ಇದರಿಂದಲೇ ಸಿಬಿಐನಂತಹ ತನಿಖಾ ಸಂಸ್ಥೆಗಳು ಹೇಗೆ ತನಿಖೆ ನಡೆಸುತ್ತವೆ, ಎಂಬುದು ಗಮನಕ್ಕೆ ಬರುತ್ತದೆ ! ಇಂತಹವರಿಂದ ಎಂದಾದರೂ ನಿಜವಾದ ಅಪರಾಧಿಗಳನ್ನು ಹಿಡಿಯಬಹುದೇ ? ಅಥವಾ ಅವರಿಗೆ ಎಂದಾದರೂ ಶಿಕ್ಷೆಯಾಗಬಹುದೇ ?
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭಾರತದಲ್ಲಿ ಕೋಮುದ್ವೇಷ ಉತ್ಪನ್ನ ಮಾಡಲು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲಿನ ಬಾಬ್ರಿ ಮಸೀದಿಯನ್ನು ಕೆಡವಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐ.ಎಸ್.ಐ. ಕೆಲವು ವ್ಯಕ್ತಿಗಳನ್ನು ಕಳುಹಿಸಿತ್ತು’, ಈ ರಹಸ್ಯ ಮಾಹಿತಿಯ ಬಗ್ಗೆ ಸಿಬಿಐ ತನಿಖೆ ನಡೆಸಿಲ್ಲ, ಎಂದು ಬಾಬ್ರಿ ಮಸೀದಿ ಧ್ವಂಸ ಮಾಡಿದ ಅರ್ಜಿಯ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯವು ತಿಳಿಸಿದೆ. ಸ್ಥಳೀಯ ಗುಪ್ತಚರ ಇಲಾಖೆಯು ೧೯೯೨ ರ ಡಿಸೆಂಬರ್ ೨ ರಂದು ‘ಕಾರಸೇವೆ’ಯಲ್ಲಿ ಅಡ್ಡಿಯುಂಟು ಮಾಡಲು ಹಾಗೂ ಕೋಮುಭಾವನೆ ಕೆರಳಿಸಲು ಮುಸಲ್ಮಾನ ಸಮಾಜದ ಕೆಲವು ವ್ಯಕ್ತಿಗಳು ‘ಮಜಾರ’ಅನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು’ ಎಂಬ ವಿಷಯವನ್ನು ವಿಶೇಷ ನ್ಯಾಯಾಲಯವು ದಾಖಲಿಸಿಕೊಂಡಿದೆ. ೧೯೯೨ ರ ಡಿಸೆಂಬರ್ ೬ ರಂದು ಬಾಬ್ರಿ ಮಸೀದಿ ನೆಲಸಮ ಮಾಡಿದ್ದರಿಂದ ದೇಶಾದ್ಯಂತ ಗಲಭೆಗಳು ಭುಗಿಲೆದ್ದಿತ್ತು. ಅದರಲ್ಲಿ ಎರಡು ಸಾವಿರ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು.
೧. ವಿಶೇಷ ನ್ಯಾಯಾಧೀಶ ಎಸ್.ಕೆ. ಯಾದವ ಇವರು ತಮ್ಮ ೨ ಸಾವಿರದ ೩೦೦ ಪುಟಗಳ ತೀರ್ಪಿನಲ್ಲಿ, ಆರೋಪಮುಕ್ತರಾದ ೩೨ ಆರೋಪಿಗಳ ವಿರುದ್ಧ ಸಿಬಿಐನ ಆರೋಪಪತ್ರ ಅರ್ಥಹೀನವಾಗಿದೆ ಎಂದು ಹೇಳಿದ್ದಾರೆ; ೧೯೯೨ ರ ಡಿಸೆಂಬರ್ ೫ ರಂದು ಸ್ಥಳೀಯ ಗುಪ್ತಚರ ಇಲಾಖೆ ನೀಡಿದ ವರದಿಯನ್ನು ಅವರು ತನಿಖೆ ಮಾಡದ ಕಾರಣ, ‘ಡಿಸೆಂಬರ್ ೬ ರಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕೆಲವು ಜನರು ಸ್ಥಳೀಯರೊಂದಿಗೆ ಸೇರಿಕೊಂಡು ವಿವಾದಿತ ಕಟ್ಟಡಕ್ಕೆ ಹಾನಿ ಮಾಡಬಹುದು’, ಈ ವರದಿಯ ಬಗ್ಗೆ ತನಿಖೆ ಮಾಡಲಿಲ್ಲ. ಸಿಬಿಐ ತನಿಖೆ ನಡೆಸದ ಕಾರಣ ಈ ತನಿಖೆ ದುರ್ಬಲ ಅಥವಾ ಶಕ್ತಿ ಕಳೆದುಕೊಂಡಿದೆ ಎಂದು ಹೇಳಿದೆ.
CBI did not probe possibility of Pak intel agencies' role in Babri case: Court https://t.co/CGlwFgtbJQ
— TOI India (@TOIIndiaNews) October 1, 2020
೨. ವಿಶೇಷ ನ್ಯಾಯಾಲಯವು ಉತ್ತರ ಪ್ರದೇಶದ ಪೊಲೀಸ್ ಮಹಾನಿರೀಕ್ಷಕರ (ಭದ್ರತೆ) ಹಸ್ತಾಕ್ಷರ ಮಾಡಿದ ಸ್ಥಳೀಯ ಗುಪ್ತಚರ ಇಲಾಖೆಯ ವರದಿಯನ್ನು ಸಲ್ಲಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕೆಲವು ಜನರು ರಾಜ್ಯ ಮತ್ತು ದೇಶದಲ್ಲಿ ಕೋಮು ಧಾರ್ಮಿಕ ಗಲಭೆಗಳನ್ನು ಸೃಷ್ಟಿಸುವ ಉದ್ದೇಶದಿಂದ ಸ್ಥಳೀಯರೊಂದಿಗೆ ಸೇರಿಕೊಂಡಿದ್ದಾರೆ ಮತ್ತು ವಿವಾದಾತ್ಮಕ ಕಟ್ಟದವನ್ನು ಸ್ಫೋಟಿಸುವ ಮೂಲಕ ಅಥವಾ ಇತರ ವಿಧಾನಗಳಿಂದ ಹಾನಿಗೊಳಿಸಬಹುದು ಎಂದು ಅದು ಹೇಳಿದೆ.
೩. ‘ಪಾಕಿಸ್ತಾನದಿಂದ ಸ್ಫೋಟಕಗಳು ದೆಹಲಿ ಮೂಲಕ ಅಯೋಧ್ಯೆಗೆ ತಲುಪಿವೆ’, ಎಂದು ವರದಿಯಾಗಿತ್ತು. ಅದೇ ಸಮಯದಲ್ಲಿ ಗುಪ್ತಚರ ವರದಿಯೊಂದು ‘ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಪ್ರದೇಶದ ಸುಮಾರು ೧೦೦ ರಾಷ್ಟ್ರವಿರೋಧಿ ಮತ್ತು ಸಮಾಜ ವಿರೋಧಿ ಕಾರ್ಯಕರ್ತರು ಕಾರಸೇವಕರ ವೇಶದಲ್ಲಿ ಅಯೋಧ್ಯೆಗೆ ತಲುಪಿದ್ದಾರೆ’ ಎಂದು ಹೇಳಿದೆ.
೪. ಈ ವರದಿಯು ಸಂಬಂಧಪಟ್ಟ ಇಲಾಖೆಗಳಿಗೆ ಹೋಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ವರದಿಯನ್ನು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ (ಗೃಹ) ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಲಿಖಿತವಾಗಿ ಕಳುಹಿಸಲಾಗಿದೆ. ಅಂತಹ ಮಹತ್ವದ ಮಾಹಿತಿಯ ಇದ್ದರೂ ಈ ದೃಷ್ಟಿಕೋನದಿಂದ ತನಿಖೆ ನಡೆಯಲಿಲ್ಲ ಎಂದು ನ್ಯಾಯಾಲಯವು ನೋಂದಾಯಿಸಿಕೊಂಡಿದೆ.