-
ಡಾ. ಸುಬ್ರಮಣಿಯನ್ ಸ್ವಾಮಿಯವರ ಅರ್ಜಿ ಖಾಸಗಿ ಮತ್ತು ರಾಜಕೀಯವಾಗಿದೆ ಎಂದು ಟೀಕೆ
-
‘ದೇವಸ್ಥಾನಗಳ ಸರಕಾರಿಕರಣವಾದ ನಂತರ ದೇವಸ್ಥಾನಗಳಲ್ಲಿ ಪೂಜೆಯಿಂದ ಹಿಡಿದು ಭಕ್ತರ ವ್ಯವಸ್ಥೆಯ ವರೆಗೆ ಮತ್ತು ದೇವಸ್ಥಾನಗಳ ಆಸ್ತಿಯಿಂದ ಹಿಡಿದು ದೇವಾಲಯಗಳ ನಿರ್ವಹಣೆಗಳಲ್ಲಿ ರಾಜಕೀಯ ಪಕ್ಷಗಳ ಅಸಮಾಧಾನದ ಹೊಗೆಯಾಡುವ ತನಕ ಪ್ರಚಂಡವಾಗಿ ಮನಬಂದಂತೆ ಕಾರ್ಯನಿರ್ವಹಣೆ ನಡೆಯುತ್ತದೆ’, ಇದು ಇಲ್ಲಿಯವರೆಗೆ ಹಿಂದೂಗಳ ಕಹಿ ಅನುಭವವಾಗಿದೆ. ಇದರ ಬಗ್ಗೆ ಯಾರು ಯೋಚಿಸುವರು ?
ಡೆಹ್ರಾಡೂನ್ (ಉತ್ತರಾಖಂಡ) – ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ಎಂದು ಉತ್ತರಾಖಂಡದ ಭಾಜಪ ಸರಕಾರವು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸಿದೆ. ಭಾಜಪದ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಸಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿಯವರು ಈ ಸರಕಾರಿಕರಣದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯವು ಸರಕಾರದ ಬಳಿ ತಮ್ಮ ಅಭಿಪ್ರಾಯವ ಕೋರಿತ್ತು. ಅದರಂತೆ ಸರಕಾರ ಈ ಪ್ರತಿಜ್ಞಾಪತ್ರ ಸಲ್ಲಿಸಿದೆ. ‘ಈ ಅರ್ಜಿಯು ಖಾಸಗಿ ಮತ್ತು ರಾಜಕೀಯವಾಗಿದೆ’, ಎಂದೂ ಸರಕಾರ ತನ್ನ ಪ್ರತಿಜ್ಞಾಪತ್ರದಲ್ಲಿ ಟೀಕಿಸಿದೆ.
೧. ಉತ್ತರಾಖಂಡ ಸರಕಾರ ಪ್ರತಿಜ್ಞಾಪತ್ರದಲ್ಲಿ, ‘ನೈಸರ್ಗಿಕ ವಿಪತ್ತುಗಳು ಮತ್ತು ಭವಿಷ್ಯದಲ್ಲಿ ಚಾರಧಾಮ್ ತೀರ್ಥಯಾತ್ರೆಗಳನ್ನು ಇನ್ನೂ ಉತ್ತಮವಾಗಿ ಆಯೋಜಿಸಲು ಸರ್ಕಾರಿಕರಣಗೊಳಿಸುವುದು ಅಗತ್ಯವಿತ್ತು.’ ಅದಕ್ಕಾಗಿ ಸರಕಾರವು ಶ್ರೀ ವೈಷ್ಣೋದೇವಿ ದೇವಸ್ಥಾನ, ಶ್ರೀ ಸಾಯಿಬಾಬಾ ದೇವಸ್ಥಾನ, ಶ್ರೀ ಜಗನ್ನಾಥ ದೇವಸ್ಥಾನ, ಶ್ರೀ ಸೋಮನಾಥ ದೇವಸ್ಥಾನ ಇತ್ಯಾದಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳ ಉದಾಹರಣೆಗಳನ್ನು ನೀಡಲಾಗಿದೆ ಹೇಳಿದೆ.
೨. ಈ ಪ್ರತಿಜ್ಞಾಪತ್ರದಲ್ಲಿ ‘ಡಾ. ಸ್ವಾಮಿಯವರ ಅರ್ಜಿಯು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವ್ಯಾಪ್ತಿಗೆ ಬರುವುದಿಲ್ಲ. ಡಾ. ಸ್ವಾಮಿ ರಾಜಕೀಯ ವ್ಯಕ್ತಿಯಾಗಿದ್ದಾರೆ. ಅವರು ಅವರ ವೈಯಕ್ತಿಕ ಹಾಗೂ ರಾಜಕೀಯ ಹಿತಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿದೆ’, ಎಂದೂ ಆರೋಪಿಸಲಾಗಿದೆ.
ಡಾ. ಸ್ವಾಮಿಯವರ ಈ ಅಂಶದ ಬಗ್ಗೆ ಉತ್ತರಾಖಂಡ ಸರ್ಕಾರದ ಮೌನ !
ಡಾ. ಸ್ವಾಮಿಯವರು ತಮ್ಮ ಅರ್ಜಿಯಲ್ಲಿ ೨೦೧೪ ರಂದು ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ಚಿದಂಬರಂ ಜಿಲ್ಲೆಯ ಶ್ರೀ ನಟರಾಜ ದೇವಸ್ಥಾನವನ್ನು ಸರಕಾರಿಕರಣದ ಬಗ್ಗೆ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದರು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ‘ದೇವಸ್ಥಾನಗಳ ನಿರ್ವಹಣೆಯನ್ನು ಭಕ್ತರು ಮಾಡಬೇಕೇ ಹೊರತು ಸರ್ಕಾರವಲ್ಲ’ ಎಂದು ಹೇಳಿದ್ದರು. ಉತ್ತರಾಖಂಡ ಸರ್ಕಾರದ ಪ್ರತಿಜ್ಞಾಪತ್ರದಲ್ಲಿ ಈ ಅಂಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.