ಪಾಕಿಸ್ತಾನದ ಸೈನ್ಯದ ಬಲ ಕುಗ್ಗಿಸಲು ನವಾಜ ಶರೀಫ್‌ಗೆ ಭಾರತವು ಸಹಾಯ ಮಾಡುತ್ತಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಪ

ಪಾಕಿಸ್ತಾನದ ಸೈನಿಕರಲ್ಲಿ ಶಕ್ತಿ ಇಲ್ಲದ್ದರಿಂದ ಅದು ಭಾರತದೊಂದಿಗಿನ ೪ ಯುದ್ಧದಲ್ಲಿ ಸೂತಿತ್ತು ಹಾಗೂ ಈಗಲೂ ಅದು ಜಿಹಾದಿ ಭಯೋತ್ಪಾದಕರ ಮಾಧ್ಯಮದಿಂದ ಭಾರತದ ವಿರುದ್ಧ ಅಘೋಷಿತ ಯುದ್ಧವನ್ನು ಮಾಡುತ್ತಿದೆ, ಇದೇ ವಾಸ್ತವವಾಗಿದೆ !

ಇಸ್ಲಾಮಾಬಾದ(ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ ಶರೀಫ್ ಸದ್ಯ ಒಂದು ಅಪಾಯಕಾರಿ ಕೃತ್ಯವನ್ನು ಮಾಡುತ್ತಿದ್ದಾರೆ. ಅಲ್ತಾಫ್ ಹುಸೇನ್ ಕೂಡಾ ಇದೇ ಮಾಡಿದ್ದರು. ಭಾರತವು ನವಾಜ ಶರೀಫ್‌ಗೆ ಸಹಾಯ ಮಾಡುತ್ತಿದೆ ಎಂದು ನನಗೆ ಶೇ. ೧೦೦ ರಷ್ಟು ವಿಶ್ವಾಸವಿದೆ. ಒಂದುವೇಳೆ ಪಾಕಿಸ್ತಾನದ ಸೈನಿಕರ ಶಕ್ತಿ ಕಡಿಮೆಯಾದರೇ, ಅದರ ಲಾಭ ಯಾರಿಗೆ ಆಗಲಿದೆ ?, ಎಂದು ಪ್ರಶ್ನಿಸುತ್ತಾ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರು ನವಾಜ ಶರೀಫ್ ಇವರನ್ನು ಟೀಕಿಸಿದ್ದಾರೆ. ಒಂದು ವಾರ್ತಾವಾಹಿನಿಯಲ್ಲಿ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ನವಾಜ ಶರೀಫ್ ಸದ್ಯ ಇಂಗ್ಲೆಂಡ್‌ನಲ್ಲಿದ್ದಾರೆ ಹಾಗೂ ಅವರು ಪಾಕಿಸ್ತಾನ ಸರಕಾರ ಹಾಗೂ ಸೈನ್ಯವನ್ನು ಟೀಕಿಸಿದ್ದಾರೆ. ಅದಕ್ಕೆ ಇಮ್ರಾನ್ ಖಾನ್ ಈ ಮೇಲಿನ ಹೇಳಿಕೆಯನ್ನು ನೀಡಿದರು.
ಇಮ್ರಾನ್ ಖಾನ್ ತಮ್ಮ ಮಾತನ್ನು ಮುಂದುವರಿಸುತ್ತಾ, ಸೈನ್ಯ ಹಾಗೂ ನಮ್ಮ ನಡುವೆ ಯಾವುದೇ ರೀತಿಯ ಒತ್ತಡ ಇಲ್ಲ. ಜನರ ಬೆಂಬಲದಿಂದಾಗಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಪ್ರಜಾಪ್ರಭುತ್ವದ ಮೂಲಕ ನಾವು ಆರಿಸಿ ಬಂದ ಸರಕಾರ ಯೋಗ್ಯವಾದ ಕೆಲಸ ಮಾಡದೇ ಇದ್ದಲ್ಲಿ, ಅದೆ ಅರ್ಥ ‘ಮಾರ್ಶಲ್ ಲಾ’ ಹೇರಿ ಎಂದಾಗುವುದಿಲ್ಲ.

ಗಿಲಗಿಟ್-ಬಾಲ್ಟಿಸ್ತಾನನಲ್ಲಿ ಭಾರತ ಸಕ್ರಿಯ

ಇಮ್ರಾನ್ ಖಾನ್ ಇವರು ಭಾರತದ ಮೇಲೆ ಆರೋಪ ಮಾಡುತ್ತಾ, ಗಿಲಗಿಟ್-ಬಾಲ್ಟಿಸ್ತಾನದಲ್ಲಿ ಭಾರತ ಸಕ್ರಿಯವಾಗಿದೆ. ಇದು ‘ಚೀನಾ-ಪಾಕಿಸ್ತಾನ ಇಕಾನಾಮಿಕ್ ಕಾರಿಡಾರ್’ನ ಪ್ರದೇಶವಾಗಿದೆ. ಈ ಸ್ಥಳದಲ್ಲಿರುವ ಜನರಿಗೆ ಅವರ ಹಕ್ಕುಗಳು ಬೇಕಾಗಿವೆ ಹಾಗೂ ಅದರ ಲಾಭವನ್ನು ಭಾರತ ಪಡೆದುಕೊಳ್ಳುತ್ತಿದೆ. ಭಾರತವು ಪಾಕಿಸ್ತಾನದಲ್ಲಿ ಶಿಯಾ ಹಾಗೂ ಸುನ್ನೀಯ ಮಧ್ಯೆ ಧ್ವೇಷವನ್ನು ಕಾರುತ್ತಿದೆ ಎಂದು ಹೇಳಿದರು. (ಗಿಲಗಿಟ್-ಬಬಾಲ್ಟಿಸ್ತಾನ ಇದು ಭಾರತದ ಕಾಶ್ಮೀರದ ಪ್ರದೇಶವಾಗಿದೆ. ಪಾಕಿಸ್ತಾನವು ಅದರ ಮೇಲೆ ಅತಿಕ್ರಮಣ ಮಾಡಿದೆ. ಆದ್ದರಿಂದ ಪಾಕಿಸ್ತಾನ ಅಲ್ಲಿಂದ ತೊಲಗಬೇಕು ! – ಸಂಪಾದಕರು)