ಕುಲಗಾಮ್ (ಜಮ್ಮು – ಕಾಶ್ಮೀರ) ನಲ್ಲಿ ನಡೆದ ಚಕಮಕಿಯಲ್ಲಿ ಇಬ್ಬರು ಉಗ್ರರ ಹತ್ಯೆ

ಕುಲಗಾಮ್ (ಜಮ್ಮು – ಕಾಶ್ಮೀರ) – ಕುಲಗಾಮ್‌ನಲ್ಲಿ ಜೂನ್ ೧೩ ರಂದು ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಕೆಲವು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಭದ್ರತಾ ಪಡೆಗಳಿಗೆ ಮಾಹಿತಿ ಬಂದ ನಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಈ ಸಮಯದಲ್ಲಿ ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ. ಅದಕ್ಕೆ ಸೈನಿಕರು ಪ್ರತ್ಯುತ್ತರ ನೀಡಿದರು.