‘ಲೋನ್ ವುಲ್ಫ್ ಅಟ್ಯಾಕ್’ ಮೂಲಕ ಹಿಂದುತ್ವನಿಷ್ಠರ ಮೇಲೆ ದಾಳಿ ನಡೆಸಲು ಅಲ್ ಖೈದಾದ ಸಂಚು

‘ಭಯೋತ್ಪಾದಕರಿಗೆ ಧರ್ಮವಿರುತ್ತದೆ’ ಮತ್ತು ಅವರು ಹಿಂದೂಗಳನ್ನು ಗುರಿಯಾಗಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಭದ್ರತಾ ಪಡೆಗಳು ಈ ಅಲ್ ಖೈದಾದ ಸಂಚನ್ನು ಧ್ವಂಸ ಮಾಡಿ ಅವರು ಬೆಚ್ಚು ಬೀಳುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು !

ನವ ದೆಹಲಿ: ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಭಾರತದ ಉನ್ನತ ಸಚಿವರು, ಅಧಿಕಾರಿಗಳು, ಹಿಂದುತ್ವನಿಷ್ಠ ನಾಯಕರು ಮತ್ತು ಭದ್ರತಾ ಪಡೆಯ ಹಿರಿಯ ಅಧಿಕಾರಿಗಳ ಮೇಲೆ ‘ಲೋನ್ ವುಲ್ಫ್ ಅಟ್ಯಾಕ್’ನ (ಓರ್ವ ವ್ಯಕ್ತಿಯು ಚಾಕು, ಬಂದೂಕು, ವಾಹನ ಇತ್ಯಾದಿಗಳ ಮೂಲಕ ದಾಳಿ ಮಾಡುವ) ಸಂಚು ರೂಪಿಸುತ್ತಿದೆ, ಎಂದು ಗುಪ್ತಚರ ಮೂಲಗಳು ತಿಳಿಸಿದ ಮಾಹಿತಿಯ ಆಧಾರದಲ್ಲಿ ಸುದ್ದಿ ಸಂಸ್ಥೆಗಳು ಈ ಮಾಹಿತಿಯನ್ನು ನೀಡಿವೆ. ಅದಕ್ಕಾಗಿ ಅಲ್ ಖೈದಾವು ಬಾಂಗ್ಲಾದೇಶದ ಕಟ್ಟರ ಇಸ್ಲಾಮಿಕ್ ವಿದ್ಯಾರ್ಥಿಗಳು ಮತ್ತು ಅಪರಾಧ ವೃತ್ತಿಯ ಯುವಕರಿಗೆ ‘ಆನ್‌ಲೈನ್’ ತರಬೇತಿ ನೀಡುವ ಜವಾಬ್ದಾರಿಯನ್ನು ನೀಡಿದೆ. ಈ ತರಬೇತಿಯ ಕೆಲವು ‘ವೀಡಿಯೊಗಳು’ ಮತ್ತು ‘ಆಡಿಯೊಗಳು’ ವಿವಿಧ ಜಾಲತಾಣಗಳಲ್ಲಿ ಕೊಟ್ಟಿದೆ.