ಭಾರತ ಇಡೀ ಜಗತ್ತಿನ ನೇತೃತ್ವವನ್ನು ವಹಿಸಲು ಸಕ್ಷಮ ! – ಆರ್.ಎಸ್.ಎಸ್ ಸರಸಂಘಚಲಕ ಡಾ. ಮೋಹನ ಭಾಗವತ

ಸರಸಂಘಚಲಕ ಡಾ. ಮೋಹನ ಭಾಗವತ

ನವ ದೆಹಲಿ – ‘ವೈವಿಧ್ಯತೆಯನ್ನು ಜೋಡಿಸುವ ಘಟಕ ಕೇವಲ ಭಾರತದ ಹತ್ತಿರವಿದ್ದು, ಅದನ್ನು ಜಗತ್ತಿಗೆ ನೀಡುವುದಿದೆ. ಭಾರತವು ಇಡೀ ಜಗತ್ತಿನ ನೇತೃತ್ವ ವಹಿಸಲು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕರು ಡಾ. ಮೋಹನ ಭಾಗವತ ಇವರು ದೂರಸಂಪರ್ಕ ವ್ಯವಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಇದನ್ನು ಹೇಳಿದರು. ಅವರು ’ಜಾಗತಿಕ ದೃಷ್ಟಿಕೋನದಿಂದ ಭಾರತದ ಪಾತ್ರ’ ಕುರಿತು ಮಾತನಾಡುತ್ತಿದ್ದರು. ‘ವಿಶ್ವ ಕಲ್ಯಾಣಕ್ಕಾಗಿ ಭಾರತದ ವಿಚಾರಗಳು ಹೆಚ್ಚು ಪರಿಣಾಮಕಾರಿಯಾಗಿದ್ದು ಜಗತ್ತಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ನಮ್ಮ ಪರಂಪರೆಯಲ್ಲಿವೆ’ ಎಂದು ಅವರು ಹೇಳಿದರು.

ಸರಸಂಘಚಾಲಕ ಭಾಗವತ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ನಮಗೆ ಹೋರಾಟ ಮಾಡಿ ಜಗತ್ತಿನ ಮೇಲೆ ಜಯ ಸಾಧಿಸುವ ಆವಶ್ಯಕತೆಯಿಲ್ಲ. ಇದಕ್ಕಾಗಿ ನಮಗೆ ರಕ್ತ ಚೆಲ್ಲಲು ಇಷ್ಟವಿಲ್ಲ. ದಬ್ಬಾಳಿಕೆ ಮತ್ತು ಆಮಿಶಗಳ ಮೂಲಕ ಜನರನ್ನು ಅವರ ಮೂಲಗಗಳಿಂದ ಬೇರ್ಪಡಿಸಲು ಬಯಸುವುದಿಲ್ಲ. ನಮ್ಮ ದೇಶದ ಉದಾಹರಣೆಯ ಮೂಲಕ ನಾವು ಜಗತ್ತಿಗೆ ವಿಷಯಗಳನ್ನು ತಿಳಿಸಲು ಬಯಸುತ್ತೇವೆ. ನಾವು ಇಂದಿನ ಜ್ಞಾನ ಮತ್ತು ವಿಜ್ಞಾನವನ್ನು ಸಹ ಸ್ವೀಕರಿಸಲು ಬಯಸುತ್ತೇವೆ. ಯಾವುದೇ ನಾಯಕ ಇದನ್ನು ಮಾಡುವುದಿಲ್ಲ, ಸಮಾಜವೇ ಇದನ್ನು ಮಾಡಬೇಕಾಗುತ್ತದೆ.

೨. ಅಮೇರಿಕಾ, ರಷ್ಯಾ ಮತ್ತು ಚೀನಾ ನಡುವಿನ ಶೀತಲ ಸಮರದ ಹಿನ್ನೆಲೆಯಲ್ಲಿ, ಇಡೀ ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಇತರ ದೇಶಗಳು ಜಗತ್ತನ್ನು ಮಾರುಕಟ್ಟೆಯೆಂದು ಪರಿಗಣಿಸುತ್ತವೆ; ಆದರೆ ಭಾರತವು ಇಡೀ ವಿಶ್ವವನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತದೆ. ‘ಎಲ್ಲರಿಗೂ ಸುಖ ಸಿಗಲಿ’ ಎಂಬುವುದೇ ಭಾರತದ ವಿಚಾರವಾಗಿದೆ. ಇದರಲ್ಲಿ ಯಾರನ್ನೂ ಸಣ್ಣದಾಗಿ ಪರಿಗಣಿಸಲಾಗುವುದಿಲ್ಲ, ಇದನ್ನೇ ಭಾರತಕ್ಕೆ ನೀಡಲಿದೆ. ಇದರಲ್ಲಿ ಅಭಿವೃದ್ಧಿ, ಪರಿಸರದ ರಕ್ಷಣೆ, ವ್ಯಕ್ತಿಯ ಸಬಲೀಕರಣ ಮತ್ತು ಸಮಾಜವೂ ನಿಜವಾದ ಅರ್ಥದಲ್ಲಿ ಪ್ರಬಲವಾಗಲಿದೆ.