ಸಂಸ್ಕೃತವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! ಇತರ ರಾಜ್ಯಗಳು ಸಹ ಇದನ್ನು ಅನುಸರಿಸಬೇಕು !

ಉತ್ತರಪ್ರದೇಶ ಸರಕಾರದಿಂದ ಸರಕಾರಿ ಪತ್ರಿಕಾಪ್ರಕಟಣೆಯನ್ನು ಸಂಸ್ಕೃತ ಭಾಷೆಯಲ್ಲಿ ನೀಡಲು ಪ್ರಾರಂಭ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಲಕ್ಷ್ಮಣಪುರಿ (ಲಖನೌ) – ಉತ್ತರಪ್ರದೇಶ ಸರಕಾರವು ಹಿಂದಿ, ಆಂಗ್ಲ ಮತ್ತು ಉರ್ದುವಿನೊಂದಿಗೆ ಇನ್ನು ಸಂಸ್ಕೃತ ಭಾಷೆಯಲ್ಲಿಯೂ ಸರಕಾರಿ ಸುತ್ತೋಲೆಯನ್ನು ಹೊರಡಿಸಲು ಪ್ರಾರಂಭಿಸಿದೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ಬಗ್ಗೆ ನಿರ್ದೇಶನವನ್ನು ನೀಡಿದ್ದರು. ಇದರ ನಂತರ ರಾಜ್ಯದ ಆರೋಗ್ಯ ಇಲಾಖೆಯು ಕೊರೋನಾದ ಬಗ್ಗೆ ಪ್ರತಿದಿನದ ಪತ್ರಿಕಾ ಪ್ರಕಟಣೆಗಳನ್ನು ಸಂಸ್ಕೃತ ಭಾಷೆಯಲ್ಲಿ ಪ್ರಕಟಿಸಲು ಪ್ರಾರಂಭಿಸಿತು.

ಮುಖ್ಯಮಂತ್ರಿಯ ಕಾರ್ಯಾಲಯವು ಈ ಬಗ್ಗೆ ಟ್ವೀಟ್ ಮಾಡಿ, ‘ಮುಖ್ಯಮಂತ್ರಿಗಳ ನಿರ್ದೇಶನದಂತೆ ಸರಕಾರದ ಪತ್ರಿಕಾಪ್ರಕಟಣೆಗಳು ಈಗ ಸಂಸ್ಕೃತ ಭಾಷೆಯಲ್ಲಿ ಹೊರಡಿಸಲಾಗುವುದು. ಕೊರೋನಾ ಕುರಿತು ಮುಖ್ಯಮಂತ್ರಿ ಆದಿತ್ಯನಾಥ ಇವರು ನಡೆಸಿದ ಸಭೆಯ ಬಗ್ಗೆ ನಾವು ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಸಂಸ್ಕೃತದಲ್ಲಿ ಪತ್ರಿಕಾ ಪ್ರಕಟಣೆ ಪ್ರಸಾರ ಮಾಡುತ್ತಿದ್ದೇವೆ’

ಸಂಸ್ಕೃತದಲ್ಲಿ ಪತ್ರಿಕಾ ಪ್ರಕಟಣೆಯನ್ನು ಬರೆಯಲು ೨ ಸಂಸ್ಕೃತ ಭಾಷೆ ತಿಳಿದಿರುವವರನ್ನು ರಾಜ್ಯ ಸರಕಾರದಿಂದ ನೇಮಿಸಲಾಗಿದೆ ಎಂದು ಹೇಳಿದ್ದಾರೆ.