ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಸರಕಾರವಿದೆ, ಅದಕ್ಕಾಗಿ ಅಲ್ಲಿನ ಘಟನೆಗಳನ್ನು ಮಾಧ್ಯಮಗಳು ಅದುಮಿಡುತ್ತಿದೆ, ಎಂದು ಯಾರೂ ಹೇಳಿದರೆ ತಪ್ಪೇನು ?
ಜೈಪುರ (ರಾಜಸ್ಥಾನ) – ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಕಳೆದ ೨೪ ಗಂಟೆಗಳಲ್ಲಿ ಏಳು ಅತ್ಯಾಚಾರದ ಘಟನೆಗಳಾಗಿವೆ.
೧. ಬರಾಂನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ಆರೋಪಿಗಳು ಅವರನ್ನು ಕೋಟಾ, ಜೈಪುರ ಮತ್ತು ಅಜ್ಮೀರ್‌ಗೆ ಕರೆದೊಯ್ದು ತಮ್ಮ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಯರು ಯುವಕರೊಂದಿಗೆ ಸ್ವೇಚ್ಛೆಯಿಂದ ತಾವಾಗಿಯೇ ತಿರುಗಾಡಲು ಹೋಗಿದ್ದರು ಎಂದು ಹೇಳಿದ್ದಾರೆ.
೨. ಮುಂಬೈ ಮೂಲದ ರಾಪಕ್ ಚಟರ್ಜಿ ಎಂಬ ಆರೋಪಿಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ. ಆತ ಸಾಮಾಜಿಕ ಮಾಧ್ಯಮಗಳ ಮೂಲಕ ವಿದೇಶಿ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿ ಅವರನ್ನು ಜೈಪುರಕ್ಕೆ ಕರೆಸಿ, ಹೋಟೆಲ್‌ನಲ್ಲಿ ಇರಿಸಿಕೊಂಡು ಅತ್ಯಾಚಾರ ಮಾಡಿ ಪರಾರಿಯಾಗುತ್ತಿದ್ದ. ಆತನಿಗೆ ೧೨ ಭಾಷೆಗಳು ಬರುತ್ತದೆ.
೩. ಜೈಪುರದ ಅಶೋಕ ನಗರದಲ್ಲಿ ಒಬ್ಬ ಆರೋಪಿಯು ವಾಹನ ಚಾಲಕನ ಸಹಾಯದಿಂದ ಮಹಾರಾಷ್ಟ್ರದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಅವಳ ಪರ್ಸ್ ಕಳವು ಆಗಿದ್ದರಿಮದ ಆಕೆಗೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಾ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆತಂದು ಈ ಕೃತ್ಯವನ್ನು ಎಸಗಲಾಗಿದೆ.
೪. ಅಜ್ಮೀರ್‌ನಲ್ಲಿ ವಿವಾಹಿತ ಮಹಿಳೆಯೊಬ್ಬಳನ್ನು ಹಿಡಿದು(ಅಡ್ಡಗಟ್ಟಿ/ ತಡೆಹಿಡಿದು) ಅತ್ಯಾಚಾರ ಎಸಗಲಾಗಿದೆ. ರಾಮಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
೫. ಜೈಪುರದ ವಿದ್ಯಾಧರ ನಗರದಲ್ಲಿ ಓರ್ವ ತಾಂತ್ರಿಕನು ಚಿಕಿತ್ಸೆಯ ಸೋಗಿನಲ್ಲಿ ಓರ್ವ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.
೬. ಸವಾಯಿ ಮಾಧೋಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ನಾಲ್ಕನೇ ಶ್ರೇಣಿಯ ಉದ್ಯೋಗಿ ಶ್ಯೋರಾಮ್ ಮೀಣಾ ಎಂಬಾತನನ್ನು ಬಂಧಿಸಲಾಗಿದೆ. ಸಿಕರ್ ಜಿಲ್ಲೆಯಲ್ಲೂ ಅತ್ಯಾಚಾರದ ಒಂದು ಘಟನೆ ನಡೆದಿದೆ.