‘ಪ್ಲೇಸಸ್ ಆಫ್ ವರ್ಶೀಪ್’ ಬಗ್ಗೆ ಅರ್ಚಕರ ಸಂಘದಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಕಾಶಿ ಮತ್ತು ಮಥಾರಾದಲ್ಲಿನ ದೇವಸ್ಥಾನಗಳ ವಿವಾದ

ಒಂದು ವೇಳೆ ಈ ಕಾಯ್ದೆಯನ್ನು ಅಂದಿನ ಕಾಂಗ್ರೆಸ್ ಸರಕಾರವು ಜಾರಿಗೊಳಿಸಿದ್ದರೆ, ಅದನ್ನು ಈಗಿನ ಕೇಂದ್ರ ಸರಕಾರವು ರದ್ದುಪಡಿಸಬೇಕು. ‘ಅದಕ್ಕಾಗಿ ಅರ್ಚಕರು ನ್ಯಾಯಾಲಯಕ್ಕೆ ಹೋಗಬೇಕಾದ ಅಗತ್ಯವೇನಿದೆ ?’, ಎಂದು ಹಿಂದೂಗಳಿಗೆ ಅನಿಸುತ್ತದೆ !

ನವ ದೆಹಲಿ : ಕಾಶಿಯ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣನ ದೇವಸ್ಥಾನ ನಡುವಿನ ವಿವಾದದ ಬಗ್ಗೆ ಪುರೋಹಿತರ ಸಂಘಟನೆಯಾದ ‘ವಿಶ್ವ ಭದ್ರಾ ಪೂಜಾರಿ ಪುರೋಹಿತ ಮಹಾಸಂಘ’ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಮಹಾಸಂಘದ ಪರವಾಗಿ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ೧೯೯೧ ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ‘ಪ್ಲೇಸಸ್ ಆಫ್ ವರ್ಶಿಪ್’(ವಿಶೇಷ ನಿಬಂಧನೆ) ಈ ಕಾನೂನಿನ ಬಗ್ಗೆ ಪ್ರಶ್ನಿಸಿದೆ. ಈ ಅರ್ಜಿಯ ಮೂಲಕ ಕಾಶಿ ಮತ್ತು ಮಥುರಾದಲ್ಲಿನ ವಿವಾದದ ಬಗ್ಗೆ ಮರು ಆಲಿಕೆ ಮಾಡಬೇಕೆಂದು ಕೋರಿದೆ.
ಈ ಹಿಂದೆ ಈ ಕಾನೂನನ್ನು ರದ್ದುಪಡಿಸಬೇಕೆಂದು ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್‌ನ ಅಧ್ಯಕ್ಷ ವಾಸಿಮ್ ರಿಝವಿ ಒತ್ತಾಯಿಸಿದ್ದರು. ಅವರು ನ್ಯಾಯಾಲಯದ ಅಂತರ್ಗತದಲ್ಲಿ ಒಂದು ವಿಶೇಷ ಸಮಿತಿಯನ್ನು ನೇಮಿಸಿ ವಿವಾದಿತ ಮಸೀದಿಗಳು, ದರ್ಗಾಗಳು ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಒಂದು ವೇಳೆ ಈ ಸ್ಥಳಗಳು ಹಿಂದೂಗಳ ಧಾರ್ಮಿಕ ಸ್ಥಳವನ್ನು ಕೆಡವಿ ಕಟ್ಟಿದ್ದಲ್ಲಿ, ಅದನ್ನು ಅವರು ಪುನಃ ಹಿಂದೂಗಳಿಗೆ ಹಸ್ತಾಂತರಿಸಬೇಕು’, ಎಂದು ಅವರು ಒತ್ತಾಯಿಸಿದ್ದರು.

ಮುಸಲ್ಮಾನ ಮತ್ತು ಹಿಂದೂಗಳ ನಡುವೆ ತಾರತಮ್ಯ ಮಾಡುವ ಕಾನೂನುಗಳು ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್

ನ್ಯಾಯವಾದಿ ವಿಷ್ಣು ಶಂಕರ್ ಜೈನ್

ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು, ೧೯೯೫ ರ ‘ವಕ್ಫ್ ಕಾಯ್ದೆ’ಗನುಸಾರ ಮುಸಲ್ಮಾನರು ಯಾವುದಾದರೊಂದು ವಾಸ್ತುವನ್ನು ತಮ್ಮ ವಾಸ್ತುವೆಂದು ಘೋಷಿಸಬಹುದು, ಉದಾ. ಈ ಕಾನೂನಿನ ಪ್ರಕಾರ ಆಗ್ರಾದಲ್ಲಿನ ‘ತಾಜ್‌ಮಹಲ್’ ಅನ್ನು ಉತ್ತರಪ್ರದೇಶ ವಕ್ಫ್ ಬೋರ್ಡ್ ತನ್ನ ಆಸ್ತಿಯೆಂದು ಘೋಷಿಸಿದೆ. ಆದ್ದರಿಂದ ಅದಕ್ಕೆ ಪ್ರಶ್ನಿಸಲು ಆಗುವುದಿಲ್ಲ. ಮತ್ತೊಂದೆಡೆ ‘ಪ್ಲೇಸಸ್ ಆಫ್ ವರ್ಶಿಪ್’ಈ ಕಾಯ್ದೆಯಿಂದಾಗಿ ಹಿಂದೂಗಳು ತಮ್ಮ ಹಿಂದಿನ ಧಾರ್ಮಿಕ ವಾಸ್ತುವನ್ನು ಯಾವುದೇ ಕಾನೂನಿನಡಿಯಲ್ಲಿ ತಮ್ಮದೇ ಎಂದು ಘೋಷಿಸಲು ಸಾಧ್ಯವಿಲ್ಲ ಮತ್ತು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಜಾತ್ಯತೀತ ಭಾರತದಲ್ಲಿ ಎರಡು ಕಾನೂನುಗಳಿವೆ ಮತ್ತು ಅವು ತಾರತಮ್ಯ ಮಾಡುತ್ತಿವೆ ಎಂದು ಹೇಳಿದರು.

ಏನಿದು ‘ಪ್ಲೇಸಸ್ ಆಫ್ ವರ್ಶಿಪ್’ ?

‘೧೫ ಆಗಸ್ಟ್ ೧೯೪೭ ರಂದು ದೇಶದ ಎಲ್ಲ ಧರ್ಮದ ಪ್ರಾರ್ಥನಾಸ್ಥಳಗಳು ಯಾವ ಸ್ಥಿತಿಯಲ್ಲಿ ಇತ್ತು ಅದು ಇಂದು ಮತ್ತು ಭವಿಷ್ಯದಲ್ಲಿ ಅದೇ ಸ್ಥಿತಿಯಲ್ಲಿ ಇಡಲಾಗುವುದು’, ಎಂದು ೧೧ ಜುಲೈ ೧೯೯೧ರಲ್ಲಿ ನಿರ್ಮಿಸಲಾದ ‘ಪ್ಲೇಸಸ್ ಆಫ್ ವರ್ಶಿಪ್’ ಈ ಕಾನೂನಿನಲ್ಲಿ ಹೇಳಿದೆ. ಅದಕ್ಕೆ ಕೇವಲ ರಾಮಜನ್ಮಭೂಮಿ ಮಾತ್ರ ಅಪವಾದ ಇತ್ತು; ಏಕೆಂದರೆ ಈ ಪ್ರಕರಣವು ಸ್ವಾತಂತ್ರ್ಯ ಸಿಗುವ ಮುಂಚಿನಿಂದಲೂ ನ್ಯಾಯಾಲಯಗಳಲ್ಲಿ ಬಾಕಿ ಇದೆ. ಈ ಕಾನೂನಿನಿಂದಾಗಿ ಕಾಶಿ, ಮಥುರಾ ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಮುಸಲ್ಮಾನ ಆಕ್ರಮಣಕಾರರು ಆಕ್ರಮಿಸಿ ಅದನ್ನು ದರ್ಗಾ, ಮಸೀದಿಗಳು ಇತ್ಯಾದಿಗಳಾಗಿ ಪರಿವರ್ತಿಸದಿದ್ದಲ್ಲಿ, ಅದರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲು ಬರುವುದಿಲ್ಲ. ಈ ಕಾನೂನಿನ ವಿರುದ್ಧ ಯಾರಾದರು ಕೃತಿ ಮಾಡಲು ಪ್ರಯತ್ನಿಸುತ್ತಿದ್ದಲ್ಲಿ, ಅವರಿಗೆ ಈ ಕಾನೂನಿಗನುಸಾರ ೩ ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುತ್ತಾರೆ. ಮತಾಂಧರು ಆಕ್ರಮಣ ಮಾಡಿ ಮಸೀದಿಗಳು ಅಥವಾ ದರ್ಗಾಗಳಾಗಿ ಪರಿವರ್ತಿಸಲ್ಪಟ್ಟ ಧಾರ್ಮಿಕ ಸ್ಥಳಗಳನ್ನು ಹಿಂದೂಗಳಿಗೆ ಪುನಃ ಬೇಕಿದ್ದಲ್ಲಿ, ಈ ಕಾನೂನನ್ನು ರದ್ದುಪಡಿಸುವುದು ಅಗತ್ಯವಿದೆ. ಅದಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಕಾನೂನಿಗೆ ಇಲ್ಲಿಯವರೆಗೆ ಯಾವುದೇ ನ್ಯಾಯಾಲಯದಲ್ಲಿ ಎಂದಿಗೂ ಪ್ರಶ್ನಿಸಿರಲಿಲ್ಲ.

ಕಾಶಿ ಮತ್ತು ಮಥುರಾ ವಿವಾದ

ಔರಂಗಜೇಬನು ೧೬೬೯ ರಲ್ಲಿ ಕಾಶಿಯಲ್ಲಿರುವ ವಿಶ್ವನಾಥ ದೇವಸ್ಥಾನವನ್ನು ನೆಲಸಮಗೊಳಿಸಿ ಅಲ್ಲಿ ಜ್ಞಾನವ್ಯಾಪಿ ಮಸೀದಿಯನ್ನು ನಿರ್ಮಿಸಿದನು, ಅದು ಇಂದಿಗೂ ಅಸ್ತಿತ್ವದಲ್ಲಿದೆ. ಅದೇರೀತಿ ಮಥುರಾದಲ್ಲಿ ಕೃಷ್ಣನ ಜನ್ಮಸ್ಥಳದಲ್ಲಿ ಶಾಹಿ ಈದ್ಗಾಹ ಇದೆ.