ಲಾಲಬಹಾದ್ದೂರ ಶಾಸ್ತ್ರೀ ಇವರ ಜಯಂತಿ ಆ ನಿಮಿತ್ತ…

ಅತ್ಯಂತ ಸರಳಜೀವನ ಶೈಲಿಯಿಂದ ಜನಪ್ರಿಯರಾಗಿದ್ದ ಲಾಲ ಬಹಾದ್ದೂರ ಶಾಸ್ತ್ರೀ

೧. ಚಳಿಯಿರುವ ಪ್ರದೇಶದಲ್ಲಿ ಹೋಗಲು ಬೆಚ್ಚಗಿರುವ ಬಟ್ಟೆ ಇಲ್ಲದಿರುವುದು ಮತ್ತು ನೆಹರೂರವರು ಅವರಿಗೆ ತಮ್ಮ ಕೋಟು ಕೊಡುವುದು

ಪಂ. ಜವಾಹರಲಾಲ ನೆಹರೂರವರು ಪ್ರಧಾನಮಂತ್ರಿ ಯಾಗಿದ್ದಾಗ, ಅವರ ಮಂತ್ರಿಮಂಡಲದಲ್ಲಿ ಲಾಲಬಹಾದ್ದೂರ ಶಾಸ್ತ್ರೀಯವರು ಗೃಹಸಚಿವರಾಗಿದ್ದರು. ನೆಹರೂರವರು ಅವರಿಗೆ, “ಕಾಶ್ಮೀರದಲ್ಲಿ ಒಂದು ಸಭೆ ಇದೆ, ಅಲ್ಲಿ ನೀವು ಹೋಗಿರಿ,” ಎಂದು ಹೇಳಿದರು. ಶಾಸ್ತ್ರೀಯವರು ತಕ್ಷಣ ‘ಹೋಗುತ್ತೇನೆ’ ಎಂದು ಹೇಳಲಿಲ್ಲ. ಅದಕ್ಕೆ ನೆಹರೂರವರು, ‘ನೀವು ಹೋಗಲು ಯಾಕೆ ಹಿಂಜರಿಯುತ್ತೀರಿ ? ಎಂದು ಕೇಳಿದರು. ಶಾಸ್ತ್ರೀಜಿಯವರು, ತಕ್ಷಣ ಕಾಶ್ಮೀರದಲ್ಲಿ ತುಂಬಾ ಚಳಿ ಇರುತ್ತದೆ. ನನ್ನ ಬಳಿ ಬೆಚ್ಚಗಿರುವ ಬಟ್ಟೆ ಇಲ್ಲ. ಹಾಗಾಗಿ ನನಗೆ ಅನಾರೋಗ್ಯವಾಗುವುದು” ಎಂದು ಹೇಳಿದರು. ಆಗ ನೆಹರೂರವರು ಅವರಿಗೆ ತಮ್ಮ ಬೆಚ್ಚನೆಯ ಕೋಟು ಕೊಟ್ಟರು. ಶಾಸ್ತ್ರೀಜಿಯವರು ಕುಳ್ಳಗಿರುವುದರಿಂದ ಅವರು ಆ ಕೋಟನ್ನು ತಮ್ಮ ಅಳತೆಗೆ ತಕ್ಕಂತೆ ಸರಿಪಡಿಸಿಡಿಕೊಂಡರು. ಇಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಅವರ ಬಳಿ ಬೆಚ್ಚನೆಯ ಬಟ್ಟೆ ಇತ್ಯಾದಿಗಳು ಇರಲಿಲ್ಲ. ಅವರ ಬಳಿ ೨-೩ ಖಾದಿ ಬಟ್ಟೆಗಳಿದ್ದವು. ಅವರು ಅಷ್ಟೇ ಮಿತವ್ಯಯದಿಂದ ಬಳಸುತ್ತಿದ್ದರು. ಮೊದಲಿನ ‘ಯುನೈಟೆಡ್ ಸ್ಟೆಟ್ಸ್ ಆಫ್ ಸೋವಿಯೆತ್ ರಶಿಯಾ’ ದಲ್ಲಿನ ಉಝಬೆಕಿಸ್ತಾನದಲ್ಲಿ ‘ತಾಷ್ಕಂದ ಒಪ್ಪಂದವಾಗಿತ್ತು, ಆ ಸಮಯದಲ್ಲಿ ಅಲ್ಲಿಯೇ ಅವರು ನಿಧನರಾದರು. ಆಗ ಆ ಕೋಟು ಅವರ ಮೈಮೇಲಿತ್ತು. ಇದರಿಂದಾಗಿ ಆ ಕೋಟು ಐತಿಹಾಸಿಕವಾಯಿತು. ಅದನ್ನು ಇಂದೂ ಅವರ ಮನೆಯಲ್ಲಿ ಜೋಪಾನ ಮಾಡಿಡಲಾಗಿದೆ.

೨. ಲಾಲಬಹಾದ್ದೂರ ಶಾಸ್ತ್ರೀಜಿಯವರ ತತ್ತ್ವನಿಷ್ಠೆ

೨ ಅ. ಪ್ರಾಮಾಣಿಕತನ : ಪ್ರಧಾನಮಂತ್ರಿಯಾದ ಮೇಲೆಯೂ ಶಾಸ್ತ್ರೀಜಿಯವರು ಎಂದಿಗೂ ಲಾಲಸೆಯಿಂದ ಅಥವಾ ಭ್ರಷ್ಟಾಚಾರದಿಂದ ಹಣ ಗಳಿಸದೇ ಇದ್ದ ಹಣದಲ್ಲಿಯೇ ಸಂಸಾರ ಮಾಡಿದರು.

೨ ಆ. ಪ್ರಧಾನಮಂತ್ರಿಯಾದ ನಂತರವೂ ಚತುಶ್ಚಕ್ರ ವಾಹನದ ಸಾಲ ತೀರಿಸಲು ಪ್ರಯತ್ನ ಮಾಡುವುದು : ಲಾಲಬಹಾದ್ದೂರ ಶಾಸ್ತ್ರೀಜಿಯವರಲ್ಲಿ ಅನೇಕ ವರ್ಷಗಳ ತನಕ ವರ್ಷ ಚತುಶ್ಚಕ್ರ ವಾಹನವಿರಲಿಲ್ಲ. ಪ್ರಧಾನಮಂತ್ರಿ ಇರುವಾಗ ಅವರು ವಾಹನಕ್ಕಾಗಿ ಸಾಲ ಮಾಡಿದ್ದರು. ಅದರಲ್ಲಿದ್ದ ಸ್ವಲ್ಪ ಸ್ವಲ್ಪ ಹಣದಿಂದ ಅವರು ಸಾಲವನ್ನು ತೀರಿಸುತ್ತಿದ್ದರು. ಅವರ ಮೃತ್ಯುವಿನ ನಂತರವೂ ಸಾಲದ ೩ ಕಂತುಗಳನ್ನು ತೀರಿಸುವುದಿತ್ತು. ಅವರ ಮೃತ್ಯುವಿನ ನಂತರ ಅವರ ಪತ್ನಿಯು ೧ ಕಂತನ್ನು ಹೇಗೇಗೋ ಮಾಡಿ ತೀರಿಸಿದರು. ಕೊನೆಗೆ ಆ ಮೋಟಾರ ಕಂಪನಿಯ ಮಾಲೀಕರೇ ಆ ಸಾಲವನ್ನು ಮನ್ನಾ ಮಾಡಿದರು.