ಜಗನಮೋಹನ್ ರೆಡ್ಡಿ, ಇಬ್ಬರು ಮಂತ್ರಿಗಳು, ದೇವಸ್ಥಾನಮ್‌ನ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ ರೆಡ್ಡಿಯವರು ‘ಭಗವಾನ ವೆಂಕಟೇಶ್ವರನ ಮೇಲೆ ಶ್ರದ್ಧೆ ಇದೆ’ ಈ ಶಪಥಪತ್ರದಲ್ಲಿ ಹಸ್ತಾಕ್ಷರ ಮಾಡದೇ ತಿರುಪತಿ ದೇವಸ್ಥಾನಕ್ಕೆ ಪ್ರವೇಶಿಸಿದ ಪ್ರಕರಣ

  • ದೇವಸ್ಥಾನದ ಪರಂಪರೆಗಳನ್ನು ಪಾಲಿಸಲು ಹಿಂದೂಗಳಿಗೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ, ಇದು ಖೇದಕರವಾಗಿದೆ ! ಹಿಂದೂಗಳಿಗೆ ಇಂತಹ ಪ್ರಮೇಯ ಬರದಿರಲು ಹಿಂದೂ ರಾಷ್ಟ್ರವೇ ಬೇಕು !
  • ಓರ್ವ ಕಟ್ಟರವಾದಿ ಕ್ರೈಸ್ತನನ್ನು ಚುನಾಯಿಸಿದರೆ ಆಂಧ್ರಪ್ರದೇಶದಲ್ಲಿ ಇದಕ್ಕಿಂತ ಇನ್ನೇನಾಗಬಹುದು ? ಹಿಂದೂಗಳು ಇಂದು ಅದೇ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ !

ಅಮರಾವತಿ (ಆಂಧ್ರಪ್ರದೇಶ) – ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ ರೆಡ್ಡಿಯವರು ಸೆಪ್ಟೆಂಬರ್ ೨೩ ರಂದು ತಿರುಮಲ ತಿರುಪತಿಯಲ್ಲಿರುವ ವೆಂಕಟೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಇತರ ಧರ್ಮಗಳಿಗೆ ಕಡ್ಡಾಯವಾಗಿರುವ ‘ಭಗವಾನ ವೆಂಕಟೇಶ್ವರನಲ್ಲಿ ಶ್ರದ್ಧೆ ಇದೆ’, ಎಂದು ಬರೆದಿರುವ ಶಪಥಪತ್ರದ ಮೇಲೆ ಹಸ್ತಾಕ್ಷರ ಮಾಡಿರಲಿಲ್ಲ. ಈ ಕೃತಿಯ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ‘ಜಗನಮೋಹನ ರೆಡ್ಡಿಯವರು ಶಪಥಪತ್ರದ ಮೇಲೆ ಹಸ್ತಾಕ್ಷರ ಮಾಡದಿರುವುದು ಕಾನೂನುದ್ರೋಹವಾಗಿದೆ’, ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅದೇರೀತಿ ಸಚಿವರಾದ ವೇಲಂಪಲ್ಲಿ, ಕೊಡಾಲಿ ನಾನಿ, ತಿರುಮಲ ತಿರುಪತಿ ದೇವಸ್ಥಾನಮ್‌ನ ಅಧ್ಯಕ್ಷ ಸುಬ್ಬಾ ರೆಡ್ಡಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ್ ಸಿಂಘಾಲ್ ಅವರನ್ನು ಹುದ್ದೆಯಿಂದ ಕಿತ್ತೊಗೆಯಬೇಕೆಂದು ಒತ್ತಾಯಿಸಿದೆ. ಗುಂಟೂರು ಜಿಲ್ಲೆಯ ವೆಂಕಟಪುರಮ್ ಗ್ರಾಮದ ರೈತ ಅಲೋಕ ಸುಧೀರ್ ಬಾಬು ಅವರು ಈ ಅರ್ಜಿ ಸಲ್ಲಿಸಿದ್ದಾರೆ.