ಪಾಕ್‌ನಲ್ಲಿ ಹಿಂದೂವಿನ ಸುಡುತ್ತಿರುವ ಚಿತೆಯ ಮೇಲೆ ಮತಾಂಧ ಮುಸಲ್ಮಾನರಿಂದ ನೀರು ಸುರಿದು ನಂದಿಸುವ ಪ್ರಯತ್ನ !

ಪಾಕ್‌ನಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂ ವ್ಯಕ್ತಿಯ ಅಂತಿಮಕ್ರಿಯೆಗೆ ವಿರೋಧ

ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಕೇವಲ ಬದುಕಿದ್ದಾಗ ಮಾತ್ರವಲ್ಲದೆ, ಸತ್ತ ಮೇಲೆಯೂ ಯಾವರೀತಿ ಹಿಂಸೆ ಕೊಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ! ಪಾಕ್‌ನಲ್ಲಿಯ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಯಾರೂ ಒಂದು ಶಬ್ದವನ್ನೂ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ದಾದು (ಪಾಕಿಸ್ತಾನ) – ದಾದು ನಗರದಲ್ಲಿ ಓರ್ವ ಹಿಂದೂ ವ್ಯಕ್ತಿಯ ಮೃತದೇಹದ ಅಂತಿಮಕ್ರಿಯೆ ಮಾಡಲು ಮತಾಂಧ ಮುಸಲ್ಮಾನರು ವಿರೋಧಿಸಿದ್ದಾರೆ. ಮತಾಂಧ ಮುಸಲ್ಮಾನರು ಸುಡುತ್ತಿರುವ ಚಿತೆಯ ಮೇಲೆ ನೀರು ಸುರಿದು ನಂದಿಸಲು ಪ್ರಯತ್ನಿಸಿದರು.

ಇಲ್ಲಿ ಕೆವಲರಾಮ ಎಂಬ ಹಿಂದೂ ವ್ಯಕ್ತಿ ಮೃತಪಟ್ಟಿದ್ದರು. ಅವರ ಶವವನ್ನು ಅಂತಿಮಕ್ರಿಯೆಗಾಗಿ ಅಲ್ಲಿಯ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಚಿತೆಗೆ ಬೆಂಕಿಯನ್ನೂ ಹಚ್ಚಿದ್ದರು, ಆಗ ಸ್ಥಳೀಯ ಮತಾಂಧ ಮುಸಲ್ಮಾನರು ಇದನ್ನು ವಿರೋಧಿಸಿ ಅಲ್ಲಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆಸಿ ಸುಡುತ್ತಿರುವ ಚಿತೆಯ ಮೇಲೆ ನೀರು ಸುರಿದು ಅದನ್ನು ನಂದಿಸಲು ಪ್ರಯತ್ನಿಸಿದರು. ‘ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು’, ಎಂದು ಹಿಂದೂಗಳು ಆರೋಪಿಸಿದ್ದಾರೆ. ಈ ಬಗ್ಗೆ ‘ರಿಪಬ್ಲಿಕ್ ಇಂಡಿಯಾ’ ಈ ಹಿಂದಿ ವಾರ್ತಾವಾಹಿನಿ ವಾರ್ತೆಯನ್ನು ನೀಡಿದೆ.