ಕಾಠ್ಮಂಡು (ನೇಪಾಳ) – ನೇಪಾಳ ಸರಕಾರದ ಚೀನಾ ಪರ ನೀತಿಗಳನ್ನು ನೋಡಿ ಅಲ್ಲಿನ ಹಿಂದೂ ಜನರು ದೇಶದಲ್ಲಿ ಅರಸೊತ್ತಿಗೆ ಪುನಃ ತರಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ದ್ವಿಚಕ್ರ ವಾಹನಗಳನ್ನು ಬೀದಿಗಿಳಿದು ಕಮ್ಯುನಿಸ್ಟ್ ಪಕ್ಷದ ಕೆ.ಪಿ. ಶರ್ಮಾ ಒಲಿ ಸರಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನೇಪಾಳದಲ್ಲಿ, ಮೇ ೨೮, ೨೦೦೮ ರಂದು ಅರಸೊತ್ತಿಗೆ ಕೊನೆಗೊಂಡಿತ್ತು. ಅಂದಿನಿಂದ, ದೇಶದಲ್ಲಿ ಕಮ್ಯುನಿಸ್ಟರು ಅಧಿಕಾರದಲ್ಲಿದ್ದಾರೆ.
ರಾಷ್ಟ್ರೀಯ ಶಕ್ತಿ ನೇಪಾಳದ ಅಧ್ಯಕ್ಷ ಕೇಶವ್ ಬಹದೂರ್ ಬಿಸ್ಟ, ಪ್ರಸ್ತುತ ಸಂವಿಧಾನವನ್ನು ಕಿತ್ತುಹಾಕುವ ಬೆದರಿಕೆ ಹಾಕುತ್ತಾ, ‘ನಮಗೆ ಮೂರು ಮುಖ್ಯ ಉದ್ದೇಶಗಳಿವೆ. ಸಾಂವಿಧಾನಿಕ ಅರಸೊತ್ತಿಗೆಯ4 ಸ್ಥಾಪನೆ, ನೇಪಾಳವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಮತ್ತು ಒಕ್ಕೂಟ ವ್ಯವಸ್ಥೆಯನ್ನು (ಫೆಡೆರಲಿಸಂ) ನಾಶ ಮಾಡುವುದು; ಏಕೆಂದರೆ ಅದು ಜನರನ್ನು ವಿಭಜಿಸುತ್ತದೆ ಮತ್ತು ರಾಷ್ಟ್ರವನ್ನು ಬಿಕ್ಕಟ್ಟಿನಲ್ಲಿರಿಸುತ್ತದೆ. ಸಾಮಾನ್ಯ ಜನರನ್ನು ಉಳಿಸುವುದು ಕಷ್ಟಕರವಾಗಿದೆ. ದೇಶ ಬಿಕ್ಕಟ್ಟಿನಲ್ಲಿದೆ; ಆದರೆ ನಮ್ಮ ನಾಯಕರು ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದರು.