ಪಾಕ್‌ನಲ್ಲಿ ಹಿಂದೂವಿನ ಸುಡುತ್ತಿರುವ ಚಿತೆಯ ಮೇಲೆ ಮತಾಂಧ ಮುಸಲ್ಮಾನರಿಂದ ನೀರು ಸುರಿದು ನಂದಿಸುವ ಪ್ರಯತ್ನ !

ದಾದು ನಗರದಲ್ಲಿ ಓರ್ವ ಹಿಂದೂ ವ್ಯಕ್ತಿಯ ಮೃತದೇಹದ ಅಂತಿಮಕ್ರಿಯೆ ಮಾಡಲು ಮತಾಂಧ ಮುಸಲ್ಮಾನರು ವಿರೋಧಿಸಿದ್ದಾರೆ. ಮತಾಂಧ ಮುಸಲ್ಮಾನರು ಸುಡುತ್ತಿರುವ ಚಿತೆಯ ಮೇಲೆ ನೀರು ಸುರಿದು ನಂದಿಸಲು ಪ್ರಯತ್ನಿಸಿದರು.

ಕುಲಗಾಮ್ (ಜಮ್ಮು – ಕಾಶ್ಮೀರ) ನಲ್ಲಿ ನಡೆದ ಚಕಮಕಿಯಲ್ಲಿ ಇಬ್ಬರು ಉಗ್ರರ ಹತ್ಯೆ

ಕುಲಗಾಮ್‌ನಲ್ಲಿ ಜೂನ್ ೧೩ ರಂದು ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಕೆಲವು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಭದ್ರತಾ ಪಡೆಗಳಿಗೆ ಮಾಹಿತಿ ಬಂದ ನಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಈ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ. ಅದಕ್ಕೆ ಸೈನಿಕರು ಪ್ರತ್ಯುತ್ತರ ನೀಡಿದರು.

ತಮ್ಮ ರಕ್ಷಣೆಗಾಗಿ ಕಾಶ್ಮೀರಿ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ !

ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಶ್ಮೀರ ಕಣಿವೆಯಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು, ಎಂದು ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರು ಆಂಗ್ಲ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು. ಕಾಶ್ಮೀರಿ ಹಿಂದೂಗಳಾದ ಪಂಚಾಯತಿ ಅಧ್ಯಕ್ಷ ಅಜಯ ಪಂಡಿತಾ ಅವರನ್ನು ಜಿಹಾದಿ ಉಗ್ರರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಅವರು ಈ ಸಲಹೆ ನೀಡಿದರು.

ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

ಹಳ್ಳಿಗಳಲ್ಲಿ, ಹಾಗೆಯೇ ಅವುಗಳ ಹತ್ತಿರದ ಅರಣ್ಯಗಳಲ್ಲಿ ಬಹಳಷ್ಟು ಔಷಧಿ ಸಸ್ಯಗಳು ದೊರೆಯುತ್ತವೆ. ಅಲ್ಲಿನ ವಯಸ್ಕರ ಜನರಿಗೆ ಈ ಸಸ್ಯಗಳ ಬಗ್ಗೆ ಗೊತ್ತಿರುತ್ತದೆ. ನಗರಗಳಲ್ಲಿರುವ ಹೆಚ್ಚಿನ ಜನರು ರಜೆಯ ನಿಮಿತ್ತ ತಮ್ಮ ಹಳ್ಳಿಗಳಿಗೆ (ಊರಿಗೆ) ಹೋಗುತ್ತಿರುತ್ತಾರೆ. ಇಂತಹ ಸಮಯದಲ್ಲಿ ತಮಗೆ ಬೇಕಾದ ಸಸ್ಯಗಳ ಬೀಜ ಅಥವಾ ಸಸಿಗಳನ್ನು ತಮ್ಮ ಊರಿನಿಂದ ತರಬಹುದು.

ವಿಶ್ವವ್ಯಾಪಿ ಕೊರೊನಾ ಆವರಿಸಿದ ವೇಳೆ ಮನುಷ್ಯನಿಗೆ ಸಂಜೀವಿನಿಯಾದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ‘ಆನ್‌ಲೈನ್ ಸತ್ಸಂಗ ಮಾಲಿಕೆ

ಇಂತಹ ಅನೇಕ ಅಭಿಪ್ರಾಯಗಳಿಂದ ನಮಗೆ ಈ ಸತ್ಸಂಗದ ಮಾಧ್ಯಮದಿಂದ ಸಾಧಿಸಿರುವ ಪರಿಣಾಮವು ಗಮನಕ್ಕೆ ಬರುತ್ತದೆ. ಅನೇಕ ವೈಶಿಷ್ಟ್ಯಪೂರ್ಣ ಅಭಿಪ್ರಾಯಗಳು ಬಂದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ಈ ಸತ್ಸಂಗದ ಮಾಧ್ಯಮದಿಂದ ನೀಡುತ್ತಿರುವ ಅಮೂಲ್ಯ ಜ್ಞಾನದ ಅಸಾಧಾರಣ ಮಹತ್ವದ ಅರಿವಾಯಿತು.

ವಿವಿಧ ವಿಷಯಗಳ ಬಗ್ಗೆ ಆರಂಭವಾದ ‘ಆನ್‌ಲೈನ್ ಸತ್ಸಂಗಗಳು

ಈಶ್ವರನ ಕುರಿತು ಭಕ್ತಿಯನ್ನು ಹೆಚ್ಚಿಸುವ ಈ ಭಾವಸತ್ಸಂಗವನ್ನು ಎಲ್ಲರೂ ಇಷ್ಟಪಟ್ಟು ನೋಡುತ್ತಾರೆ. ಅಲ್ಲದೇ ಈ ವಿಷಯದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಚಿಕ್ಕ ಚಿಕ್ಕ ಕೃತಿಯಿಂದ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ? ಎನ್ನುವ ಮಾರ್ಗದರ್ಶನ ಈ ಸತ್ಸಂಗದಿಂದ ಸಿಗುತ್ತಿರುವುದರಿಂದ ಸಮಾಜದ ಎಲ್ಲ ಸ್ತರಗಳಿಂದ ಈ ಸತ್ಸಂಗಕ್ಕೆ ಒಳ್ಳೆಯ ಪ್ರತಿಸ್ಪಂದನ ಲಭಿಸುತ್ತಿದೆ.

ಕರ್ನಾಟಕ ಸರ್ಕಾರದಿಂದ ಬ್ರಾಹ್ಮಣ ಸಮಾಜಕ್ಕೂ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಚಿಂತನೆ

ಬ್ರಾಹ್ಮಣ ಸಮಾಜಕ್ಕೆ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಅಧಿಕಾರಿಯು ನೀಡಿದ ಮಾಹಿತಿಗನುಸಾರ, ‘ರಾಜ್ಯದಲ್ಲಿ ೭ ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇ. ೩ ರಷ್ಟು ಮಾತ್ರ ಬ್ರಾಹ್ಮಣರಿದ್ದಾರೆ. ಜನಸಂಖ್ಯೆಯ ಬಗ್ಗೆ ಗಮನಿಸಿದರೆ ಬ್ರಾಹ್ಮಣ ಸಮಾಜವು ರಾಜ್ಯದಲ್ಲಿ ಅಲ್ಪಸಂಖ್ಯಾತರಿದ್ದಾರೆ.

‘ಪ್ಲೇಸಸ್ ಆಫ್ ವರ್ಶೀಪ್’ ಬಗ್ಗೆ ಅರ್ಚಕರ ಸಂಘದಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಕಾಶಿಯ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣನ ದೇವಸ್ಥಾನ ನಡುವಿನ ವಿವಾದದ ಬಗ್ಗೆ ಪುರೋಹಿತರ ಸಂಘಟನೆಯಾದ ‘ವಿಶ್ವ ಭದ್ರಾ ಪೂಜಾರಿ ಪುರೋಹಿತ ಮಹಾಸಂಘ’ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಮಹಾಸಂಘದ ಪರವಾಗಿ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅರ್ಜಿ ಸಲ್ಲಿಸಿದ್ದಾರೆ.

‘ಲೋನ್ ವುಲ್ಫ್ ಅಟ್ಯಾಕ್’ ಮೂಲಕ ಹಿಂದುತ್ವನಿಷ್ಠರ ಮೇಲೆ ದಾಳಿ ನಡೆಸಲು ಅಲ್ ಖೈದಾದ ಸಂಚು

ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಭಾರತದ ಉನ್ನತ ಸಚಿವರು, ಅಧಿಕಾರಿಗಳು, ಹಿಂದುತ್ವನಿಷ್ಠ ನಾಯಕರು ಮತ್ತು ಭದ್ರತಾ ಪಡೆಯ ಹಿರಿಯ ಅಧಿಕಾರಿಗಳ ಮೇಲೆ ‘ಲೋನ್ ವುಲ್ಫ್ ಅಟ್ಯಾಕ್’ನ (ಓರ್ವ ವ್ಯಕ್ತಿಯು ಚಾಕು, ಬಂದೂಕು, ವಾಹನ ಇತ್ಯಾದಿಗಳ ಮೂಲಕ ದಾಳಿ ಮಾಡುವ) ಸಂಚು ರೂಪಿಸುತ್ತಿದೆ, ಎಂದು ಗುಪ್ತಚರ ಮೂಲಗಳು ತಿಳಿಸಿದ ಮಾಹಿತಿಯ ಆಧಾರದಲ್ಲಿ ಸುದ್ದಿ ಸಂಸ್ಥೆಗಳು ಈ ಮಾಹಿತಿಯನ್ನು ನೀಡಿವೆ.

ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ! – ಉತ್ತರಾಖಂಡದಲ್ಲಿ ಬಿಜೆಪಿ ಸರಕಾರದಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ

ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ಎಂದು ಉತ್ತರಾಖಂಡದ ಭಾಜಪ ಸರಕಾರವು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸಿದೆ. ಭಾಜಪದ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಸಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿಯವರು ಈ ಸರಕಾರಿಕರಣದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯವು ಸರಕಾರದ ಬಳಿ ತಮ್ಮ ಅಭಿಪ್ರಾಯವ ಕೋರಿತ್ತು.