹವಲ್ಲ.