ಬಾಬ್ರಿ ಮಸೀದಿ ನೆಲಸಮಗೊಳಿಸುವಲ್ಲಿ ಪಾಕಿಸ್ತಾನ ಕೈವಾಡ ಇರುವ ಸಾಧ್ಯತೆಯ ಬಗ್ಗೆಯೂ ಸಿಬಿಐ ತನಿಖೆ ನಡೆಸಿಲ್ಲ – ಸಿಬಿಐನ ವಿಶೇಷ ನ್ಯಾಯಾಲಯ

ಭಾರತದಲ್ಲಿ ಕೋಮುದ್ವೇಷ ಉತ್ಪನ್ನ ಮಾಡಲು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲಿನ ಬಾಬ್ರಿ ಮಸೀದಿಯನ್ನು ಕೆಡವಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐ.ಎಸ್.ಐ. ಕೆಲವು ವ್ಯಕ್ತಿಗಳನ್ನು ಕಳುಹಿಸಿತ್ತು’, ಈ ರಹಸ್ಯ ಮಾಹಿತಿಯ ಬಗ್ಗೆ ಸಿಬಿಐ ತನಿಖೆ ನಡೆಸಿಲ್ಲ, ಎಂದು ಬಾಬ್ರಿ ಮಸೀದಿ ಧ್ವಂಸ ಮಾಡಿದ ಅರ್ಜಿಯ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯವು ತಿಳಿಸಿದೆ.

ಪಾಕಿಸ್ತಾನದ ಸೈನ್ಯದ ಬಲ ಕುಗ್ಗಿಸಲು ನವಾಜ ಶರೀಫ್‌ಗೆ ಭಾರತವು ಸಹಾಯ ಮಾಡುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಪ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ ಶರೀಫ್ ಸದ್ಯ ಒಂದು ಅಪಾಯಕಾರಿ ಕೃತ್ಯವನ್ನು ಮಾಡುತ್ತಿದ್ದಾರೆ. ಅಲ್ತಾಫ್ ಹುಸೇನ್ ಕೂಡಾ ಇದೇ ಮಾಡಿದ್ದರು. ಭಾರತವು ನವಾಜ ಶರೀಫ್‌ಗೆ ಸಹಾಯ ಮಾಡುತ್ತಿದೆ ಎಂದು ನನಗೆ ಶೇ. ೧೦೦ ರಷ್ಟು ವಿಶ್ವಾಸವಿದೆ.

ಲಾಲಬಹಾದ್ದೂರ ಶಾಸ್ತ್ರೀ ಇವರ ಜಯಂತಿ ಆ ನಿಮಿತ್ತ…

ಪಂ. ಜವಾಹರಲಾಲ ನೆಹರೂರವರು ಪ್ರಧಾನಮಂತ್ರಿ ಯಾಗಿದ್ದಾಗ, ಅವರ ಮಂತ್ರಿಮಂಡಲದಲ್ಲಿ ಲಾಲಬಹಾದ್ದೂರ ಶಾಸ್ತ್ರೀಯವರು ಗೃಹಸಚಿವರಾಗಿದ್ದರು. ನೆಹರೂರವರು ಅವರಿಗೆ, “ಕಾಶ್ಮೀರದಲ್ಲಿ ಒಂದು ಸಭೆ ಇದೆ, ಅಲ್ಲಿ ನೀವು ಹೋಗಿರಿ,” ಎಂದು ಹೇಳಿದರು. ಶಾಸ್ತ್ರೀಯವರು ತಕ್ಷಣ ‘ಹೋಗುತ್ತೇನೆ’ ಎಂದು ಹೇಳಲಿಲ್ಲ. ಅದಕ್ಕೆ ನೆಹರೂರವರು, ‘ನೀವು ಹೋಗಲು ಯಾಕೆ ಹಿಂಜರಿಯುತ್ತೀರಿ ? ಎಂದು ಕೇಳಿದರು.

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೋನಾದ ಸೋಂಕು : ಹೆಂಡತಿಯೊಂದಿಗೆ ಪ್ರತ್ಯೇಕಿಕರಣ

ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೋನಾದ ಸೋಂಕು ತಗಲಿದೆ. ಆದ್ದರಿಂದ ಅವರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಪ್ರತ್ಯೇಕಿಕರಣವಾಗಿದ್ದಾರೆ. ಟ್ರಂಪ್ ಅವರ ಸಲಹೆಗಾರ ಹೋಪ್ ಹಿಕ್ಸ್ ಅವರಿಗೆ ಕರೋನಾದ ಸೋಂಕು ತಗಲಿರುವುದು ಪತ್ತೆಯಾದಾಗ ಟ್ರಂಪ್‌ಗೂ ಕೊರೋನಾದ ಪರೀಕ್ಷಣೆ ಮಾಡಲಾಯಿತು

ಕಳೆದ ೧೫ ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ೮೦ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಮತಾಂಧನ ಬಂಧನ

ಕಳೆದ ೧೫ ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ೮೦ ದೇವಸ್ಥಾನಗಳಲ್ಲಿ ಅರ್ಪಣೆ ಪೆಟ್ಟಿಗೆಗಳಿಂದ ಹಣವನ್ನು ಕದಿಯುತ್ತಿದ್ದ ಪಠಾಣ ಸಲಾರ್ ಖಾನ್‌ನನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಈತನು ಆಂಧ್ರಪ್ರದೇಶದ ವಿವಿಧ ದೇವಸ್ಥಾನಗಳಿಂದ ೧೮ ಸಾವಿರ ರೂಪಾಯಿಗಳನ್ನು ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ.

ರಾಜಸ್ಥಾನದಲ್ಲಿ ೨೪ ಗಂಟೆಗಳಲ್ಲಿ ೭ ಅತ್ಯಾಚಾರಗಳ ಘಟನೆಗಳು

ಬರಾಂನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ಆರೋಪಿಗಳು ಅವರನ್ನು ಕೋಟಾ, ಜೈಪುರ ಮತ್ತು ಅಜ್ಮೀರ್‌ಗೆ ಕರೆದೊಯ್ದು ತಮ್ಮ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಯರು ಯುವಕರೊಂದಿಗೆ ಸ್ವೇಚ್ಛೆಯಿಂದ ತಾವಾಗಿಯೇ ತಿರುಗಾಡಲು ಹೋಗಿದ್ದರು ಎಂದು ಹೇಳಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣದಲ್ಲಿನ ಫಾರೂಕ್ ಅಬ್ದುಲ್ಲಾ ವಿರುದ್ಧದ ಆನ್‌ಲೈನ್ ಅಭಿಯಾನಕ್ಕೆ ಉತ್ಸಾಹಪೂರ್ಣ ಬೆಂಬಲ

ಕಾಶ್ಮೀರಿ ನಾಗರಿಕರು ತಮ್ಮನ್ನು ಭಾರತೀಯರೆಂದು ತಿಳಿದುಕೊಳ್ಳುವುದಿಲ್ಲ ಮತ್ತು ಅವರು ಭಾರತೀಯರಾಗಲು ಬಯಸುವುದಿಲ್ಲ. ಚೀನಾ ತನ್ನ ಮೇಲೆ ಆಳ್ವಿಕೆ ನಡೆಸಬೇಕು ಎಂದು ಅವರು ಬಯಸುತ್ತಾರೆ, ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಫಾರೂಖ ಅಬ್ದುಲ್ಲಾ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ದೇಶದ ಎಲ್ಲೆಡೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸಂಸ್ಕೃತವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! ಇತರ ರಾಜ್ಯಗಳು ಸಹ ಇದನ್ನು ಅನುಸರಿಸಬೇಕು !

ಉತ್ತರಪ್ರದೇಶ ಸರಕಾರವು ಹಿಂದಿ, ಆಂಗ್ಲ ಮತ್ತು ಉರ್ದುವಿನೊಂದಿಗೆ ಇನ್ನು ಸಂಸ್ಕೃತ ಭಾಷೆಯಲ್ಲಿಯೂ ಸರಕಾರಿ ಸುತ್ತೋಲೆಯನ್ನು ಹೊರಡಿಸಲು ಪ್ರಾರಂಭಿಸಿದೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ಬಗ್ಗೆ ನಿರ್ದೇಶನವನ್ನು ನೀಡಿದ್ದರು. ಇದರ ನಂತರ ರಾಜ್ಯದ ಆರೋಗ್ಯ ಇಲಾಖೆಯು ಕೊರೋನಾದ ಬಗ್ಗೆ ಪ್ರತಿದಿನದ ಪತ್ರಿಕಾ ಪ್ರಕಟಣೆಗಳನ್ನು ಸಂಸ್ಕೃತ ಭಾಷೆಯಲ್ಲಿ ಪ್ರಕಟಿಸಲು ಪ್ರಾರಂಭಿಸಿತು.

ಜಗನಮೋಹನ್ ರೆಡ್ಡಿ, ಇಬ್ಬರು ಮಂತ್ರಿಗಳು, ದೇವಸ್ಥಾನಮ್‌ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲ ತಿರುಪತಿಯಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಪಾಟಲಿಪುತ್ರ (ಪಾಟ್ನಾ) ದಲ್ಲಿ ಭಾಜಪ ನಾಯಕನ ಹತ್ಯೆ

ಇಲ್ಲಿಯ ಭಾಜಪದ ಮುಖಂಡ ರಾಜೇಶಕುಮಾರ್ ಝಾ ಅಲಿಯಾಸ್ ರಾಜು ಬಾಬಾರವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅಕ್ಟೋಬರ್ ೧ ರಂದು ಬೆಳಗ್ಗೆ ೬ ಗಂಟೆಗೆ ಬಿವೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ ನಗರದ ಸೀತಾರಾಮ್ ಉತ್ಸವ್ ಹಾಲ್ ಬಳಿ ಈ ಘಟನೆ ನಡೆದಿದೆ. ಝಾ ಇವರು ಕೇವಲ ಎರಡು ದಿನಗಳ ಹಿಂದೆ ಭಾಜಪಗೆ ಸೇರಿದ್ದರು.